ETV Bharat / state

Mandya crime: ಮಂಡ್ಯ ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆ ಪ್ರಕರಣ; ಪೋಷಕರ ಆರೋಪವೇನು? - ಈಟಿವಿ ಭಾರತ್​ ಕನ್ನಡ ನ್ಯೂಸ್​

Mandya crime: ಐಎಎಸ್​ ಅಧಿಕಾರಿಯಾಗುವ ಕನಸು ನನಸಾಗದ ಹಿನ್ನೆಲೆಯಲ್ಲಿ ಜೀವನದಲ್ಲಿ ಜುಗುಪ್ಸೆಯಿಂದ ಬ್ಯಾಂಕ್​ವೊಂದರ ಮಹಿಳಾ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದ ಪ್ರಕರಣ ಸಂಬಂಧ ಮೃತಳ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಬ್ಯಾಂಕ್ ಮ್ಯಾನೇಜರ್ ಪೋಷಕರ ಆರೋಪ

author img

By

Published : Aug 13, 2023, 10:52 PM IST

Updated : Aug 13, 2023, 11:02 PM IST

ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಬ್ಯಾಂಕ್ ಮ್ಯಾನೇಜರ್ ಪೋಷಕರ ಆರೋಪ

ಮಂಡ್ಯ : ಕಳೆದ ವಾರ ನಗರದ ವಿನಾಯಕ ಬಡಾವಣೆಯಲ್ಲಿ ಬ್ಯಾಂಕ್​ವೊಂದರ ಮಹಿಳಾ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಅಧಿಕಾರಿ ಶೃತಿ ಅವರ ತಂದೆ ಮಲ್ಲಪ್ಪ ಮಾತನಾಡಿ, ಪ್ರೇಮ ವೈಫಲ್ಯದಿಂದ ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಾವಿಗೆ ಆಕೆಯ ಪ್ರಿಯಕರ ಮಳವಳ್ಳಿ ತಾಲ್ಲೂಕಿನ ಮಲ್ಲಿನಾಥಪುರ ಗ್ರಾಮದ ಜಗದೀಶ್ ಕಾರಣ ಎಂದು ಆರೋಪಿಸಿದರು.

ಶೃತಿ ಆತ್ಮಹತ್ಯೆಗೆ ಶರಣಾಗುವ ಮುಂಚೆ ಡೆತ್ ನೋಟ್​ನಲ್ಲಿ ಐಎಎಸ್ ಪಾಸಾಗದಿರುವುದು ಹಾಗೂ ಜೀವನದ ವೈಪಲ್ಯ ಕಾರಣ ಅಂತ ಬರೆದಿದ್ದರು. ಇದನ್ನೇ ನಂಬಿ ಶೃತಿ ಅಂತ್ಯ ಸಂಸ್ಕಾರವನ್ನೂ ನೆರವೇರಿಸಲಾಗಿತ್ತು. ಆದರೆ ಇದೀಗ ಶೃತಿ ಅವರ ತಂದೆ ಮಲ್ಲಪ್ಪ ಪ್ರೇಮ ವೈಪಲ್ಯವೇ ಸಾವಿಗೆ ಕಾರಣ ಎಂದು ಹೇಳಿದ್ದಾರೆ.

ಮಂಡ್ಯದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾಡನಾಡಿದ ಮಲ್ಲಪ್ಪ, ಕಳೆದ ಐದು ವರ್ಷಗಳ ಶೃತಿ ಮತ್ತು ಜಗದೀಶ್ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲದ ಕಾವೇರಿ ಗ್ರಾಮೀಣ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ನಮ್ಮ ಮಗಳ ಜೊತೆ ಸಂಪರ್ಕ ಬೆಳೆಸಲು ಜಗದೀಶ್ ಪ್ರಯತ್ನ ನಡೆಸಿದ್ದನು. ಇದರಿಂದ ಬೇಸತ್ತು ಚಿಕ್ಕಮಗಳೂರಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಳು. ಬಳಿಕ ಅದೇ ಬ್ಯಾಂಕಿಗೆ ಆತ ಕೂಡ ವರ್ಗಾವಣೆ ಮಾಡಿಸಿಕೊಂಡ ಸಂದರ್ಭದಲ್ಲಿ ಇಬ್ಬರ ಸ್ನೇಹ ಪ್ರೇಮಕ್ಕೆ ತಿರುಗಿ ಪ್ರೀತಿಯಲ್ಲಿ ಬಿದ್ದಿದ್ದರು.

ನಂತರ ಜಗದೀಶ್​ಗೆ ಬೇರೊಂದು ಹುಡುಗಿ ಜೊತೆ ಮದುವೆ ಆಗುವ ವಿಷಯ ತಿಳಿದು ನಮ್ಮ ಬಳಿ ಇಬ್ಬರ ಪ್ರೀತಿ ಬಗ್ಗೆ ಹೇಳಿಕೊಂಡಿದ್ದಳು. ನಾನು ಆತನ ಜೊತೆ ಮದುವೆ ಬಗ್ಗೆ ಮಾತುಕತೆ ನಡೆಸಿದ್ದೆ. ನಮ್ಮ ತಂದೆಗೆ ಆರೋಗ್ಯ ಸರಿಯಿಲ್ಲ. ಕಾಲಾವಕಾಶ ಕೊಡಿ ಎಂದಿದ್ದ. ನಂತರ ಹಲವಾರು ಬಾರಿ ಮದುವೆ ಪ್ರಸ್ತಾಪ ಬಂದಾಗ ಜಗದೀಶ್ ಸಬೂಬು ಹೇಳುತ್ತಿದ್ದ. ಆಗಲೂ ಜಗದೀಶ್ ಮದುವೆ ಆಗೋ ಮನಸ್ಸು ಮಾಡಿರಲಿಲ್ಲ. ನಂತರ ಶೃತಿಗೆ ಮಂಡ್ಯಗೆ ವರ್ಗಾವಣೆ ಆಯ್ತು. ಇಲ್ಲಿನ ವಿನಾಯಕ ಬಡಾವಣೆಯಲ್ಲಿ ಒಂಟಿ ಜೀವನ ನಡೆಸುತ್ತಿದ್ದಳು.

ಮತ್ತೊಂದು ಬಾರಿ ಕೂಡ ಮೈಸೂರಿನಲ್ಲಿ ಆತನ ಕುಟುಂಬಸ್ಥರೊಂದಿಗೆ ಭೇಟಿಯಾಗಿ ಮದುವೆ ಬಗ್ಗೆ ಮಾತನಾಡಿದ್ದು ಅನ್ಯಜಾತಿ ಎಂದು ಮದುವೆಗೆ ಹಿಂದೇಟು ಹಾಕಿದ್ದರು. ಬಳಿಕ ಉಳಿದ ಕುಟುಂಬಸ್ಥರ ಜೊತೆಗೆ ಮಾತನಾಡುತ್ತೇವೆ ಎಂದು ಹೋಗಿ ಮತ್ತೊಂದು ಹುಡುಗಿಯೊಂದಿಗೆ ಮದುವೆ ತಯಾರಿ ನಡೆಸುತ್ತಿದ್ದರು. ಈ ವಿಷಯ ನಮ್ಮ ಮಗಳ ತಿಳಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮಂಡ್ಯ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ದಯವಿಟ್ಟು ನಮಗೆ ನ್ಯಾಯ ಕೊಡಿಸಿ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಜಗದೀಶ್‌ನನ್ನು ಬಂಧಿಸಿ ಶಿಕ್ಷೆ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ : Mandya crime: ಐಎಎಸ್​ ಕನಸು ನನಸಾಗಲಿಲ್ಲವೆಂದು ಬ್ಯಾಂಕ್ ಮ್ಯಾನೇಜರ್ ಆತ್ಮಹತ್ಯೆ!

Last Updated : Aug 13, 2023, 11:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.