ಮಂಡ್ಯ: ಜಿಲ್ಲೆಯ ಮದ್ದೂರು ಕ್ಷೇತ್ರದಲ್ಲಿ ಗ್ರಾ.ಪಂ ಅಧ್ಯಕ್ಷ ಸ್ಥಾನ ಪಡೆಯಲು ಜೆಡಿಎಸ್ನಿಂದ ಖಾಲಿ ಚೆಕ್ ಅಸ್ತ್ರ ಪ್ರಯೋಗ ಮಾಡಿದ್ದಾರೆ ಎಂದು ಗಂಭೀರ ಆರೋಪ ಕೇಳಿ ಬಂದಿದೆ.
ಮದ್ದೂರು ಕ್ಷೇತ್ರದಲ್ಲಿ ಪಕ್ಷ ತೊರೆದು ಜೆಡಿಎಸ್ ಸೇರಿದವರು ಶಾಸಕರಿಂದ ಖಾಲಿ ಚೆಕ್, ಪ್ರನೋಟ್ಗೆ ಸಹಿ ಹಾಕಿಸಿಕೊಂಡು ಬಳಿಕ ಸದಸ್ಯರಿಗೆ ಜೆಡಿಎಸ್ ಶಾಲು ಹಾಕಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಓದಿ: ಜೈಲಿನಲ್ಲೇ ಹುಟ್ಟಿಕೊಂಡಿತ್ತು ಖತರ್ನಾಕ್ ಗ್ಯಾಂಗ್: ದರೋಡೆಕೋರನ ಮೇಲೆ ಪೊಲೀಸರಿಂದ ಶೂಟೌಟ್!
ಶಾಸಕರು ಜೆಡಿಎಸ್ ಪ್ರಾಬಲ್ಯವಿರದ ಗ್ರಾಮ ಪಂಚಾಯತ್ಗಳಲ್ಲಿ ಸದಸ್ಯರಿಗೆ ಹಣ ಕೊಟ್ಟು ಅಧಿಕಾರ ಹಿಡಿದ್ರಾ? ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿವೆ.