ETV Bharat / state

ನಾಗಮಂಗಲದಲ್ಲಿ ಸೇತುವೆ ಕುಸಿತ: ಸಂಪರ್ಕ ಸಾಧ್ಯವಾಗದೆ ಗ್ರಾಮಸ್ಥರ ಪರದಾಟ - Rain in Nagamangala taluk mandya

ನಾಗಮಂಗಲ ತಾಲ್ಲೂಕಿನ ಗಿಡುವಿನ ಹೊಸಹಳ್ಳಿ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ಕಳೆದ ರಾತ್ರಿ ಕುಸಿದು ಗ್ರಾಮಸ್ಥರು ಪರದಾಡುವಂತಾಗಿದೆ.

ನಾಗಮಂಗಲ ತಾಲ್ಲೂಕಿನಲ್ಲಿ ಸೇತುವೆ ಕುಸಿತ : ಗ್ರಾಮಸ್ಥರ ಪರದಾಟ
author img

By

Published : Oct 23, 2019, 12:49 PM IST

ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನ ಗಿಡುವಿನ ಹೊಸಹಳ್ಳಿ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ಕಳೆದ ರಾತ್ರಿ ಕುಸಿದು ಗ್ರಾಮಸ್ಥರು ಪರದಾಡುವಂತಾಗಿದೆ. ಇನ್ನು ನಾಗಮಂಗಲ ತಾಲೂಕಿನ ಬೋನಕೆರೆ ಗ್ರಾಮದ ಕೆರೆಯ ಏರಿ ಒಡೆದು 200 ಎಕೆರೆ ವಿಸ್ತೀರ್ಣದ ಕೆರೆ ಸಂಪೂರ್ಣವಾಗಿ ಬರಿದಾಗಿದೆ. ಕೆರೆ ಏರಿ ಒಡೆಯುತ್ತಿದ್ದಂತೆ ಸಂಪೂರ್ಣ ಬೆಳೆಗಳು ಕೊಚ್ಚಿ ಹೋಗಿದೆ.

ನಾಗಮಂಗಲ ತಾಲ್ಲೂಕಿನಲ್ಲಿ ಸೇತುವೆ ಕುಸಿತ : ಗ್ರಾಮಸ್ಥರ ಪರದಾಟ

ಜಿಲ್ಲೆಯಲ್ಲಿ ಮಳೆ ಮತ್ತಷ್ಟು ಆವಾಂತರ ಸೃಷ್ಟಿ ಮಾಡಿದ್ದು, ಕೆಆರ್​ ಪೇಟೆ ತಾಲೂಕಿನಲ್ಲಿ ಶೆಟ್ಟಹಳ್ಳಿ ಗ್ರಾಮದಲ್ಲಿ ಮಳೆಗೆ ಮನೆ ಕುಸಿದು, ಹೋಗಿ ಮೇಲ್ಛಾವಣಿ ಕುಸಿದಿದ್ದರಿಂದ ನಷ್ಟ ಉಂಟಾಗಿದ್ದು, ಮನೆಯಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಶೆಟ್ಟಹಳ್ಳಿ ಗ್ರಾಮದಲ್ಲಿ ಮಳೆಗೆ ಕುಸಿದ ಮನೆ

ಜಿಲ್ಲೆಯಲ್ಲಿ ಕಳೆದ ವರ್ಷ ಅಕ್ಟೋಬರ್ 21, 22 ರಂದು 5.1 ಮಿಲಿಮೀಟರ್ ಮಳೆಯಾಗಿತ್ತು. ಆದರೆ ಈ ಬಾರಿ ವೇಳೆಗೆ 43.1 ಮಿಲೀ ಮೀಟರ್​ನಷ್ಟು ಮಳೆಯಾಗಿದೆ. ಬರ ಪ್ರದೇಶವಾದ ನಾಗಮಂಗಲ ತಾಲ್ಲೂಕಿನಲ್ಲಿ ಅತಿ ಹೆಚ್ಚಿನ ಮಳೆಯಾಗಿದೆ.

Intro:
ಮಂಡ್ಯ: ಜಿಲ್ಲೆಯಲ್ಲಿ ಮಳೆ ಮತ್ತಷ್ಟು ಆವಾಂತರ ಸೃಷ್ಟಿ ಮಾಡಿದೆ. ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು ಆವಾಂತರಕ್ಕೆ ಕಾರಣವಾಗಿದ್ದು, ಸೇತುವೆಗಳು ಕೊಚ್ಚಿ ಹೋಗಿವೆ, ಕೆರೆ ಏರಿ ಹೊಡೆದು ಹೋಗಿ ಬೆಳೆ ನಷ್ಟ ಉಂಟಾದರೆ, ಮನೆಗಳು ಕುಸಿದು ಅಪಾರ ಪ್ರಮಾಣದ ಹಾನಿಯಾಗಿದೆ.

ನಾಗಮಂಗಲ ತಾಲ್ಲೂಕಿನ ಗಿಡುವಿನ ಹೊಸಹಳ್ಳಿ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ಕಳೆದ ರಾತ್ರಿ ಕುಸಿದು ಗ್ರಾಮಸ್ಥರು ಪರದಾಡುವಂತ್ತಾಗಿದೆ. ಗಿಡುವಿನ ಹೊಸಹಳ್ಳಿ ಸೇರಿದಂತೆ ಕೆಸವಿನಕಟ್ಟೆ, ಸಣ್ಣೆನಹಳ್ಳಿ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಗಿಡುವಿನ ಹೊಸಹಳ್ಳಿ ಸಂಪರ್ಕ ಸೇತುವೆ ಕುಸಿದು ವಿದ್ಯಾರ್ಥಿಗಳು, ನಾಗರೀಕರು ಪರದಾಡುತ್ತಿದ್ದಾರೆ.

ಇನ್ನು ನಾಗಮಂಗಲ ತಾಲ್ಲೂಕಿನನ ಬೋನಕೆರೆ ಗ್ರಾಮದ ಕೆರೆಯ ಏರಿ ಹೊಡೆದು ಕೆರೆಯಲ್ಲಿದ್ದ ನೀರು ಸಂಪೂರ್ಣವಾಗಿ ಖಾಲಿಯಾಗಿದೆ. ಜೊತೆಗೆ ಕೆರೆ ಏರಿ ಹೊಡೆಯುತ್ತಿದ್ದಂತೆ ಬೆಳೆಯಲಾಗಿದ್ದ ಬೆಳೆಗಳು ಕೊಚ್ಚಿ ಹೋಗಿದ್ದು, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಳೆದ ರಾತ್ರಿ ಕೆರೆ ಹೊಡೆದಿದ್ದು, 200 ಎಕೆರೆ ವಿಸ್ತೀರ್ಣದ ಕೆರೆ ಸಂಪೂರ್ಣವಾಗಿ ಬರಿದಾಗಿದೆ.

ಕೆ.ಆರ್.ಪೇಟೆ ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮದ ಯೋಗೇಶ್ ಎಂಬವರ ಮನೆ ಮಳೆಗೆ ಕುಸಿದು ಹೋಗಿದೆ. ಮೇಲ್ಛಾವಣಿ ಕುಸಿದಿದ್ದರಿಂದ ನಷ್ಟು ಉಂಟಾಗಿದ್ದು, ಮನೆಯಲ್ಲಿದ್ದವರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆ ಕುಸಿತದಿಂದ ವಾಸಕ್ಕಾಗಿ ಸಂಕಷ್ಟ ಎದುರಿಸುವಂತ್ತಾಗಿದೆ.

ಇನ್ನು ಜಿಲ್ಲೆಯಲ್ಲಿ ಕಳೆದ ವರ್ಷ ಅಕ್ಟೋಬರ್ 21, 22 ರಂದು 5.1 ಮಿಲಿಮೀಟರ್ ಮಳೆಯಾಗಿತ್ತು. ಆದರೆ ಈ ಬಾರಿ ವೇಳೆಗೆ 43.1 ಮಿಲೀ ಮೀಟರ್ ನಷ್ಟು ಮಳೆಯಾಗಿದೆ. ಬರ ಪ್ರದೇಶವಾದ ನಾಗಮಂಗಲ ತಾಲ್ಲೂಕಿನಲ್ಲಿ ಅತಿ ಹೆಚ್ಚಿನ ಮಳೆಯಾಗಿದೆ.

ಬೈಟ್: ರಮೇಶ್, ಮನೆ ಕಳೆದುಕೊಂಡವರು( ಬನಿಯನ್ ಹಾಕಿರುವವರು)
ಕುಮಾರ್, ಸ್ಥಳೀಯರುBody:ಯತೀಶ್ ಬಾಬುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.