ಮಂಡ್ಯ: ಪ್ರಕೃತಿ ವಿಕೋಪದಿಂದ ರೈತರಿಗಾದ ನಷ್ಟಕ್ಕೆ ಎಷ್ಟು ಪರಿಹಾರ ಸಿಗಬಹುದು ನೀವೇ ಊಹಿಸಿ.
ಪ್ರವಾಹದಿಂದಾಗಿ ಜಿಲ್ಲೆಯ ರೈತನೋರ್ವನ ಒಂದು ಎಕರೆ ಬಾಳೆ ತೋಟ ನೀರು ಪಾಲಾಗಿತ್ತು. ಆದರೆ, ಸರ್ಕಾರ ಕೊಟ್ಟಿರುವ ಪರಿಹಾರ ನೋಡಿದರೆ ಅಚ್ಚರಿಯ ಜೊತೆಗೆ ಕೋಪಾನೂ ಬರುವುದರಲ್ಲಿ ಅನುಮಾನವಿಲ್ಲ.

ಹೌದು, ಕೆ.ಆರ್.ಪೇಟೆ ತಾಲೂಕಿನ ವಿಜಯ ಹೊಸಹಳ್ಳಿ ಗ್ರಾಮದ ರೈತರಿಗೆ ಬಾಳೆ ತೋಟ ನಷ್ಟಕ್ಕೆ ತಹಸೀಲ್ದಾರ್ ₹ 1,350 ಪರಿಹಾರದ ಚೆಕ್ ವಿತರಿಸಿ ಎಲ್ಲರನ್ನೂ ದಂಗಾಗುವಂತೆ ಮಾಡಿದ್ದಾರೆ. ವಿಜಯ ಹೊಸಹಳ್ಳಿಯ ರೈತ ಸಿದ್ದಲಿಂಗೇಗೌಡತನ್ನ 2 ಎಕರೆ 20 ಗುಂಟೆಬಾಳೆ ತೋಟ ಪಡೆದ ಪರಿಹಾರದ ಮೊತ್ತ ಇದಾಗಿದೆ. ನಮಗೆ ಇಷ್ಟು, ಇನ್ನು ನೆರೆ ಸಂತ್ರಸ್ತರಿಗೆ ಇನ್ಯಾವ ರೀತಿ ನ್ಯಾಯ ದೊರಕಿಸಿಕೊಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಪರಿಹಾರದ ಮೊತ್ತದ ಚೆಕ್ ನೋಡಿದ ರೈತ, ಆತಂಕಗೊಂಡು ಚೆಕ್ ಅನ್ನು ಅಧಿಕಾರಿಗಳಿಗೆ ವಾಪಸ್ ಮರಳಿಸಿದ್ದಾರೆ. ಸಾಲ ಮಾಡದೇ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಆದರೆ, ಸರ್ಕಾರ ವಿತರಿಸಿರುವ ಪರಿಹಾರ ತುಂಬಾ ಹೆಚ್ಚಾಗಿದೆ. ನೀವೇ ಇಟ್ಟುಕೊಳ್ಳಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಕಿಡಿಕಾರಿದ್ದಾರೆ.