ETV Bharat / state

ನಿಜ ಜೀವನದಲ್ಲೂ 'ರೀಲ್ ಸ್ಟೋರಿ' ಅಳವಡಿಸಿಕೊಂಡ ಮಂಡ್ಯ ಹುಡ್ಗಿ.. ಹಳ್ಳಿಗೆ ಬಂದು ಹೆರಿಗೆ ಮಾಡಿಸಿಕೊಂಡ ನಟಿ - ಮಂಡ್ಯದ ಹಳ್ಳಿಯಲ್ಲಿ ಮಗುವಿಗೆ ಜನ್ಮ ನೀಡಿದ ನಟಿ

ಖಾಸಗಿ ವಾಹಿನಿಯೊಂದರ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋ ಕೆಲ ವರ್ಷಗಳ ಹಿಂದೆ ಎಲ್ಲರ ಮನೆ ಮಾತಾಗಿತ್ತು. ಅದರಲ್ಲಿ ಮಂಡ್ಯದ ಹುಡ್ಗಿ ಪೂರ್ಣಿಮಾ ಗಮನ ಸೆಳೆದಿದ್ದರು. ಇದೀಗ ಅವರು ಬೆಂಗಳೂರಿನಿಂದ ಮಂಡ್ಯಕ್ಕೆ ಬಂದು ಹಳ್ಳಿಯಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ.

actress-poornima-gave-birth-to-baby-boy-in-mandya
ರೀಲ್ ಸ್ಟೋರಿ ನಿಜಜೀವನಕ್ಕೆ ಅಳವಡಿಸಿಕೊಂಡ ಮಂಡ್ಯ ಹುಡ್ಗಿ.. ಹಳ್ಳಿಗೆ ಬಂದು ಹೆರಿಗೆ ಮಾಡಿಸಿಕೊಂಡ ನಟಿ ಪೂರ್ಣಿಮಾ
author img

By

Published : Jun 25, 2022, 6:13 PM IST

ಮಂಡ್ಯ: ರೀಲ್ ಸ್ಟೋರಿಯನ್ನು ನಿಜವಾದ ಜೀವನಕ್ಕೆ ಅಳವಡಿಸಿಕೊಂಡ ನಟಿ ಪೂರ್ಣಿಮಾ, ಹಳ್ಳಿಗೆ ಬಂದು ಹೆರಿಗೆ ಮಾಡಿಸಿಕೊಂಡಿದ್ದಾರೆ. 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋ ಖ್ಯಾತಿಯ ಪೂರ್ಣಿಮಾ ಮಂಡ್ಯ ತಾಲೂಕಿನ ಕೀಲಾರ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಖಾಸಗಿ ವಾಹಿನಿಯೊಂದರ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋ ಕೆಲ ವರ್ಷಗಳ ಹಿಂದೆ ಎಲ್ಲರ ಮನೆ ಮಾತಾಗಿತ್ತು. ಅದರಲ್ಲಿ ಮಂಡ್ಯದ ಹುಡ್ಗಿ ಪೂರ್ಣಿಮಾ ಕೂಡ ಭಾಗವಹಿಸಿ ಗಮನ ಸೆಳೆದಿದ್ದರು. ಈ ಶೋದಿಂದ ಅವರು ಕೆಲ ಫಾಲೋವರ್ಸ್ ಹೊಂದಿದ್ದಾರೆ. ಇದಾದ ಬಳಿಕ ಹಲವು ಧಾರಾವಾಹಿ ಸೇರಿ ಸಿನಿಮಾಗಳಲ್ಲೂ ಪೂರ್ಣಿಮಾ ನಟಿಸಿದ್ದಾರೆ. ಸದ್ಯ ಅವರು ಬೆಂಗಳೂರಿನಲ್ಲಿ ವಾಸವಿದ್ದಾರೆ.

actress-poornima-gave-birth-to-baby-boy-in-mandya
ಮಗುವಿನೊಂದಿಗೆ ನಟಿ ಪೂರ್ಣಿಮಾ

ಕೆಲ ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪೂರ್ಣಿಮಾ ಗರ್ಭಿಣಿಯಾಗಿದ್ದರು. ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿದ್ದರು. ಆದರೆ ಹೆರಿಗೆ ದಿನ ಹತ್ತಿರವಾಗ್ತಿದ್ದಂತೆ ವೈದ್ಯರು ಪ್ಲಾಸೆಂಟಾ ಕೆಳಗೆ ಬಂದಿದೆ, ಹೀಗಾಗಿ ಹೆರಿಗೆ ಮಾಡಿದರೆ ತಾಯಿ ಅಥವಾ ಮಗುವಿಗೆ ತೊಂದರೆಯಾಗಲಿದೆ ಎಂದಿದ್ದಾರೆ. ಆ ಬಳಿಕ ನಟಿ ಪೂರ್ಣಿಮಾ ಬೆಂಗಳೂರಿನ ಅನೇಕ ಆಸ್ಪತ್ರೆಗಳಿಗೆ ಹೋಗಿ ಹೆರಿಗೆ ತಜ್ಞರನ್ನು ಸಂಪರ್ಕಿಸಿದ್ದರು. ಎಲ್ಲೆಡೆ ವೈದ್ಯರು ನಿನಗೆ ಪ್ಲಾಸೆಂಟಾ ಕೆಳಗೆ ಬಂದಿದ್ದು, ಹೆರಿಗೆ ವೇಳೆ ಸಮಸ್ಯೆಯಾಗಲಿದೆ ಎಂದಿದ್ದರಂತೆ.

ಬೆಂಗಳೂರಿನ ವೈದ್ಯರೆಲ್ಲ ಹೀಗೆ ಹೇಳುತ್ತಿದ್ದಾರೆ ಎಂದು ಪೂರ್ಣಿಮಾ ತಮ್ಮ ಹತ್ತಿರದ ಸಂಬಂಧಿ ಬಳಿ ಹೇಳಿಕೊಂಡಿದ್ದರು‌. ಆ ಬಳಿಕ ಅವರು ತಮ್ಮ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಅಲ್ಲಿನ ವೈದ್ಯರು ಚೆನ್ನಾಗಿ ನೋಡಿಕೊಳ್ತಾರೆ. ಜೊತೆಗೆ ಸಕಲ ಸೌಕರ್ಯಗಳಿವೆ ಎಂದು ತಿಳಿಸಿದ್ದರು.

ಮಗು, ಪತಿಯೊಂದಿಗೆ ನಟಿ ಪೂರ್ಣಿಮಾ

ಬಳಿಕ ಅವರ ಮಾತಿನಂತೆ ಬೆಂಗಳೂರಿನಿಂದ ಮಂಡ್ಯ ತಾಲೂಕಿನ ಕೀಲಾರ ಗ್ರಾಮಕ್ಕೆ ಆಗಮಿಸಿದ ಪೂರ್ಣಿಮಾ, ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡಿದ್ದಾರೆ. ವೈದ್ಯರು ನಟಿ ಪೂರ್ಣಿಮಾ ಅವರಿಗೆ ಧೈರ್ಯ ತುಂಬಿದ್ದರು. ಈಗ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ಸದ್ಯ ಪೂರ್ಣಿಮಾ ಗಂಡು ಮಗುವಿನೊಂದಿಗೆ ಆರೋಗ್ಯವಾಗಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ ನಂದು ಎಂದು ಗುಟುರು ಹಾಕಿದ ಟಗರು.. ಶಿವಣ್ಣ-ಡಾಲಿಗೆ ಭರ್ಜರಿ ಸ್ವಾಗತ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.