ETV Bharat / state

ಸಿಎಂ ಬೊಮ್ಮಾಯಿ ಆಗಮನ: ಮಂಡ್ಯ ವಿವಿಯ ಆವರಣಗೋಡೆ ಕೆಡವಿದ ಜಿಲ್ಲಾಡಳಿತ - ಈಟಿವಿ ಭಾರತ ಕನ್ನಡ

ಮಂಡ್ಯ ವಿವಿ ಆವರಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದ ಉದ್ಘಾಟನೆಗೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದು,ಅವರ ಸಂಚಾರಕ್ಕೆ ಅನುವು ಮಾಡಲು ವಿವಿ ಆವರಣದ ಗೋಡೆಯನ್ನು ಜಿಲ್ಲಾಡಳಿತ ಕೆಡವಿ ಹಾಕಿದೆ.

demolision-of-campus-wall-of-mandya-university
ಸಿಎಂ ಬೊಮ್ಮಾಯಿ ಆಗಮನ : ಮಂಡ್ಯ ವಿವಿಯ ಆವರಣಗೋಡೆಯನ್ನು ಕೆಡುವಿದ ಜಿಲ್ಲಾಡಳಿತ
author img

By

Published : Aug 11, 2022, 11:04 AM IST

ಮಂಡ್ಯ: ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಮತ್ತು ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯ ಆಗಮಿಸುತ್ತಿದ್ದು, ಅವರ ಸಂಚಾರಕ್ಕೆ ಮಂಡ್ಯ ವಿಶ್ವವಿದ್ಯಾಲಯ ಆವರಣದ ಗೋಡೆ ಕೆಡವಲಾಗಿದೆ. ಮಂಡ್ಯ ಜಿಲ್ಲಾಡಳಿತದ ಈ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಬೊಮ್ಮಾಯಿ ಆಗಮನ : ಮಂಡ್ಯ ವಿವಿಯ ಆವರಣಗೋಡೆಯನ್ನು ಕೆಡುವಿದ ಜಿಲ್ಲಾಡಳಿತ

ಮಂಡ್ಯ ವಿವಿ ಆವರಣದಲ್ಲಿ ಜೀವನೋಪಾಯ ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ಆಯೋಜಿಸಿರುವ ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ ಆಗಮಿಸಲಿದ್ದು, ಈ ಕಾರಣದಿಂದ ಮಂಡ್ಯ ವಿವಿ ಆವರಣದ ಗೋಡೆ ಕೆಡವಲಾಗಿದೆ. ವಿವಿಐಪಿ ಸಂಸ್ಕೃತಿಗೆ ಪದೇ ಪದೆ ಕಾಲೇಜು ಆವರಣವನ್ನು ಕೆಡವಲಾಗಿದ್ದು, ಈ ಹಿಂದೆಯೂ ಹಲವು ಬಾರಿ ಸಿದ್ದರಾಮಯ್ಯ, ಹೆಚ್ಡಿಕೆ ಸಿಎಂ ಆಗಿದ್ದಾಗಲೂ ಆವರಣ ಕೆಡವಲಾಗಿತ್ತು.

ನಗರಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಂಜೀವಿನಿ ಸಾಮರ್ಥ್ಯ- ಜೀವನೋಪಾಯ ವರ್ಷ ಕಾರ್ಯಕ್ರಮದ ಉದ್ಘಾಟನೆ, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.

ಇದನ್ನೂ ಓದಿ : ಕುಟುಂಬ ಸಮೇತ ರಾಯರ ದರ್ಶನ ಪಡೆದ ಮಾಜಿ ಸಿಎಂ ಬಿಎಸ್​ವೈ: ಶ್ರೀಗಳಿಂದ ಸನ್ಮಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.