ಮಂಡ್ಯ : ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಯವರಿಗೆ ಅಭಿಮಾನಿಯೋರ್ವರು ಲಕ್ಷ ಲಕ್ಷ ಬೆಲೆ ಬಾಳುವ ಜೋಡೆತ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಜಿಲ್ಲೆಯ ಮದ್ದೂರು ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ನಡೆದ ದನಗಳ ಜಾತ್ರೆ ಉದ್ಘಾಟನೆಗೆ ಕುಮಾರಸ್ವಾಮಿಯವರು ಆಗಮಿಸಿದ್ದರು. ಈ ವೇಳೆ ಕೋಣಸಾಲೆ ಗ್ರಾಮದ ಮಧುಸೂದನ್ ಎಂಬ ಅಭಿಮಾನಿ ಹಳ್ಳಿಕಾರ್ ತಳಿಯ ₹1.70 ಲಕ್ಷ ಮೌಲ್ಯದ ಒಂದು ಜೊತೆ ಎತ್ತುಗಳನ್ನು ಮಾಜಿ ಸಿಎಂಗೆ ಉಡುಗೊರೆಯಾಗಿ ನೀಡಿದ್ದಾರೆ.
![Fan gifted two Oxen to HD Kumaraswamy in Mandya](https://etvbharatimages.akamaized.net/etvbharat/prod-images/14710065_thumb.jpg)
ಅಭಿಮಾನಿ ಪ್ರೀತಿಯಿಂದ ನೀಡಿದ ಉಡುಗೊರೆಯನ್ನು ಸಂತೋಷದಿಂದಲೇ ಸ್ವೀಕರಿಸಿದ ಕುಮಾರಸ್ವಾಮಿಯವರು, ತಮ್ಮ ತೋಟದ ಮನೆಯಲ್ಲಿ ಅವುಗಳನ್ನು ಪೋಷಣೆ ಮಾಡುವುದಾಗಿ ತಿಳಿಸಿದರು.
ಇದನ್ನೂ ಓದಿ: ಪಾವಗಡ ಸರ್ಕಾರಿ ಆಸ್ಪತ್ರೆ ಮೇಲೆ ನಿರ್ಲಕ್ಷ್ಯ ಆರೋಪ-ಕಾರಿನಲ್ಲೇ ಹೆರಿಗೆ : ಸಾರ್ವಜನಿಕರ ಆಕ್ರೋಶ!