ಮಂಡ್ಯದಲ್ಲಿ ಆಟೋ ಚಾಲಕನ ಹತ್ಯೆ; ವಿವಾಹೇತರ ಸಂಬಂಧವೇ ಕಾರಣ? - ಮಂಡ್ಯ ಆಟೋ ಚಾಲಕನ ಕೊಲೆ
ಮಂಡ್ಯ ಜಿಲ್ಲೆಯ ಮಳವಳ್ಳಿ ಟೌನ್ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಟೋ ಚಾಲಕನೋರ್ವನನ್ನು ಕೊಲೆ ಮಾಡಲಾಗಿದೆ.

ಮಂಡ್ಯದಲ್ಲಿ ಆಟೋ ಚಾಲಕನ ಬರ್ಬರ ಹತ್ಯೆ... ವಿವಾಹೇತರ ಸಂಬಂಧವೇ ಕಾರಣ?
ಮಂಡ್ಯ: ವಿವಾಹೇತರ ಸಂಬಂಧದ ಹಿನ್ನೆಲೆಯಲ್ಲಿ ಆಟೋ ಚಾಲಕನೋರ್ವ ಕೊಲೆಯಾಗಿರುವ ಘಟನೆ ಮಳವಳ್ಳಿ ಟೌನ್ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಳವಳ್ಳಿ ಪಟ್ಟಣದ ಸುಣ್ಣದಕೇರಿಯಲ್ಲಿ ಘಟನೆ ನಡೆದಿದ್ದು, ಶ್ರೀನಿವಾಸ್ (46) ಎಂಬ ಆಟೋ ಚಾಲಕನ ಮೈಮೇಲೆ ದುಷ್ಕರ್ಮಿಗಳು ಆ್ಯಸಿಡ್ ಸುರಿದು, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಮಹಿಳೆಯೊಂದಿನ ವಿವಾಹೇತರ ಸಂಬಂಧವೇ ಆಟೋ ಚಾಲಕನ ಕೊಲೆಗೆ ಕಾರಣವೆಂದು ಹೇಳಲಾಗ್ತಿದೆ.

ಈ ಸಂಬಂಧ ಸ್ಥಳಕ್ಕೆ ಮಳವಳ್ಳಿ ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಬಿಎಸ್ವೈ ಆಪ್ತನ ಮನೆ ಸೇರಿ ಬೆಂಗಳೂರಿನ ಹಲವೆಡೆ IT ದಾಳಿ: ಕಾಂಟ್ರಾಕ್ಟರ್ಸ್, ಉದ್ಯಮಿಗಳಿಗೆ ಆಘಾತ