ಮಂಡ್ಯ: ವಿದ್ಯುತ್ ಬಿಲ್ ಪಾವತಿ ಮಾಡಲು ಒಂದು ದಿನ ತಡವಾಗಿದ್ದಕ್ಕೆ ಕೋಳಿಗಳನ್ನು ಪೌಲ್ಟ್ರಿ ಫಾರಂ ಕೋಳಿಗಳನ್ನು ಬಲಿ ತೆಗೆದುಕೊಂಡ ಘಟನೆ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸತೀಶ್ ಎಂಬುವವರಿಗೆ ಸೇರಿದ ಪೌಲ್ಟ್ರಿ ಫಾರಂ ವಿದ್ಯುತ್ ಕಡಿತಗೊಂಡಿದ್ದಕ್ಕೆ 50ಕ್ಕೂ ಹೆಚ್ಚು ಕೋಳಿಗಳು ಸಾವಿಗೀಡಾಗಿದ್ದು, ಹಲವು ಕೋಳಿಗಳು ಸಾಯುವ ಸಾಧ್ಯತೆ ಹೆಚ್ಚಿದೆ.
ಲಕ್ಷಾಂತರ ರೂಪಾಯಿ ಸಾಲ ಮಾಡಿ ಫಾರಂ ಹಾಕಿದ್ದ ಸತೀಶ್ ನ್ಯಾಯ ದೊರಕಿಸಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ವಿದ್ಯುತ್ ಕಡಿತಗೊಂಡಿದ್ದರಿಂದ ಸಮರ್ಪಕ ಶಾಖ ಹಾಗೂ ನೀರು ಪೂರೈಕೆಯಾಗದೇ ಕೋಳಿಗಳು ಸತ್ತಿವೆ. ಫಾರಂನಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಕೋಳಿಗಳು ಇದ್ದು, ಇವುಗಳಲ್ಲಿ ಅರ್ಧಕ್ಕೂ ಹೆಚ್ಚು ಕೋಳಿಗಳು ಅಸ್ವಸ್ಥಗೊಂಡಿವೆ. ಇದಕ್ಕೆ ಸೆಸ್ಕಾಂನವರೇ ಕಾರಣವಾಗಿದ್ದಾರೆ ಎಂದು ಸತೀಶ ಆರೋಪಿಸಿದ್ದಾರೆ. ಕೂಡಲೇ ಪರಿಹಾರ ಕೊಡಬೇಕು ಎಂದು ಒತ್ತಾಯ ಮಾಡಿದ್ದಾರೆ.