ಮಂಡ್ಯ: ಇಲ್ಲಿನ ದಂಪತಿಯ ಮಗು ಖಾಯಿಲೆಯಿಂದ ಬಳಲುತ್ತಿದ್ದು, ತನ್ನ ಪುಟ್ಟ ಕಂದಮ್ಮನನ್ನು ಉಳಿಸಿಕೊಳ್ಳಲು ದಂಪತಿಗಳು ದಾನಿಗಳ ಸಹಾಯ ಹಸ್ತಕ್ಕಾಗಿ ವಿನಂತಿ ಮಾಡಿಕೊಂಡಿದ್ದಾರೆ.
ಇಲ್ಲಿನ ನಿವಾಸಿಯಾಗಿರುವ ಸುಧಾಕರ್ ಮತ್ತು ಭವಾನಿ ದಂಪತಿ ಪುತ್ರಿ ಮಾನ್ವಿ ಬಿಟಾ ತಲಸೀಮಿಯಾ ಎಂಬ ಖಾಯಿಲೆಯಿಂದ ಬಳುತ್ತಿದ್ದಾಳೆ. ಮೂಲತಃ ಸುಧಾಕರ್ ಕ್ಯಾಬ್ ಚಾಲಕನಾಗಿದ್ದು, ಮಗಳ ಚಿಕಿತ್ಸೆಗಾಗಿ ಇದ್ದ ಕಾರನ್ನು ಮಾರಾಟ ಮಾಡಿದ್ದಾರೆ. ಆದರೂ ಹಣದ ಅಭಾವ ಉಂಟಾಗಿದ್ದು, ಹಣಕ್ಕಾಗಿ ಪರದಾಡುತ್ತಿದ್ದಾರೆ.
ಸದ್ಯ ವೈದ್ಯರು ಚಿಕಿತ್ಸೆಗೆ ಅಂದಾಜು 30 ಲಕ್ಷ ರೂ. ವ್ಯಯವಾಗಲಿದೆಯಂತೆ. ಚಿಕಿತ್ಸೆಗೆ ಸರ್ಕಾರದಿಂದ 5 ಲಕ್ಷ ಬರುವ ನಿರೀಕ್ಷೆಯಿದ್ದು, ಉಳಿದ ಹಣಕ್ಕಾಗಿ ಕುಟುಂಬ ದಾನಿಗಳಲ್ಲಿ ಹಣ ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ.
ಬ್ಯಾಂಕ್ ವಿವರ:
ಭಾರತೀಯ ಸ್ಟೇಟ್ ಬ್ಯಾಂಕ್ ಅಕೌಂಟ್ ನಂಬರ್ 39024499683,
ಐಎಫ್ಎಸ್ ಸಿ ಕೋಡ್ SBIN0040326