ETV Bharat / state

ಆಹಾರ ಅರಸಿ ಬೃಂದಾವನಕ್ಕೆ ಬಂದ ಹೆಬ್ಬಾವು.. ನೋಡಿದವರ ಮೈರೋಮ ನೆಟ್ಟಗಾದವು.. - undefined

ಇಂದು ಆಹಾರ ಅರಸಿ ಕೆಆರ್‌ಎಸ್‌ನ ಬೃಂದಾವನದಲ್ಲಿ ಸುಮಾರು 10 ಅಡಿ ಉದ್ದದ ಹೆಬ್ಬಾವೊಂದು ಕಂಡು ಬಂದಿದ್ದು, ಇದನ್ನು ಹಿಡಿದು ಸುರಕ್ಷಿತವಾಗಿ ಉರಗ ತಜ್ಞ ಅರಣ್ಯಕ್ಕೆ ಬಿಟ್ಟಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್​ನಲ್ಲಿ ನಡೆದಿದೆ.

Mandya
author img

By

Published : Jul 24, 2019, 4:41 PM IST

ಮಂಡ್ಯ: ಆಹಾರ ಅರಸಿ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ನ ಬೃಂದಾವನಕ್ಕೆ ಬಂದಿದ್ದ ಸುಮಾರು 10ಅಡಿ ಉದ್ದದ ಹೆಬ್ಬಾವೊಂದನ್ನು ಯುವಕರ ತಂಡ ಹಿಡಿದು ಅರಣ್ಯಕ್ಕೆ ಬಿಟ್ಟಿದೆ.

ಕೆಆರ್‌ಎಸ್‌ನ ಬೃಂದಾವನದಲ್ಲಿ ಕಂಡು ಬಂದ ಹೆಬ್ಬಾವನ್ನು ರಕ್ಷಿಸಿದ ಉರಗ ತಜ್ಞ

ಇಂದು ಬೆಳಗ್ಗೆ ಆಹಾರ ಅರಸಿ ಹೆಬ್ಬಾವೊಂದು ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ನ ಬೃಂದಾವನಕ್ಕೆ ಬಂದಿತ್ತು. ಇದನ್ನು ಕಂಡ ಯುವಕರು ಉರಗ ತಜ್ಞ ದೀಪುರವರಿಗೆ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ದೀಪು ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಈ ಹಾವು ಸುಮಾರು 10 ಅಡಿ ಉದ್ದವಿದ್ದು, 30 ಕೆಜಿ ತೂಕವಿತ್ತು. ಹೆಬ್ಬಾವನ್ನು ಹಿಡಿದು ಸಂರಕ್ಷಣೆ ಮಾಡಿದ ಉರಗ ತಜ್ಞ ದೀಪು ಅವರಿಗೆ ಪ್ರವಾಸಿಗರು ಅಭಿನಂದನೆ ಸಲ್ಲಿಸಿದರು.

Intro:ಮಂಡ್ಯ: ಪ್ರಸಿದ್ಧ ಕೆ.ಆರ್.ಎಸ್‌ಗೆ ಅಪರೂಪದ ಅತಿಥಿ ಆಗಮಿಸಿದ್ದರು‌. ಪ್ರವಾಸಿಗರು ಅವರನ್ನು ನೋಡಲು ಒಂದುಕಡೆ ಭಯ, ಮತ್ತೊಂದು ಕಡೆ ಕುತೂಹಲದಿಂದ ಮುಂದೆ ಬರುತ್ತಿದ್ದರು. ಕೊನೆಗೆ ಯುವಕರ ತಂಡ ಅತಿಥಿಯಾಗಿ ಬಂದವರನ್ನು ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟರು.
ಹೌದು, ಇಂದು ಬೆಳಗ್ಗೆ ಆಹಾರ ಹುಡುಕಿಕೊಂಡು ಬಂದ 10 ಅಡಿ ಉದ್ದದ ಹೆಬ್ಬಾವೊಂದು ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್‌ನ ಬೃಂದಾವನಕ್ಕೆ ಬಂದಿತ್ತು. ಅದನ್ನು ಯುವಕರು ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟ ಘಟನೆ ನಡೆದಿದೆ. ಕೆ.ಆರ್.ಎಸ್. ನಿವಾಸಿ ಸ್ನೇಕ್ ದೀಪು ರಕ್ಷಣೆ ಮಾಡಿ ಕಾಡಿಗೆ ಬಿಟ್ಟರು. ಸುಮಾರು 10 ಅಡಿ ಇದ್ದ ಒಂದುವರೆ ವರ್ಷದ ಹೆಬ್ಬಾವು 30 ಕೆ.ಜಿಯಷ್ಟು ತೂಕವಿತ್ತು.‌ ಬೃಂದಾವನಕ್ಕೆ ಬಂದ ಪ್ರವಾಸಿಗರು ಅದನ್ನು ನೋಡಿ ಹಾವು ಹಿಡಿದ ಉರಗ ತಜ್ಞ ದೀಪು ಅವರಿಗೆ ಅಭಿನಂದಿಸಿದರು‌.Body:ಬೈಟ್: ಸ್ನೇಕ್ ದೀಪು, ರಕ್ಷಣೆ ಮಾಡಿದವರುConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.