ETV Bharat / state

ಮಂಡ್ಯದಲ್ಲಿ ಮತಾಂತರಕ್ಕೆ ಯತ್ನ ಆರೋಪ: ಐವರು ಯುವಕರ ಬಂಧನ - ಈಟಿವಿ ಭಾರತ ಕನ್ನಡ

ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸುತ್ತಿದ್ದ ಆರೋಪದಲ್ಲಿ ಐವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

Etv conversion-to-christianity-in-mandyaBharat
ಮಂಡ್ಯದಲ್ಲಿ ಮತಾಂತರಕ್ಕೆ ಯತ್ನ ಆರೋಪ : ಐವರು ಯುವಕರ ಬಂಧನ
author img

By

Published : Nov 11, 2022, 4:36 PM IST

Updated : Nov 11, 2022, 5:04 PM IST

ಮಂಡ್ಯ: ಮತಾಂತರಕ್ಕೆ ಯತ್ನಿಸಿದ ಆರೋಪದಲ್ಲಿ ಐವರು ಯುವಕರನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಎಂ.ದೊಡ್ಡಿ ಸಮೀಪದ ಅಣ್ಣೂರು ಎಂಬಲ್ಲಿ ನಡೆದಿದೆ. ಬಂಧಿತರನ್ನು ಕುಮಾರ್ ನಾಯಕ್, ಸಮಂತ್, ವಿಜಯ್ ಗೌಡ, ಹೇಮಂತ್ ಕುಮಾರ್ ಸಂದೀಪ್ ಎಂದು ಗುರುತಿಸಲಾಗಿದೆ.

ಮಂಡ್ಯದಲ್ಲಿ ಮತಾಂತರಕ್ಕೆ ಯತ್ನ ಆರೋಪ : ಐವರು ಯುವಕರ ಬಂಧನ

ಈ ಯುವಕರು ಚರ್ಚ್​ ಮುಂದೆ ನಿಂತು ಕರಪತ್ರ ಹಂಚುವ ಮೂಲಕ ಕ್ರೈಸ್ತ ಧರ್ಮಕ್ಕೆ ಮತಾಂತರಕ್ಕೆ ಒತ್ತಾಯಿಸುತ್ತಿದ್ದರು. ಅಲ್ಲದೇ ಮೆಣಸಕೆರೆ ಗ್ರಾಮದ ಶಿವರಾಮ ಎಂಬವರಿಗೆ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, ಯುವಕರ ವಿರುದ್ದ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ವಿಚಾರಣೆ ವೇಳೆ ಮತಾಂತರಕ್ಕೆ ಯತ್ನಿಸಿರುವ ಬಗ್ಗೆ ಯುವಕರು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ : ಮಂಡ್ಯ: ಮುತ್ತೆತ್ತರಾಯನ ದರ್ಶನ ಪಡೆದ ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್​ಕುಮಾರ್

Last Updated : Nov 11, 2022, 5:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.