ETV Bharat / state

ಕೊರೊನಾ ಹೆಸರು ಹೇಳಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾದ ಯುವಕರು ಸೆರೆ - ಕೊರೊನಾ ಭಯ ಹುಟ್ಟಿಸಿ ಕೆ.ಆರ್.ಪೇಟೆ ಸೇರಿಕೊಂಡಿದ್ದ ಅಪರಿಚಿತ ಯುವಕರು

ಕೆ.ಆರ್.ಪೇಟೆ ತಾಲ್ಲೂಕಿನ ಬಳ್ಳೆಕೆರೆ ಗ್ರಾಮದ ಯುವಕರು ಔಷಧಿ ತರಲು ಚಿನಕುರಳಿ ಗ್ರಾಮಕ್ಕೆ ಹೋಗಿ ಬರುವಾಗ ಕೆ.ಆರ್.ಪೇಟೆ ಚೆಕ್ ಪೋಸ್ಟ್ ಬಳಿ ತಪಾಸಣೆಗೆ ಒಳಗಾಗಿದ್ದರು.

accused surrender in Mandya police
ಕೆ.ಆರ್.ಪೇಟೆ ತಾಲ್ಲೂಕಿನ ಬಳ್ಳೆಕೆರೆ ಗ್ರಾಮದ ಯುವಕರು
author img

By

Published : Apr 9, 2020, 5:23 PM IST

ಮಂಡ್ಯ: ಕೊರೊನಾ ಭಯ ಹುಟ್ಟಿಸಿ ಕೆ.ಆರ್.ಪೇಟೆ ಸೇರಿಕೊಂಡಿದ್ದ ಅಪರಿಚಿತ ಯುವಕರು ಕೊನೆಗೂ ಪತ್ತೆಯಾಗಿದ್ದಾರೆ. ತಾಲ್ಲೂಕಿನ ಬಳ್ಳೆಕೆರೆ ಗ್ರಾಮದ ಈ ಯುವಕರು ಔಷಧಿ ತರಲು ಹೋಗಿ ಮರಳುವಾಗ ಪೊಲೀಸರಿಗೆ ಭಯ ಹುಟ್ಟಿಸಿದ ಬಗ್ಗೆ ಒಪ್ಪಿಕೊಂಡಿದ್ದಾರೆ.

ಬಳ್ಳೆಕೆರೆ ಗ್ರಾಮದ ಅಭಿ, ಅಪ್ಪು ಹಾಗೂ ಮಹೇಶ್ ಚಿನಕುರಳಿ ಗ್ರಾಮಕ್ಕೆ ಹೋಗಿ ಬರುವಾಗ ಕೆ.ಆರ್.ಪೇಟೆ ಚೆಕ್ ಪೋಸ್ಟ್ ಬಳಿ ತಪಾಸಣೆಗೆ ಒಳಗಾಗಿದ್ದಾರೆ. ಈ ವೇಳೆ ಯುವಕನೊಬ್ಬನ ಕೈ ಮೇಲೆ ಕ್ವಾರಂಟೈನ್ ಸೀಲ್ ನೋಡಿ ಚೆಕ್‌ಪೋಸ್ಟ್ ಸಿಬ್ಬಂದಿ ಪ್ರಶ್ನಿಸಿದಾಗ ಇವರು ತಪ್ಪಿಸಿಕೊಂಡು ಪರಾರಿಯಾಗಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಕೊನೆಗೂ ಅಪರಿಚಿತರನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೂರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.