ETV Bharat / state

ಮಾವನಿಂದಲೇ ಸೊಸೆ ಮೇಲೆ ಅತ್ಯಾಚಾರ.. ಮನನೊಂದು ಸೊಸೆ ಆತ್ಮಹತ್ಯೆ.. - ಮಾವನಿಂದಲೇ ಅತ್ಯಚಾರ

ಅತ್ಯಾಚಾರವಾದ ಮಾರನೇ ದಿನ ಮನನೊಂದ ಸೊಸೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಬಳಿಕ ಮಾರ್ಗಮಧ್ಯೆ ಹೊಳೆನರಸೀಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು..

father-in-law-raped-daughter-in-law-in-hassan
ಹಾಸನ: ಮಾವನಿಂದಲೇ ಸೊಸೆ ಮೇಲೆ ಅತ್ಯಾಚಾರ...ಮನನೊಂದ ಸೊಸೆ ಆತ್ಮಹತ್ಯೆ
author img

By

Published : Feb 8, 2021, 9:51 PM IST

ಹಾಸನ : ಮಾವನಿಂದಲೇ ಅತ್ಯಾಚಾರಕ್ಕೊಳಗಾಗಿ ಬಳಿಕ ಮನನೊಂದು ಸೊಸೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ನಡೆದಿದೆ.

ಸಂಕ್ರಾಂತಿ ಹಬ್ಬಕ್ಕೆ ತನ್ನ ತವರು ಮನೆಗೆ ಹೊರಟಿದ್ದ ಸೊಸೆಯ ಮೇಲೆ ಮಾವನೇ ಅತ್ಯಾಚಾರ ಎಸಗಿದ್ದ. ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿಯೂ ಆಕೆಗೆ ಬೆದರಿಕೆ ಹಾಕಿದ್ದನಂತೆ.

ಅತ್ಯಾಚಾರವಾದ ಮಾರನೇ ದಿನ ಮನನೊಂದ ಸೊಸೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಬಳಿಕ ಮಾರ್ಗಮಧ್ಯೆ ಹೊಳೆನರಸೀಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.

ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾಳೆ. ಈಕೆಯ ಸಾವಿಗೆ ಮಾವನೇ ಕಾರಣ ಎಂಬ ಹಿನ್ನೆಲೆ ಗಂಡನ ಮನೆಯ ಮುಂದೆಯೇ ಆಕೆಯ ಅಂತ್ಯಸಂಸ್ಕಾರ ಮಾಡಲು ಪೋಷಕರು ಮುಂದಾಗಿದ್ದರು.

ಆದರೆ, ಈ ವೇಳೆ ಎರಡೂ ಕುಟುಂಬದ ನಡುವೆ ವಾಗ್ವಾದಕ್ಕೂ ಕಾರಣವಾಗಿದೆ. ಪೊಲೀಸರ ಮಧ್ಯಸ್ಥಿತಿಕೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಬಳಿಕ ಮನೆ ಹಿಂಭಾದಲ್ಲಿರುವ ಜಮೀನಿನಲ್ಲಿ ನೆರವೇರಿಸಲಾಗಿದೆ. ಇನ್ನು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಅತ್ಯಾಚಾರ; ಯುವಕನ ವಿರುದ್ಧ ದೂರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.