ಮಂಡ್ಯ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ತಗುಲಿ ಮನೆ ಕಟ್ಟಲು ಬಳಸುವ ಲಕ್ಷಾಂತರ ರೂಪಾಯಿ ಮೌಲ್ಯದ ಮರದ ತುಂಡುಗಳು ಬೆಂಕಿಗಾಹುತಿಯಾಗಿವೆ. ಈ ಘಟನೆ ಪಾಂಡವಪುರ ತಾಲೂಕಿನ ಎಲೆಕೆರೆ ಹ್ಯಾಂಡ್ಪೋಸ್ಟ್ ಬಳಿ ತಡರಾತ್ರಿ ನಡೆದಿದೆ.
ಪಾಂಡವಪುರ ತಾಲೂಕಿನ ಹುಲ್ಕೆರೆಕೊಪ್ಪಲು ನಿವಾಸಿ ಕುಮಾರ್ ಎಂಬುವರಿಗೆ ಸೇರಿದ ಕೆ.ಬಿ.ಟಿಂಬರ್ ಗೋದಾಮಿನಲ್ಲಿ ಈ ಅವಘಡ ನಡೆದಿದೆ. ಪರಿಣಾಮ ಅಪಾರ ಪ್ರಮಾಣದ ತೇಗ, ಬೇವು ಹಾಗೂ ಹೊನ್ನೆ ಮರಗಳು ಭಸ್ಮವಾಗಿವೆ ಎನ್ನಲಾಗಿದೆ.
ಇದನ್ನೂ ಓದಿ : ಕಬಿನಿ ಹಿನ್ನೀರಲ್ಲಿ ಮದ್ಯದ ಬಾಟಲಿ, ಸಿರಿಂಜ್, ಪ್ಲಾಸ್ಟಿಕ್ ರಾಶಿ.. 2 ಟನ್ ತ್ಯಾಜ್ಯ ಸಂಗ್ರಹ!
ತಕ್ಷಣವೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.