ಮಂಡ್ಯ: ಅಮೆರಿಕದಲ್ಲಿ ಸರ್ಜನ್ ಆಗಿರುವ ಜಿಲ್ಲೆಯ ಡಾ.ವಿವೇಕ್ ಮೂರ್ತಿ ಹಲ್ಲೆಗೆರೆ ಅವರು ತವರೂರಿಗೆ ಬರೋಬ್ಬರಿ 1.40 ಕೋಟಿ ಮೌಲ್ಯದ ವೈದ್ಯಕೀಯ ಸಾಮಗ್ರಿಗಳ ನೆರವು ನೀಡಿದ್ದಾರೆ.
ಡಾ. ವಿವೇಕ್ ಮೂರ್ತಿ ಅವರು ಮೂಲತಃ ಮಂಡ್ಯ ತಾಲೂಕಿನ ಹಲ್ಲೆಗೆರೆ ಗ್ರಾಮದವರಾಗಿದ್ದು, ಪ್ರಸ್ತುತ ಅಮೆರಿಕದಲ್ಲಿ ಜನರಲ್ ಸರ್ಜನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೋವಿಡ್ ಸಂಕಷ್ಟದಲ್ಲಿರುವ ತವರು ಜಿಲ್ಲೆಯನ್ನು ಮರೆಯದೆ ಸಹಾಯ ಮಾಡಿದ್ದಾರೆ.
70 ಆಕ್ಸಿಜನ್ ಸಾಂಧ್ರಕಗಳು, 25 ಡಿಜಿಟಲ್ ಥರ್ಮಾಮೀಟರ್, 2 ಲಕ್ಷ N95 ಮಾಸ್ಕ್, 5 ಸಾವಿರ ಫೇಸ್ ಶೀಲ್ಡ್, 400 ಪೌಡರ್ ರಹಿತ ಗ್ಲೌಸ್ , 50 ಆಕ್ಸಿಜನ್ ಕ್ಯಾನಲ್, 5 ವೋಲ್ವೇಜ್ ಟ್ರಾನ್ಸ್ ಫಾರ್ಮರ್ಗಳನ್ನು ಜಿಲ್ಲಾಡಳಿತಕ್ಕೆ ಒದಗಿಸಲಾಗಿದೆ.
ಇದನ್ನೂ ಓದಿ : ಖಾಸಗಿ ಆಸ್ಪತ್ರೆಗೆ ₹9 ಲಕ್ಷ ಮೌಲ್ಯದ ವೈದ್ಯಕೀಯ ಪರಿಕರಗಳನ್ನು ನೀಡಿದ್ರೂ ಹೆಸರು ಹೇಳದ ಪುಣ್ಯಾತ್ಮ..