ಮಂಡ್ಯ: ವಿಶೇಷಚೇತನರಿಗೆ ಫುಡ್‍ಕಿಟ್ ವಿತರಿಸುವ ಭರದಲ್ಲಿ ಕೋವಿಡ್ ನಿಯಮಾವಳಿ ಗಾಳಿಗೆ ತೂರಿರುವ ಘಟನೆ ನಡೆದಿದೆ. ಕಾಂಗ್ರೆಸ್ ಮುಖಂಡ ಬಿ.ರೇವಣ್ಣ ನೇತೃತ್ವದಲ್ಲಿ ನಡೆದ ಫುಡ್‍ಕಿಟ್ ವಿತರಣೆ ವೇಳೆ ಜನರು ಮುಗಿಬಿದ್ದು, ಕೋವಿಡ್ ನಿಯಮಗಳನ್ನು ಮರೆತಿರುವುದು ಕಂಡುಬಂದಿದೆ.
ವಿಶೇಷಚೇತನರಿಗೆ ಫುಡ್‍ಕಿಟ್ ನೀಡಲು ಪಾಂಡವಪುರ ಪುರಸಭೆಯ ಅಧಿಕಾರಿಗಳ ಬಳಿ ಮೌಕಿಕವಾಗಿ ಅನುಮತಿ ಪಡೆದ ಬಳಿಕ ಪುರಸಭೆ ಎದುರು ಕಿಟ್ ವಿತರಣೆ ಮಾಡಲಾಗಿತ್ತು. ಆದರೆ ರಾತ್ರಿ 8 ಗಂಟೆ ಸುಮಾರಿಗೆ ಪುರಸಭೆ ಅಧಿಕಾರಿಗಳೇ ಪೊಲೀಸರಿಗೆ ದೂರು ನೀಡಿದ್ದಾರೆ. ಫುಡ್‍ಕಿಟ್ ವಿತರಣೆ ವೇಳೆ ಕೋವಿಡ್ ನಿಯಮ ಉಲ್ಲಂಘನೆಯಾಗಿದೆ ಎಂದು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಎಫ್ಐಆರ್ ಸಹ ದಾಖಲಾಗಿದೆ.
ಇದನ್ನೂ ಓದಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಬಸ್ ಸಂಚಾರಕ್ಕೆ ಸಕಲ ಸಿದ್ಧತೆ.. NWKSRTC ಎಂಡಿ ಕೃಷ್ಣ ವಾಜಪೇಯಿ..