ETV Bharat / state

ಮದ್ದೂರು ಕ್ಷೇತ್ರಕ್ಕೆ ಹೊಸ ಮುಖಕ್ಕೆ ಮಣೆ, ಮೂಲ ಕಾಂಗ್ರೆಸ್ಸಿಗರಿಂದ ಪ್ರತಿಭಟನೆ

ಮದ್ದೂರು ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಸ್​.​ಎಂ. ಕೃಷ್ಣ ಕುಟುಂಬದ ಬದಲಿಗೆ ಉದ್ಯಮಿ ಎಂಕೆ ಉದಯ್ ಅವರಿಗೆ ಕಾಂಗ್ರೆಸ್​​ ಟಿಕೆಟ್​ ನೀಡಿದೆ.

congress-second-list-new-candidate-for-maddur-constituency
ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ: ಮದ್ದೂರು ಕ್ಷೇತ್ರಕ್ಕೆ ಹೊಸ ಮುಖಕ್ಕೆ ಮಣೆ
author img

By

Published : Apr 15, 2023, 8:48 PM IST

Updated : Apr 15, 2023, 10:35 PM IST

ಮದ್ದೂರು ಕ್ಷೇತ್ರಕ್ಕೆ ಹೊಸ ಮುಖಕ್ಕೆ ಮಣೆ, ಮೂಲ ಕಾಂಗ್ರೆಸ್ಸಿಗರಿಂದ ಪ್ರತಿಭಟನೆ

ಮಂಡ್ಯ: ಮಂಡ್ಯ ಜಿಲ್ಲೆಯ ತೀವ್ರ ಕೂತಹಲ ಮೂಡಿಸಿದ್ದ ಮದ್ದೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್​​ ಟಿಕಟ್ ಇಂದು ಘೋಷಣೆಯಾಗಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷ ಸೇರಿದ್ದ ಉದ್ಯಮಿ ಎಂಕೆ ಉದಯ್ ಅವರಿಗೆ ಕಾಂಗ್ರೆಸ್​​ ಟಿಕೆಟ್ ನೀಡಿದೆ. ಎಸ್ಎಂ ಕೃಷ್ಣ ಸಹೋದರನ ಪುತ್ರ ಗುರುಚರಣ್​ಗೆ ಟಿಕೆಟ್ ಕೈ ತಪ್ಪಿದೆ.

ಮದ್ದೂರು ಕ್ಷೇತ್ರದ ಟಿಕೆಟ್​​ಗಾಗಿ ಎಸ್ ಗುರುಚರಣ್ ಮತ್ತು ಉದ್ಯಮಿ ಎಂಕೆ ಉದಯ್ ನಡುವೆ ಬಾರಿ ಪೈಪೋಟಿ ಏರ್ಪಟ್ಟಿತ್ತು. ಗುರುಚರಣ್ ಅವರು ಟಿಕೆಟ್​​ಗಾಗಿ ಬೆಂಬಲಿಗರ ಸಭೆ ನಡೆಸಿ ದಂಬಾಲು ಬಿದ್ದಿದ್ದರು. ಆದರೂ ಕಾಂಗ್ರೆಸ್​​ನ ವರಿಷ್ಠರು ಮದ್ದೂರು ಕ್ಷೇತ್ರದಲ್ಲಿ ಹೊಸ ಮುಖಕ್ಕೆ ಮಣೆ ಹಾಕಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದ ಉದ್ಯಮಿ ಕದಲೂರು ಉದಯ್​ಗೆ ಡಿ.ಕೆ. ಶಿವಕುಮಾರ್ ಬಲದಿಂದ ಉದಯ್ ಟಿಕೆಟ್ ಪಡೆದಿದ್ದಾರೆ. ‌

ಡಿಕೆಶಿ ವಿರುದ್ಧ ಸಿಡಿದೆದ್ದ ಕಾರ್ಯಕರ್ತರು: ಮದ್ದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಘೋಷಣೆ ಬೆನ್ನಲ್ಲೆ ಕಾಂಗ್ರೆಸ್ ಕಾರ್ಯಕರ್ತರು ಮದ್ದೂರು ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆ ತಡೆದು ಗುರುಚರಣ್​ರವರಿಗೆ ಟಿಕೆಟ್ ನೀಡದೆ ಬೇರೆಯವರಿಗೆ ಟಿಕೆಟ್ ಮಾರಾಟ ಮಾಡಿರುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾಂಗ್ರೆಸ್​ ಕಾರ್ಯಕರ್ತರು ಆರೋಪಿಸಿ ಪ್ರತಿಭಟನೆ ನಡೆಸಿದರು. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಹಾಕಿದ್ದ ಪಕ್ಷದ ಫ್ಲೆಕ್ಸ್​​​ಗಳನ್ನು ಹರಿದು, ಡಿಕೆ ಶಿವಕುಮಾರ್ ಭಾವಚಿತ್ರಕ್ಕೆ ಕಪ್ಪು ಮಸಿ ಬಳಿದು, ಬೆಂಕಿ ಹಾಕುವ ಮೂಲಕ ಆಕ್ರೋಶ ಹೊರಹಾಕಿದರು.

ಒಂದು ವರ್ಷದ ಹಿಂದೆಯೇ ಗುರುಚರಣ್ ಅವರಿಗೆ ಕಾಂಗ್ರೆಸ್ ಟಿಕೆಟ್ ಎಂದು ಘೋಷಣೆ ಮಾಡಿ, ಇದೀಗ ಕಾಂಗ್ರೆಸ್ ಟಿಕೆಟ್ ಅನ್ನು ಅಧಿಕ ಹಣಕ್ಕೆ ಮಾರಾಟ ಮಾಡಿರುವುದು ನಿಜಕ್ಕೂ ಅವಮಾನಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ಈ ಕುರಿತು ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ ಸಂದರ್ಶ ಮಾತನಾಡಿ, "ಗುರುಚರಣ್ ಅವರು ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣರವರ ಸಹೋದರನ ಪುತ್ರನಾಗಿದ್ದು, ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇವರಿಗೆ ಟಿಕೆಟ್ ನೀಡದೆ ಬೆನ್ನಿಗೆ ಚೂರಿ ಹಾಕುವ ಮೂಲಕ ನಿಷ್ಠಾವಂತ ಕಾಂಗ್ರೆಸ್​​ ಕಾರ್ಯಕರ್ತರಿಗೆ ಅನ್ಯಾಯವೆಸಗಿದ್ದಾರೆ. ಈ ರೀತಿ ಆದರೆ ಕಾಂಗ್ರೆಸ್ ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ನಿರ್ನಾಮವಾಗಲಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್ಎಂ ಕೃಷ್ಣ ಅವರಿಗೆ ಗುರು ದ್ರೋಹ: ಗುರುಚರಣ್ ಅವರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರಿಗೆ ಗುರು ದ್ರೋಹ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಪಿಸಿಸಿ ಸದಸ್ಯ ಗುರುಚರಣ್ ಅಧ್ಯಕ್ಷತೆಯಲ್ಲಿ ಸಭೆ ಕರೆದು ಮುಂದಿನ ತೀರ್ಮಾನದ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಮುಖಂಡರಾದ ಅಪ್ಪುಗೌಡ, ರಾಘವ, ಗೋಪಿ, ಅರುಣ್, ರಾಘು, ರವಿ, ಕುಮಾರ್, ಪಾರ್ಥ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ಸೋಮಣ್ಣ ಮತಬೇಟೆ ಶುರು; ವಸತಿ ಸಚಿವರಿಗೆ ಬೆನ್ನೆಲುಬಾಗಿ ನಿಂತ ರಾಜ್ಯ ನಾಯಕರು

Last Updated : Apr 15, 2023, 10:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.