ETV Bharat / state

ನೀತಿ ಸಂಹಿತೆ ಉಲ್ಲಂಘನೆ: ಚೆಕ್​ಪೋಸ್ಟ್​ನಲ್ಲಿ ತಡೆದರೂ ಕಾರು ನಿಲ್ಲಿಸದೇ ತೆರಳಿದ ಗೃಹ ಸಚಿವ - ಬಸವರಾಜ ಬೊಮ್ಮಾಯಿ ಇತ್ತೀಚಿನ ಸುದ್ದಿ

ಉಪ ಚುನಾವಣೆಯ ನಿಯಮವನ್ನು ಗೃಹ ಸಚಿವರೇ ಮುರಿದ ಘಟನೆ ಮಂಡ್ಯ ಜಿಲ್ಲೆಯ ಚೆಕ್ ಪೋಸ್ಟ್‌ನಲ್ಲಿ ನಡೆದಿದೆ.

ಗೃಹ ಸಚಿವರಿಂದ ನೀತಿ ಸಂಹಿತೆ ಉಲ್ಲಂಘನೆ..?
author img

By

Published : Nov 20, 2019, 12:04 PM IST

Updated : Nov 21, 2019, 11:05 AM IST

ಮಂಡ್ಯ: ಉಪ ಚುನಾವಣೆ ಜಾರಿಯಾಗಿರುವ ಕ್ಷೇತ್ರಗಳಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಚೆಕ್​​ಪೋಸ್ಟ್​ಗಳಲ್ಲಿ ಪ್ರತಿ ವಾಹನಗಳ ತಪಾಸಣೆ ನಡೆಸಿಯೇ ಮುಂದೆ ಕಳುಹಿಸಲಾಗುತ್ತಿದೆ.

ಆದರೆ ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಗೃಹ ಸಚಿವರ ಕಾರನ್ನು ಮಂಡ್ಯ ಸಮೀಪದ ಹನಕೆರೆ ಬಳಿ ತಪಾಸಣೆಗೆ ಅಧಿಕಾರಿಗಳು ಕೈ ಒಡ್ಡಿ ನಿಲ್ಲಿಸಲು ಯತ್ನಿಸಿದರೂ ನಿಲ್ಲಿಸದೇ ತೆರಳಿದ್ದಾರೆ. ಈ ಮೂಲಕ ಗೃಹ ಸಚಿವರೇ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪ ಕೇಳಿ ಬಂದಿದೆ.

ಗೃಹ ಸಚಿವರಿಂದ ನೀತಿ ಸಂಹಿತೆ ಉಲ್ಲಂಘನೆ..?

ಕಾರನ್ನು ನಿಲ್ಲಿಸದೇ ತೆರಳಿದ ಎಕ್ಸ್‌ಕ್ಲ್ಯೂಸಿವ್ ವಿಡಿಯೋ ಈ ಟಿವಿ ಭಾರತ್​ಗೆ ಲಭ್ಯವಾಗಿದೆ. ಇಂದು ಬೆಳಗ್ಗೆ ಸುಮಾರು 10.40ರ ಸಮಯದಲ್ಲಿ ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಕಾರಿನ ತಪಾಸಣೆಗಾಗಿ ಚೆಕ್‌ಪೋಸ್ಟ್ ಅಧಿಕಾರಿಗಳು ಕೈ ಒಡ್ಡಿದ್ದಾರೆ. ಆದರೆ ಕಾರು ನಿಲ್ಲಿಸದೇ ತೆರಳಿದ ಘಟನೆ ನಡೆದಿದೆ.

Intro:ಮಂಡ್ಯ: ಉಪ ಚುನಾವಣೆಯ ನಿಯಮವನ್ನು ಗೃಹ ಸಚಿವರೇ ಮುರಿದ ಘಟನೆ ಜಿಲ್ಲೆಯ ಚೆಕ್ ಪೋಸ್ಟ್‌ನಲ್ಲಿ ನಡೆದಿದೆ. ಮೈಸೂರು ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕಾರು ತಪಾಷಣೆಗೆ ಅಧಿಕಾರಿಗಳು ಕೈ ಒಡ್ಡಿದರೂ ಕಾರನ್ನು ನಿಲ್ಲಿಸದೇ ತೆರಳಿದ ಎಕ್ಸ್‌ಕ್ಲ್ಯೂಸಿವ್ ವಿಡಿಯೋ ಇಲ್ಲಿದೆ ನೋಡಿ.
ಮಂಡ್ಯ ಸಮೀಪದ ಹನಕೆರೆ ಬಳಿ ಚುನಾವಣಾ ಚೆಕ್‌ಪೋಸ್ಟ್ ತೆರೆಯಲಾಗಿದ್ದು, ಕಾರುಗಳ ತಪಾಷಣೆ ಮಾಡಿ ಬಿಡಲಾಗುತ್ತಿದೆ. ಇಂದು ಬೆಳಗ್ಗೆ ಸುಮಾರು 10.40ರ ಸಮಯದಲ್ಲಿ ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಕಾರಿನ ತಪಾಷಣೆಗಾಗಿ ಚೆಕ್‌ಪೋಸ್ಟ್ ಅಧಿಕಾರಿಗಳು ಕೈ ಒಡ್ಡಿದರು ಕಾರು ನಿಲ್ಲಿಸದೇ ತೆರಳಿದ ಘಟನೆ ನಡೆದಿದೆ.
ಅಧಿಕಾರಿಗಳ ಸೂಚನೆ ಮೇರೆಗೆ ಪೊಲೀಸ್ ಸಿಬ್ಬಂದಿ ಕಾರನ್ನು ತಡೆಯಲು ಮುಂದಾದಾಗ ಕಾರು ನಿಲ್ಲಿಸದೇ ಸಚಿವರ ಚಾಲಕ ತೆರಳಿದ್ದಾರೆ. ಈ ಘಟನೆ ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.Body:ಯತೀಶ್ ಬಾಬುConclusion:
Last Updated : Nov 21, 2019, 11:05 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.