ETV Bharat / state

ಪಾಂಡವಪುರದ ಬಿ.ವಿ ನಾಗರತ್ನ ಸುಪ್ರೀಂಕೋರ್ಟ್ ಜಸ್ಟೀಸ್​.. ತಂದೆ ಹಾದಿ ಹಿಡಿದ ಪುತ್ರಿ ಸಾಧನೆಗೆ ಕುಟುಂಬಸ್ಥರ ಹರ್ಷ - ಬಿ.ವಿ ನಾಗರತ್ನ

ರಾಜ್ಯ ಹೈಕೋರ್ಟ್​ನ ಹಿರಿಯ ನ್ಯಾಯಮೂರ್ತಿ ಆಗಿರುವ ಬಿ.ವಿ ನಾಗರತ್ನ ಅವರನ್ನು ಈಗಾಗಲೇ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಆಗಿ ನಿಯೋಜಿಸಿ ರಾಷ್ಟ್ರಪತಿ ಆದೇಶ ಹೊರಡಿಸಿದ್ದಾರೆ. ಸುಪ್ರೀಂ ನ್ಯಾಯಮೂರ್ತಿಯಾಗಿ ಪ್ರಮಾಣ ವಚನವನ್ನೂ ಸ್ವೀಕರಿಸಿದ್ದಾರೆ. ಇವರು ಮಂಡ್ಯ ಮೂಲದವರಾಗಿದ್ದು, ತಂದೆ ಸಹ ಸುಪ್ರೀಕೋರ್ಟ್​​ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದವರಾಗಿದ್ದಾರೆ.

bv-nagaratna-take-oath-as-supreme-court-cji
ಪಾಂಡವಪುರದ ಬಿ.ವಿ ನಾಗರತ್ನ ಸುಪ್ರೀಂಕೋರ್ಟ್ ಸಿಜೆಐ
author img

By

Published : Sep 2, 2021, 12:48 PM IST

ಮಂಡ್ಯ: ಕಲೆ, ಜಾನಪದ, ಸಾಹಿತ್ಯ, ಸಿನಿಮಾ ರಾಜಕೀಯ ಸೇರಿದಂತೆ ಹತ್ತು ಹಲವು ಕ್ಷೇತ್ರದಲ್ಲಿ ಸಕ್ಕರೆ ನಾಡು ಮಂಡ್ಯ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಇದೀಗ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಬಿ.ವಿ ನಾಗರತ್ನ ಅವರು ಪದೋನ್ನತಿ ಪಡೆದಿದ್ದು, ಅವರು ಮೂಲತಃ ಮಂಡ್ಯದವರಾಗಿದ್ದಾರೆ.

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿ.ವಿ ನಾಗರತ್ನ ಅವರು ಮೂಲತಃ ಮಂಡ್ಯದವರು. ಪಾಂಡವಪುರ ತಾಲೂಕಿನ ಇಂಗಲಗುಪ್ಪೆ ಗ್ರಾಮದವರಾದ ನಾಗರತ್ನ ಅವರ ತಂದೆ ವೆಂಕಟರಾಮಯ್ಯ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. ಈಗ ಅವರ ಪುತ್ರಿ ಸಹ ಸುಪ್ರೀಂಕೋರ್ಟ್ ಜಡ್ಜ್ ಆಗುವ ಮೂಲಕ ತಂದೆ-ಮಗಳಿಬ್ಬರು ಸರ್ವೋಚ್ಚ ನ್ಯಾಯಾಲಯದಲ್ಲಿ ಹುದ್ದೆ ಅಲಂಕರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಪಾಂಡವಪುರದ ಬಿ.ವಿ ನಾಗರತ್ನ ಸುಪ್ರೀಂಕೋರ್ಟ್ ನ್ಯಾಯಮೂರ್ತಿ

ತಂದೆ ನ್ಯಾಯಮೂರ್ತಿ ವೆಂಕಟರಾಮಯ್ಯ ಅವರಂತೆಯೇ ಕಾನೂನು ಪದವಿ ಪಡೆದ ನಾಗರತ್ನ ಅವರು 1987 ರಲ್ಲಿ ಬೆಂಗಳೂರಿನಲ್ಲಿ ವಕೀಲ ವೃತ್ತಿ ಆರಂಭಿಸಿದರು. 2008 ಫೆಬ್ರವರಿ 18 ರಂದು ಕರ್ನಾಟಕ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡು 2010 ಪೂರ್ಣಾವಧಿ ನ್ಯಾಯಮೂರ್ತಿಯಾಗಿ ಕರ್ತವ್ಯ ಆರಂಭಿಸಿದರು.

ಇದೀಗ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತ್ತಿ ಪಡೆದು ಹಿರಿತನದ ಆಧಾರದ ಮೇಲೆ 2027 ರ ವೇಳೆಗೆ ಮುಖ್ಯ ನ್ಯಾಯಮೂರ್ತಿಯಾಗುವ ಸಾಧ್ಯತೆ ಇದೆ. ಆ ಮೂಲಕ ತಂದೆ ಮಗಳು ಮುಖ್ಯ ನ್ಯಾಯಮೂರ್ತಿ ಆಗುವ ಮೂಲಕ ಇತಿಹಾಸ ನಿರ್ಮಾಣವಾಗುವ ಎಲ್ಲ ಸಾಧ್ಯತೆಗಳಿವೆ.

ಓದಿ: ಐಟಿ ಪ್ರಾಜೆಕ್ಟ್​​ ಕೊಡಿಸುವುದಾಗಿ ದೋಖಾ: ಅಕ್ಕ - ತಮ್ಮನ ಮೋಸದ ಜಾಲಕ್ಕೆ ಬಿದ್ದ ನವೋದ್ಯಮಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.