ಮಂಡ್ಯ:
ಕೊಲೆ ಆರೋಪವೊಂದರಲ್ಲಿ ಸಿಲುಕಿರುವ ಮಾಜಿ ಶಾಸಕನ ಪುತ್ರನ ರಕ್ಷಣೆಗೆ ಯತ್ನಿಸಿದ ಆರೋಪದಲ್ಲಿ ಮಂಡ್ಯದ ಹಲಗೂರು ಠಾಣೆ ಸಿಪಿಐ ಅವರನ್ನು ಅಮಾನತು ಮಾಡಿ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಆದೇಶ ಹೊರಡಿಸಿದ್ದಾರೆ. ಹಲಗೂರು ಠಾಣೆ ಸಿಪಿಐ ಡಿ.ಪಿ. ಧನರಾಜು ಸಸ್ಪೆಂಡ್ ಆಗಿರುವ ಸಿಪಿಐ ಆಗಿದ್ದಾರೆ.
ಪ್ರಕರಣದಲ್ಲಿ ಅಮಾನತು ಆಗಿರುವ ಧನರಾಜು ವಿರುದ್ಧ ಇಲಾಖಾ ತನಿಖೆಗೆ ಮಂಡ್ಯ ಎಸ್ಪಿ ಆದೇಶ ನೀಡಿದ್ದಾರೆ. ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪುತ್ರ ಕೆ.ಸಿ.ಶ್ರೀಕಾಂತ್ ರೈಸ್ ಪುಲ್ಲಿಂಗ್ ದಂಧೆಯಲ್ಲಿ ತೊಡಗಿದ್ದ ಸಲೀಂ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ. ಫೆ.7 ರಂದು ಸಲೀಂ ಕೊಲೆಯಾಗಿತ್ತು.
ಈ ಪ್ರಕರಣದಲ್ಲಿ ಶ್ರೀಕಾಂತ್ ರಕ್ಷಣೆಗೆ ಸಿಪಿಐ ಧನರಾಜು ನಿಂತಿರುವ ಆರೋಪ ಸಾಬೀತಾಗಿರುವುದರಿಂದ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.