ETV Bharat / state

ಕೆಆರ್​ಎಸ್​​ ನಾಲೆಗಳಿಗೆ ನೀರು ಬಿಡಲು ಸಾಧ್ಯವಿಲ್ಲ: ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿ ಮಂಜುಶ್ರೀ, ನಾಲೆಗಳಿಗೆ ನೀರು ಬಿಡುವಂತೆ ಜಲಸಂಪನ್ಮೂಲ ಇಲಾಖೆಗೆ ಮನವಿ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಇಲಾಖೆ, KRS ಅಣೆಕಟ್ಟೆ ಸೆಂಟ್ರಲ್ ವಾಟರ್ ಮ್ಯಾನೇಜ್‍ಮೆಂಟ್ ಅಥಾರಿಟಿಯ ನಿಯಂತ್ರಣದಲ್ಲಿದೆ. ಅಥಾರಿಟಿ ಅನುಮತಿ ಇಲ್ಲದೇ ನೀರು ಬಿಡಲು ಸಾಧ್ಯವಿಲ್ಲ ಎಂದಿದೆ.

ಕೆಆರ್​ಎಸ್​​ ನಾಲೆಗಳಿಗೆ ನೀರು ಬಿಡಲು ಸಾಧ್ಯವಿಲ್ಲ
author img

By

Published : Jun 23, 2019, 3:31 PM IST

ಮಂಡ್ಯ : ಕೆ.ಆರ್.ಎಸ್‌ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಮಂಜುಶ್ರೀ ಸ್ಪಷ್ಟಪಡಿಸಿದ್ದಾರೆ.

ಕೆ.ಆರ್.ಎಸ್‌ನಿಂದ ವಿಸಿ ಹಾಗೂ ಎಡ ಮತ್ತು ಬಲ ದಂಡೆ ನಾಲೆಗಳಿಗೆ ನೀರು ಹರಿಸುವಂತೆ ರೈತ ಸಂಘದ ಮುಖಂಡರು ನಿರಂತರ ಹೋರಾಟ ಶುರು ಮಾಡಿದ್ದರು‌. ಹೋರಾಟದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮಂಜುಶ್ರೀ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೀರು ಬಿಡುವಂತೆ ಮನವಿ ಮಾಡಿದ್ದರು. ಡಿಸಿ ಮನವಿಗೆ ಸ್ಪಂದಿಸಿದ ಜಲ ಸಂಪನ್ಮೂಲ ಇಲಾಖೆ, ಕೇಂದ್ರದತ್ತ ಬೊಟ್ಟು ಮಾಡಿ ನುಣುಚಿಕೊಂಡಿದೆ.

KRS ಅಣೆಕಟ್ಟೆ ಸೆಂಟ್ರಲ್ ವಾಟರ್ ಮ್ಯಾನೇಜ್‍ಮೆಂಟ್ ಅಥಾರಿಟಿಯ ನಿಯಂತ್ರಣದಲ್ಲಿದೆ. ಅಥಾರಿಟಿ ಅನುಮತಿ ಇಲ್ಲದೇ ನೀರು ಬಿಡಲು ಸಾಧ್ಯವಿಲ್ಲ ಎಂದು ಜಲಸಂಪನ್ಮೂಲ ಇಲಾಖೆ ಉತ್ತರ ನೀಡಿದೆ. ಮಳೆ ಕಡಿಮೆಯಾಗಿರುವುದರಿಂದ ಕುಡಿಯುವ ನೀರಿಗೆ ಮಾತ್ರ ನೀರು ಮೀಸಲಿಡುವುದು ಸೂಕ್ತವೆಂದು ತೀರ್ಮಾನ ಮಾಡಲಾಗಿದ್ದು. ಅಣೆಕಟ್ಟೆ ಒಳಹರಿವು ಹೆಚ್ಚಾದಲ್ಲಿ ನಾಲೆಗಳಿಗೆ ನೀರು ಹರಿಸಲು ಸಾಧ್ಯ ಎಂದು ಸ್ಪಷ್ಟನೆ ನೀಡಿದ್ದಾರೆ.

Intro:ಮಂಡ್ಯ: ಕೇಂದ್ರದತ್ತ ಬೆಟ್ಟು ಮಾಡಿದ ಜಿಲ್ಲಾಡಳಿತ, ನೀರು ಬಿಡಲು ಆಗಲ್ಲ ಎಂದು ಸರ್ಕಾರ ಹಾಗೂ ಡಿಸಿ ಸ್ಪಷ್ಟನೆ ನೀಡಿದ್ದಾರೆ.
ನಾಲೆಗಳಿಗೆ ನೀರು ಹರಿಸುವಂತೆ ರೈತ ಸಂಘದ ಮುಖಂಡರು ನಿರಂತರ ಹೋರಾಟ ಶುರು ಮಾಡಿದ್ದರು‌. ಹೋರಾಟದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಮಂಜುಶ್ರೀ ರಾಜ್ಯ ಸರ್ಕಾರದ ಜೊತೆಗೆ ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮನವಿ ಮಾಡಿದ್ದರು.
ಡಿಸಿ ಮನವಿಗೆ ಸ್ಪಂದಿಸದ ಸರ್ಕಾರ, ಜಲ ಸಂಪನ್ಮೂಲ ಇಲಾಖೆ ಕೇಂದ್ರದತ್ತ ಬೊಟ್ಟು ಮಾಡಿ ನುಣುಚಿಕೊಂಡಿದೆ. KRS ಅಣೆಕಟ್ಟೆ ಸೆಂಟ್ರಲ್ ವಾಟರ್ ಮ್ಯಾನೇಜ್‍ಮೆಂಟ್ ಅಥಾರಿಟಿಯ ನಿಯಂತ್ರಣದಲ್ಲಿದೆ. ಅಥಾರಿಟಿ ಅನುಮತಿ ಇಲ್ಲದೇ ನೀರು ಬಿಡಲು ಸಾಧ್ಯವಿಲ್ಲ ಎಂದು ಉತ್ತರ ನೀಡಿದೆ.
ಮಳೆ ಕಡಿಮೆಯಾಗಿರುವುದರಿಂದ ಕುಡಿಯುವ ನೀರಿಗೆ ಮಾತ್ರ ಮೀಸಲಿಡುವುದು ಸೂಕ್ತವೆಂದು ತೀರ್ಮಾನ ಮಾಡಲಾಗಿದೆ. ಅಣೆಕಟ್ಟೆ ಒಳಹರಿವು ಹೆಚ್ಚಾದಲ್ಲಿ ನಾಲೆಗಳಿಗೆ ನೀರು ಹರಿಸಲು ಸಾಧ್ಯ ಎಂದು ಎಂದು ಸ್ಪಷ್ಟನೆ ನೀಡಿದ್ದಾರೆ.Body:ಕೊತ್ತತ್ತಿ ಯತೀಶ್ ಬಾಬುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.