ಮಂಡ್ಯ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳಿಗೆ ವಿಷವುಣಿಸಿ ತಾಯಿಯೂ ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ಮದ್ದೂರಿನಲ್ಲಿ ನಡೆದಿದ್ದು, ಓರ್ವ ಮಗಳು ಸಾವಿಗೀಡಾಗಿ, ತಾಯಿ ಸೇರಿದಂತೆ ಮತ್ತೊಬ್ಬ ಮಗಳ ಸ್ಥಿತಿ ಗಂಭೀರವಾಗಿದೆ.
ಮದ್ದೂರು ಪಟ್ಟಣದಲ್ಲಿ ಘಟನೆ ನಡೆದಿದ್ದು, ರಿಯಾ(7) ಸಾವಿಗೀಡಾದ ಮಗಳು ಎನ್ನಲಾಗಿದೆ. ತಾಯಿ ಹಾಜ್ಮಿ ಹಾಗೂ ಮತ್ತೊಬ್ಬ ಪುತ್ರಿ ಅಜೀನ ಸ್ಥಿತಿ ಗಂಭೀರವಾಗಿದೆ.
ಘಟನೆಗೆ ಕೌಟುಂಬಿಕ ಕಲಹ ಕಾರಣ ಎಂದು ಹೇಳಲಾಗುತ್ತಿದ್ದು, ಅಸ್ವಸ್ಥರಿಗೆ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಕುರಿತು ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.