ETV Bharat / state

'ಮಕ್ಕಳ ಜ್ಞಾನಾರ್ಜನೆಗೆ ಚೆಸ್ ಆಟ ಅತ್ಯಗತ್ಯ' - ಡಾನಾ ರೀಜ್ನೀಸ್ ಓಝಲಾ

ಮಂಡ್ಯದ ಹಲ್ಲೇಗೆರೆ ಗ್ರಾಮದ ಪರಿಣಿತ ವಿದ್ಯಾಸಂಸ್ಥೆಯಲ್ಲಿ ಚೆಸ್ ಇನ್ ಸ್ಕೂಲ್ ಕಾರ್ಯಕ್ರಮ ನಡೆಯಿತು.

ಚೆಸ್ ಇನ್ ಸ್ಕೂಲ್ ಕಾರ್ಯಕ್ರಮ
ಚೆಸ್ ಇನ್ ಸ್ಕೂಲ್ ಕಾರ್ಯಕ್ರಮ
author img

By ETV Bharat Karnataka Team

Published : Oct 27, 2023, 9:31 PM IST

Updated : Oct 27, 2023, 10:59 PM IST

ಪರಿಣಿತ ವಿದ್ಯಾಸಂಸ್ಥೆಯಲ್ಲಿ ಚೆಸ್ ಇನ್ ಸ್ಕೂಲ್ ಕಾರ್ಯಕ್ರಮ

ಮಂಡ್ಯ: ಮಕ್ಕಳ ಜ್ಞಾನಾರ್ಜನೆಗೆ ಚೆಸ್​ನಂತಹ ಆಟಗಳು ಅತ್ಯಗತ್ಯ ಎಂದು ವರ್ಲ್ಡ್ ಚೆಸ್ ಫೆಡರೇಷನ್ ಡೆಪ್ಯುಟಿ ಚೀಫ್ ಮ್ಯಾನೇಜರ್ ಡಾನಾ ರೀಜ್ನೀಸ್ ಓಝಲಾ ಹೇಳಿದ್ದಾರೆ. ಮಂಡ್ಯ ತಾಲೂಕಿನ ಹಲ್ಲೇಗೆರೆ ಗ್ರಾಮದ ಪರಿಣಿತ ವಿದ್ಯಾಸಂಸ್ಥೆಯಲ್ಲಿ ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಆಲ್ ಇಂಡಿಯಾ ಚೆಸ್ ಫೆಡರೇಶನ್ ಹಾಗೂ ವರ್ಲ್ಡ್ ಚೆಸ್ ಫೆಡರೇಶನ್ ಆಯೋಜಿಸಿದ್ದ ಚೆಸ್ ಇನ್ ಸ್ಕೂಲ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

"ಚೆಸ್​ ಆಟದಲ್ಲಿ ಪ್ರಾವೀಣ್ಯತೆ ಹೊಂದಿದವರು ರಾಜಕೀಯ ಸೇರಿದಂತೆ ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಬಹುದು. ಮಕ್ಕಳಾದ ನೀವು ಕಲಿಯಲು ಆಸಕ್ತಿ ಹೊಂದಿದ್ದಲ್ಲಿ ಅದಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ಚೆಸ್​ ಫೆಡರೇಶನ್​ ಮೂಲಕ ನೀಡಲಾಗುವುದು. ಇದರ ಸದ್ಭಳಕೆ ಮಾಡಿಕೊಂಡು ರಾಜ್ಯ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಬಹುಮಾನಗಳಿಸುವಂತಾಗಬೇಕು" ಎಂದು ಹುರಿದುಂಬಿಸಿದರು.

ವೀಣಾವಾದಕಿ ರೇವತಿ ಕಾಮತ್​ ಮಾತನಾಡಿ, "ಮಕ್ಕಳು ಆದಷ್ಟು ಟಿವಿ, ಮೊಬೈಲ್​ನಿಂದ ದೂರ ಇದ್ದು ಕಣ್ಣಿಗೆ ಹಾನಿಯಾಗದಂತೆ ಜಾಗೃತೆ ವಹಿಸಿಬೇಕು. ಒಂದನೇ ತರಗತಿಯಿಂದಲೇ ಚೆಸ್ ಕಲಿಯುವ ಮೂಲಕ ನಿಮ್ಮ ಬುದ್ಧಿಶಕ್ತಿಯನ್ನು ಹೆಚ್ಚಿಸಿಕೊಳ್ಳಿ" ಎಂದು ಸಲಹೆ ನೀಡಿದರು.

ಚೆಸ್​ ಇನ್​ ಸ್ಕೂಲ್​ ಪ್ರಥಮವಾಗಿ ಈ ಭಾಗದಲ್ಲಿ ಆಯೋಜಿಸಿದ್ದು ಗ್ರಾಮೀಣ ಮಕ್ಕಳು ನಗರ ಪ್ರದೇಶದ ಮಕ್ಕಳಿಗೆ ಸರಿಸಮವಾಗಿ ಬೆಳೆಯಬೇಕು. ಉತ್ತಮ ಚೆಸ್ ತರಬೇತಿದಾರರು ಹೇಳಿಕೊಡುತ್ತಾರೆ. ಶಿಕ್ಷಕರು ಕೂಡ ಚೆಸ್ ಕಲಿತು ಮಕ್ಕಳ ಏಳಿಗೆಗೆ ಶ್ರಮಿಸಬೇಕು ಎಂದರು.

ಎಲ್ಲವನ್ನೂ ಒಳಗೊಂಡಿರುವ ಆಟ ಈ ಪ್ರಪಂಚದಲ್ಲಿದ್ದರೆ ಅದು ಚೆಸ್​ ಮಾತ್ರ. ನಾವು ಯಾವ ರೀತಿ ಜಗತ್ತನ್ನು ನಡೆಸಬೇಕೆಂಬುದನ್ನು ಚೆಸ್‌ನಿಂದ ಕಲಿಯಬಹುದು. ಪ್ರಪಂಚದಲ್ಲಿರುವ ಎಲ್ಲಾ ಶಾಲೆಗೆ ಚೆಸ್​ ಹೇಳಿಕೊಡಬೇಕೆಂಬುದು ವರ್ಲ್ಡ್ ಚೆಸ್ ಫೆಡರೇಶನ್​ನ ಉದ್ದೇಶ ಎಂದು ಅವರು ಹೇಳಿದರು.

ಮೊದಲ ಬಾರಿಗೆ ಕರ್ನಾಟಕದ ಚೆಸ್ ಇನ್ ಸ್ಕೂಲ್​ಗೆ ಮಂಡ್ಯದ ಹಲ್ಲೆಗೆರೆ ಪರಿಣಿತ ವಿದ್ಯಾಸಂಸ್ಥೆ ಆಯ್ಕೆಯಾಗಿದ್ದು, ಇದೇ ಸಂದರ್ಭದಲ್ಲಿ ಕಲಿಕೆಗೆ ಪೂರಕ ಸಾಮಗ್ರಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಆಲ್ ಇಂಡಿಯಾ ಫೆಡರೇಶನ್ ಖಜಾಂಚಿ ನರೇಶ್, ಕರ್ನಾಟಕ ಚೆಸ್ ಅಕಾಡೆಮಿಯ ನಾಗೇಂದ್ರ, ಪರಿಣಿತ ವಿದ್ಯಾಸಂಸ್ಥೆ ಅಧ್ಯಕ್ಷ ಚಂದಗಾಲು ಶಿವಣ್ಣ, ಟ್ರಸ್ಟ್ ಸದಸ್ಯ ಮಧು ಅಕಾಡಮಿ ಸದಸ್ಯರಾದ ಸುಜಾತ, ಸೌಮ್ಯ, ಇನ್ನಿತರರು ಭಾಗವಹಿಸಿದ್ದರು.

ಇದನ್ನೂ ಓದಿ: ಜಿಮ್, ರನ್ನಿಂಗ್ ಟ್ರ್ಯಾಕ್ ಸೇರಿ ಯಾವುದೇ ಸಲಕರಣೆ ಇಲ್ಲ: ಪವರ್‌ ಲಿಫ್ಟಿಂಗ್‌ನಲ್ಲಿ 4 ಪದಕ ಗೆದ್ದ ಒಂದು ಮಗುವಿನ ತಾಯಿ!

Last Updated : Oct 27, 2023, 10:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.