ಮಂಡ್ಯ: ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳನ್ನು ವಶಕ್ಕೆ ಪಡೆದ ಪೊಲೀಸರು ಬಸವಗಳನ್ನು ಮರೆಮಾಚಿ ಬರೀ ಎಮ್ಮೆ, ಕರುಗಳನ್ನು ಮಾತ್ರ ವಶಕ್ಕೆ ಪಡೆದ ಹಿನ್ನೆಲೆ ಗೋ ರಕ್ಷಕರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಧರಣಿ ನಡೆಸಿದ್ದಾರೆ.
ನಗರದ ಸಬ್ದರಿಯಾಬಾದ್ ಮೊಹಲ್ಲಾ ಬಡಾವಣೆಯಲ್ಲಿ ಮೂರು ಟೆಂಪೋಗಳಲ್ಲಿ ಅಕ್ರಮವಾಗಿ ದೇವರ ಬಸವಗಳು ಸೇರಿದಂತೆ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸಲು ಸಿದ್ಧತೆ ನಡೆಸಲಾಗಿತ್ತು. ಈ ಬಗ್ಗೆ ಮಾಹಿತಿ ಅರಿತ ಗೋ ರಕ್ಷಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಟೆಂಪೋಗಳನ್ನು ಪರಿಶೀಲನೆ ನಡೆಸಿ ವಶಕ್ಕೆ ಪಡೆದರು.
ಪೊಲೀಸರು ದೇವರ ಬಸವಗಳನ್ನು ಬಿಟ್ಟು ಬೇರೆಲ್ಲ ಜಾನುವಾರುಗಳ ಸಹಿತ ಮೂರು ಟೆಂಪೋಗಳನ್ನೂ ವಶಕ್ಕೆ ಪಡೆದರು. ಗೋರಕ್ಷಕರು ಠಾಣೆ ಬಳಿ ಬಂದು ಜಾನುವಾರುಗಳನ್ನು ಪರಿಶೀಲನೆ ನಡೆಸಿದಾಗ ದೇವರ ಬಸವಗಳು ನಾಪತ್ತೆಯಾಗಿದ್ದವು. ಈ ಬಗ್ಗೆ ಪೊಲೀಸರಿಗೆ ಕೇಳಿದರೆ ಇರಲಿಲ್ಲ, ಗೊತ್ತಿಲ್ಲ ಎಂಬ ಉತ್ತರ ನೀಡಿದ್ದರು. ಇದರಿಂದ ಕುಪಿತಗೊಂಡ ಗೋ ರಕ್ಷಕರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಧರಣಿ ನಡೆಸಿ ತಕ್ಷಣ ನಾಪತ್ತೆಯಾಗಿರುವ ದೇವರ ಬಸವಗಳನ್ನು ಹುಡುಕಿ ವಶಕ್ಕೆ ಪಡೆಯುವಂತೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು ಟೆಂಪೋಗೆ ಇಲ್ಲಿರುವ ಜಾನುವಾರುಗಳೆಲ್ಲವನ್ನೂ ವಶಕ್ಕೆ ಪಡೆಯಲಾಗಿದೆ. ಪ್ರತಿಯೊಂದನ್ನೂ ವಿಡಿಯೋ ಚಿತ್ರೀಕರಣ ಮಾಡಿಸಲಾಗುತ್ತದೆ. ಇದರಲ್ಲಿ ಯಾವುದೇ ಅನುಮಾನವೂ ಬೇಡ ಎಂದು ಪ್ರತಿಭಟನಾಕಾರರ ಮನವೊಲಿಸಿದರು.
ಓದಿ;ಎಂಟಿಬಿ, ಶಂಕರ್, ಮುನಿರತ್ನಗೆ ಸಚಿವ ಸ್ಥಾನ ನೀಡಲು ಒಪ್ಪಿಗೆ ದೊರೆತಿದೆ: ಸಚಿವ ಭೈರತಿ ಬಸವರಾಜ್
ಇನ್ನು ಈ ಘಟನೆ ಸಂಬಂಧ ಮುಡಾ ಮಾಜಿ ಮುನಾವರ್ ಖಾನ್ ಸೇರಿದಂತೆ ಮೂವರ ವಿರುದ್ಧ ಪೂರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.