ETV Bharat / state

ವಿದ್ಯಾರ್ಥಿನಿಯ ತಾಳಿ ಬಿಚ್ಚಿಸಿ ಪರೀಕ್ಷೆಗೆ ಕಳಿಸಿದ ಪೋಷಕರು : ಬೆಳಕಿಗೆ ಬಂದ ಬಾಲ್ಯವಿವಾಹ!

ಮನೆಯಲ್ಲೇ ಗುಟ್ಟಾಗಿ ಎಸ್​ಎಸ್​ಎಲ್​ಸಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಗೆ ವಿವಾಹ ಮಾಡಲಾಗಿದ್ದು, ಆಕೆಯ ತಾಳಿ ಬಿಚ್ಚಿಸಿ ಪರೀಕ್ಷೆಗೆ ಕಳುಹಿಸಿದ್ದು, ಈ ವೇಳೆ ಬಾಲ್ಯ ವಿವಾಹ ಬೆಳಕಿಗೆ ಬಂದಿದ್ದು ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ..

child-marriage-in-mandya-officers-rescued-sslc-girl-student
ವಿದ್ಯಾರ್ಥಿನಿಯ ತಾಳಿ ಬಿಚ್ಚಿಸಿ ಪರೀಕ್ಷೆಗೆ ಕಳಿಸಿದ ಪೋಷಕರು: ಬೆಳಕಿಗೆ ಬಂದ ಬಾಲ್ಯವಿವಾಹ!
author img

By

Published : Apr 1, 2022, 1:33 PM IST

ಮಂಡ್ಯ : ಬಾಲ್ಯ ವಿವಾಹ ಬಳಿಕ ತಾಳಿ ಬಿಚ್ಚಿಸಿ ವಿದ್ಯಾರ್ಥಿನಿಯನ್ನು ಪರೀಕ್ಷೆಗೆ ಕಳುಹಿಸಿದ ಘಟನೆ ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಮಾರ್ಚ್ 27ರಂದು ಮನೆಯಲ್ಲೇ ಗುಟ್ಟಾಗಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿಗೆ ಕೆಆರ್‌ಪೇಟೆ ತಾಲೂಕಿನ ಯುವಕನೊಂದಿಗೆ ಮದುವೆ ನಡೆದಿದೆ.

ಮಾರ್ಚ್​​ 28ರಂದು ಬಾಲಕಿಯ ಪೋಷಕರು ತಾಳಿ, ಕಾಲುಂಗುರ ಬಿಚ್ಚಿಸಿಕೊಂಡು ಪರೀಕ್ಷೆ ಬರೆಯಲು ಕಳುಹಿಸಿದ್ದರು. ಪರೀಕ್ಷೆ ಬರೆಯಲು ಹೋದಾಗ ವಿದ್ಯಾರ್ಥಿನಿ ಸ್ನೇಹಿತೆ ಬಳಿ ಮದುವೆ ಬಗ್ಗೆ ಹೇಳಿಕೊಂಡಿದ್ದಳು. ಮಾಹಿತಿ ಬಹಿರಂಗಗೊಂಡ ಬೆನ್ನಲ್ಲೇ ಅಧಿಕಾರಿಗಳು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಬಾಲಕಿ ಮಂಡ್ಯದ ಬಾಲ ಮಂದಿರದಲ್ಲಿದ್ದಾಳೆ.

ಬಾಲ್ಯ ವಿವಾಹ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ದೂರು ನೀಡಲಾಗಿದೆ. ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಂಡ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಮದುವೆ ನಿಶ್ಚಯವಾಗಿದ್ದಾಗಲೇ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೆಂದು ತಿಳಿದು ಬಂದಿದೆ.

ಬಾಲ್ಯ ವಿವಾಹದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಮನೆಗೆ ಭೇಟಿ ನೀಡಿ ಅಧಿಕಾರಿಗಳು ವಾರ್ನಿಂಗ್ ನೀಡಿದ್ದರು. ಮಾರ್ಚ್ 18 ಮತ್ತು 25ರಂದು ಅಧಿಕಾರಿಗಳು ಬಾಲಕಿಯ ಮನೆಗೆ ಭೇಟಿ ನೀಡಿದ್ದರು. ಆದರೆ, ಅಧಿಕಾರಿಗಳ ಎಚ್ಚರಿಕೆಗೂ ಬಗ್ಗದ ವಿದ್ಯಾರ್ಥಿನಿಯರ ಪೋಷಕರು ಮಾರ್ಚ್​ 27ರಂದು ರಹಸ್ಯವಾಗಿ ವಿವಾಹ ಮಾಡಿದ್ದಾರೆ.

ಇದನ್ನೂ ಓದಿ: ಒಬ್ಬ ವಿದ್ಯಾರ್ಥಿಯ ಪರೀಕ್ಷೆಗಾಗಿ 10ಕ್ಕೂ ಹೆಚ್ಚು ಸಿಬ್ಬಂದಿ ಕಾದು ಕುಳಿತಿದ್ದು ಕೊನೆಗೂ ವ್ಯರ್ಥ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.