ಮಂಡ್ಯ: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರ ಗಂಧದಗುಡಿ ಬಿಡುಗಡೆಯಾಗಿದ್ದು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಂನಲ್ಲಿರುವ ನಿಮಿಷಾಂಭ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.
ಪೂಜೆ ಸಲ್ಲಿಕೆಯ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಅಮೋಘ ವರ್ಷ ಕೂಡ ಹಾಜರಿದ್ದರು. ಅಮೋಘ ವರ್ಷ ಮಾತನಾಡಿ, ಅಭಿಮಾನಿಗಳಿಗೆ ಪುನೀತ್ ರಾಜ್‌ಕುಮಾರ್ ಬಿಟ್ಟು ಹೋಗಿರುವ ಕೊನೆಯ ಕಥೆ ಗಂಧದಗುಡಿ. ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರು ಅನೇಕ ಸಂದೇಶಗಳನ್ನು ನೀಡಿದ್ದಾರೆ. ಅಭಿಮಾನಿಗಳಂತಲೇ ಮಾಡಿರುವ ಸಿನಿಮಾ ಇದಾಗಿದ್ದು, ಹಾರೈಸಬೇಕೆಂದರು.
ಇದನ್ನೂ ಓದಿ: ವಿಶ್ವಾದ್ಯಂತ ತೆರೆಗೆ ಅಪ್ಪಳಿಸಿದ ಗಂಧದ ಗುಡಿ.. ಅಭಿಮಾನಿಗಳ ಜೊತೆ ರಾಘಣ್ಣ ಡ್ಯಾನ್ಸ್