ETV Bharat / state

ಮಂಡ್ಯ: ಬೋನಿಗೆ ಬಿದ್ದ ಗಂಡು ಚಿರತೆ, ಜನತೆ ನಿರಾಳ - ಚಿರತೆ ಲೇಟೆಸ್ಟ್ ನ್ಯೂಸ್

ಸಿದ್ದೇಗೌಡನದೊಡ್ಡಿ ಗ್ರಾಮದ ಜನರ ಭೀತಿಗೆ ಕಾರಣವಾಗಿದ್ದ ಚಿರತೆ ಇದೀಗ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ.

forest department captured a leopard in mandya
ಮಂಡ್ಯದಲ್ಲಿ ಚಿರತೆ ಸೆರೆ
author img

By

Published : Oct 8, 2021, 12:09 PM IST

ಮಂಡ್ಯ: ಮದ್ದೂರು ತಾಲೂಕಿನ ಸಿದ್ದೇಗೌಡನದೊಡ್ಡಿ ಗ್ರಾಮದಲ್ಲಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿನಲ್ಲಿ 3 ವರ್ಷ ವಯಸ್ಸಿನ ಗಂಡು ಚಿರತೆ ಸೆರೆಯಾಗಿದೆ. ಇದರಿಂದ ಸಿದ್ದೇಗೌಡನದೊಡ್ಡಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮದಲ್ಲಿ ವಾಸಿಸುವ ಜನರ ಆತಂಕ ದೂರವಾಗಿದೆ.

ಮಂಡ್ಯದಲ್ಲಿ ಚಿರತೆ ಸೆರೆ

ಕಳೆದ ಒಂದೆರಡು ತಿಂಗಳಿಂದ ಈ ಭಾಗದ ಸುತ್ತಮುತ್ತಲ ಗ್ರಾಮದಲ್ಲಿ ಚಿರತೆ ಜಾನುವಾರುಗಳನ್ನು ತಿಂದು ಹಾಕಿ ಜನರಿಗೆ ಉಪಟಳ ನೀಡುತ್ತಿತ್ತು. ಜನರ ದೂರಿನ ಮೇರೆಗೆ ಇಲಾಖೆ ಅಧಿಕಾರಿಗಳು ಕಳೆದ ಎರಡು ದಿನಗಳ ಹಿಂದೆ ಗ್ರಾಮದಲ್ಲಿ ಚಿರತೆ ಸೆರೆಗಾಗಿ ಬೋನು‌ ಇರಿಸಿದ್ದರು. ಇದೀಗ ನಾಯಿ ಹಿಡಿಯಲು ಬಂದ ಚಿರತೆ ಈ ಬೋನಿನಲ್ಲಿ ಸೆರೆಯಾಗಿದೆ.

ಚಿರತೆ ಬೋನಿನಲ್ಲಿ ಸೆರೆಯಾಗಿರುವ ಸುದ್ದಿ ತಿಳಿದು ಸುತ್ತಮುತ್ತಲ ಗ್ರಾಮಸ್ಥರು ಆಗಮಿಸಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಚಿರತೆಯನ್ನು ದೂರದ ಅರಣ್ಯಕ್ಕೆ ಬಿಡಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಗುತ್ತಿಗೆದಾರರ ಮೇಲೆ ಐಟಿ ದಾಳಿ ಅಂತ್ಯ: ದಾಖಲೆಗಳ ಪರಿಶೀಲನೆ, ಮುಂದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.