ಮಂಡ್ಯ: ಜೆಡಿಎಸ್-ಕಾಂಗ್ರೆಸ್ ನಡುವೆ ಯಾವುದೇ ಒಳ ಒಪ್ಪಂದ ಆಗಿಲ್ಲ. ಅವರು ಎಣ್ಣೆ-ಸೀಗೆಕಾಯಿಯಂತಾಗಿದ್ದಾರೆ ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ್ ಟೀಕಿಸಿದ್ರು.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲೇ ಒಪ್ಪಂದವೂ ಇಲ್ಲ, ಒಗ್ಗಟ್ಟೂ ಇಲ್ಲ, ಅವರು ಅತಂತ್ರದಲ್ಲಿದ್ದಾರೆ. ಒಳಗೊಳಗೇ ಕಚ್ಚಾಟವಾಡುತ್ತಿದ್ದಾರೆ. ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವರ ಬಳಿ ಅಭ್ಯರ್ಥಿಯೇ ಇಲ್ಲ ಎಂದು ಹೇಳಿದ್ರು.
ಎಂಟಿಬಿ ಸಾಲದ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ, ನಾಗರಾಜ್ ಅವರು ಹೇಳಿರುವುದು ಸಾಲ ಕೊಟ್ಟಿದ್ದೀನಿ ಅಂತ ಹೇಳಿಲ್ಲ. ಬದಲಾಗಿ ಹಿಂದಿನ ಮುಖ್ಯಮಂತ್ರಿಗಳಿಗೆ ಚೆಕ್ ಕೊಟ್ಟಿದ್ದೀನಿ, ಎಲ್ಲಾ ರೀತಿಯ ಸಹಕಾರ ನೀಡಿದ್ದೀವಿ ಅಂತ ಹೇಳಿದ್ದಾರೆ. ಈ ವಿಚಾರವಾಗಿ ಮಾಜಿ ಸಿಎಂ ಅವರೇ ಉತ್ತರ ಕೊಡಲಿ ಎಂದರು.