ಮಂಡ್ಯ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವುದನ್ನು ಮಾಜಿ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದು, ಅವರೇ ಆ ಪಕ್ಷಕ್ಕೆ ಹೈಕಮಾಂಡ್. ಅವರೇ ತೀರ್ಮಾನ ಮಾಡಲು ಸ್ವತಂತ್ರರು ಎಂದಿದ್ದಾರೆ.
ಸಿಎಂ ಬಿಎಸ್ವೈ ಅವರನ್ನು ಭೇಟಿಯಾಗಿರುವುದು ಕುಮಾರಸ್ವಾಮಿಯವರ ವೈಯಕ್ತಿಕ ವಿಚಾರ. ಅವರದ್ದು ಪ್ರಾದೇಶಿಕ ಪಕ್ಷ. ಹೀಗಾಗಿ ಏನೇ ತೀರ್ಮಾನ ತೆಗೆದುಕೊಂಡರೂ ಅವರದ್ದೇ ಅಂತಿಮ. ಆ ಪಕ್ಷಕ್ಕೆ ಅವರೇ ರಾಜ್ಯ ನಾಯಕರು. ಅವರೇ ಹೈಕಮಾಂಡ್ ಎಂದು ಚಲುವರಾಯಸ್ವಾಮಿ ಹೇಳಿದರು.
ಬೆಳಿಗ್ಗೆ ಯಡಿಯೂರಪ್ಪ, ನಾಳೆ ಸಿದ್ದರಾಮಯ್ಯ, ನಾಡಿದ್ದು ಸೋನಿಯಾ ಗಾಂಧಿಯವರನ್ನು ಬೇಕಾದ್ರೂ ಭೇಟಿಯಾಗಬಹುದು. ಅವರು ಏನು ಹೇಳಲಿಕ್ಕೂ ಸ್ವತಂತ್ರರಿದ್ದಾರೆ. ಒಮ್ಮೆ ಸರ್ಕಾರವನ್ನೂ ತೆಗಳಬಹುದು, ಮತ್ತೊಮ್ಮೆ ಅದೇ ಸರ್ಕಾರದ ಮಂತ್ರಿಗಳನ್ನು ಭೇಟಿ ಮಾಡಬಹುದು. ಇದೇನು ಹೊಸದೇನಲ್ಲ ಅಲ್ವಾ ಎಂದರು.