ಮಂಡ್ಯ: ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದಿರುವ ಮಾಜಿ ಸಚಿವ ನರೇಂದ್ರ ಸ್ವಾಮಿ, ನಾವು 78 ಶಾಸಕರಿದ್ರು ಅಧಿಕಾರವನ್ನು 37 ಶಾಸಕರಿದ್ದವರಿಗೆ ಕೊಟ್ಟಿದ್ದೇವೆ ಎನ್ನುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.
ನಮ್ಮ ಹೈ ಕಮಾಂಡ್ ವಿಚಾರಕ್ಕೆ ನಾವೆಲ್ಲ ಬದ್ದರಾಗಿದ್ದು, ಇದವರೆಗೂ ಯಾವುದನ್ನು ಪ್ರಶ್ನೆ ಮಾಡಿಲ್ಲ. ಅಧಿಕಾರ ಬಿಟ್ಟು ಕೊಟ್ಟ ಮೇಲೆ ಅಧಿಕಾರ ಮಾಡೋರು ಕಾಂಗ್ರೆಸ್ ಜೆಡಿಎಸ್‌ನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು. ಅದನ್ನ ಬಿಟ್ಟು ನಮಗೆ ಕಾಂಗ್ರೆಸ್ ನವರು ಸಹಕಾರ ನೀಡ್ತಿಲ್ಲ ಅನ್ನೋದ್ನ ಮಾಧ್ಯಮದ ಮುಂದೆ ಮಾತನಾಡೋದು ಸರಿ ಅಲ್ಲ ಎಂದರು.
ಸುಮಲತಾಗೆ ಜೆಡಿಎಸ್ ನಾಯಕರು ಬೆಂಬಲ ನೀಡಿರುವುದಕ್ಕೆ ಸಾಕ್ಷಿ ಇದೆ. ಯಾರ್ಯಾರು ಕುಮಾರಸ್ವಾಮಿವರಿಗೆ, ದೇವೇಗೌಡ್ರಿಗೆ ಎಲ್ಲೆಲ್ಲಿ ಮೋಸ ಮಾಡಿದ್ದಾರೆ. ಮಂಡ್ಯದಲ್ಲಿ ಏನೇನು ನಡೆದಿದೆ ಇವೆಲ್ಲವು ಚರ್ಚೆಗೆ ಈಗಾಗಲೇ ಬಂದು ಬಿಟ್ಟಿದ್ದು, ಸದ್ಯದಲ್ಲೇ ಎಲ್ಲಾ ಬಹೀರಂಗವಾಗಲಿದೆ ಎಂದರು.
ಇನ್ನೂ ಇದೇ ವೇಳೆ ಮಾತನಾಡಿದ ಅವರು, ನನ್ನ ಪಕ್ಷದ ಬಗ್ಗೆಯಾಗಲಿ, ನನ್ನ ತೀರ್ಮಾನಗಳ ಬಗ್ಗೆಯಾಗಲಿ ಮಾತನಾಡುವುದಕ್ಕೆ, ಪ್ರಶ್ನೆ ಮಾಡೋದಕ್ಕೆ ಆತನಿಗೆ ಯಾವ ಅರ್ಹತೆ ಕೂಡ ಇಲ್ಲ. ನಾನೊಬ್ಬ ಸ್ವಾಭಿಮಾನಿ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗೋ ವಿಚಾರವನ್ನ ನಾನು ಯಾವತ್ತು ಮಾಡಲ್ಲ ಎಂದು ಜೆಡಿಎಸ್ ಶಾಸಕ ಅನ್ನದಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಅವರ ಅಭಿಮಾನಿ. ಅವರು ಅಭಿವೃದ್ದಿಯ ಹರಿಕಾರ. ಸಾಮಾನ್ಯ ಜನರು ಕೂಡ ಸಿದ್ದರಾಮಯ್ಯ ಮತ್ತೊಮ್ಮೆ ಸಿ.ಎಂ. ಆಗಲಿ ಅಂತಿದ್ದಾರೆ ಎಂದರು.