ಮಂಡ್ಯ: ತಾಲೂಕಿನ ತೂಬಿನಕೆರೆ ಗ್ರಾಮದ ಹೊರವಲಯದಲ್ಲಿ ನಿರ್ಮಾಣವಾಗಿದ್ದ ಶೆಡ್ನಲ್ಲಿ ಗೋವುಗಳ ರಾಶಿ ರಾಶಿ ಮೂಳೆಗಳು ಪತ್ತೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದರ ಬೆನ್ನಲ್ಲೇ ಸಂಘಟನೆಯೊಂದು ಶೆಡ್ ಬಳಿ ಬಂದು ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ತೂಬಿನಕೆರೆ ಗ್ರಾಪಂ ಪಿಡಿಒ ಸ್ವಾಮಿ ಮಾತನಾಡಿ, "ಡಿ.13ನೇ ತಾರೀಖು ನಡೆದ ಸಾಮಾನ್ಯ ಸಭೆಯಲ್ಲಿ ಶೆಡ್ನಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಗ್ರಾಮಸ್ಥರು ನಮ್ಮ ಗಮನಕ್ಕೆ ತಂದರು. ಸಾಮಾನ್ಯ ಸಭೆ ಮುಗಿದ ತಕ್ಷಣ ಕಾರ್ಯದರ್ಶಿಯವರನ್ನು ಕಳುಹಿಸಿ ಶೆಡ್ ಮಾಲೀಕರ ಮನೆಗೆ ನೋಟಿಸ್ ತಲುಪಿಸಿ ಶೆಡ್ನಲ್ಲಿರುವ ತ್ಯಾಜ್ಯವನ್ನು ತೆರವುಗೊಳಿಸುವಂತೆ ತಿಳಿಸಿದ್ದೆವು. ಎರಡು ದಿನಗಳು ಕಳೆದರೂ ತ್ಯಾಜ್ಯವನ್ನು ತೆರವುಗೊಳಿಸಿರಲಿಲ್ಲ, ಈ ಸಂಬಂಧ ಗ್ರಾಮಸ್ಥರೊಬ್ಬರು ನಮಗೆ ಕರೆ ಮಾಡಿ ಮಾಹಿತಿ ನೀಡಿದರು. ನಾವು ಮತ್ತೆ ಶೆಡ್ ಮಾಲೀಕರಿಗೆ ತ್ಯಾಜ್ಯ ತೆರವು ಮಾಡುವಂತೆ ಹೇಳಿದಾಗ ಅವರು ಮಾಡುತ್ತೇವೆ ಎಂದಿದ್ದರು" ಎಂದು ಹೇಳಿದರು.
"ಶೆಡ್ ನಿರ್ಮಿಸಿಲು ಮಾಲೀಕರು ನಮ್ಮಿಂದ ಪರವಾನಗಿ ಪಡೆದುಕೊಂಡಿಲ್ಲ. ಮಾಲೀಕರು ತ್ಯಾಜ್ಯವನ್ನು ತೆರವುಗೊಳಿಸದೇ ಇದಿದ್ದರಿಂದ ಶೆಡ್ನಲ್ಲಿ ಏನು ಇಟ್ಟಿದ್ದಾರೆ ಎಂದು ಕರೆಸಿ ವಿಚಾರಣೆ ನಡೆಸುವಂತೆ ನಿನ್ನೆ ಪೊಲೀಸ್ ಠಾಣೆಗೆ ದೂರು ನೀಡಿದ್ದೆ" ಎಂದು ತಿಳಿಸಿದರು. ಇದರ ನಡುವೆ ಶೆಡ್ನಲ್ಲಿ ಇದ್ದ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಮನೆಗೆಲಸಕ್ಕೆ ಬಳಸಿಕೊಳ್ಳುತ್ತಿದ್ದ ಅಪ್ರಾಪ್ತ ಬಾಲಕಿಯರ ರಕ್ಷಣೆ: ಜ್ಯುವೆಲ್ಲರಿ ಶಾಪ್ ಮಾಲೀಕನ ವಿರುದ್ಧ ಎಫ್ಐಆರ್