ಮಂಡ್ಯ: ಟಾಟಾ ಸುಮೋ, ಗೂಡ್ಸ್ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆ ಸೇರಿ ಎಂಟು ಮಂದಿ ಮೃತಪಟ್ಟಿದ್ದಾರೆ. ಮೃತರೆಲ್ಲರೂ ನಾಗಮಂಗಲ ಪಟ್ಟಣದವರಾಗಿದ್ದಾರೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ರಾಮದೇವನಹಳ್ಳಿ ಗೇಟ್ ಬಳಿ ಘಟನೆ ನಡೆದಿದೆ. ಬೆಳ್ಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಯಲ್ಲಿ ಗಾಯಗೊಂಡಿದ್ದ ಇಬ್ಬರು ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದು, ಅವರನ್ನ ಸಾಯದಾ ಮತ್ತು ಅಕ್ಬರ್ ಅಲಿ ಎಂದು ಗುರುತಿಸಲಾಗಿದೆ.
ಮೃತಪಟ್ಟ ದುರ್ದೈವಿಗಳು :
ಬಾಕರ್ ಷರೀಫ್ ಬಿನ್ ಇಸ್ಮಾಯಿಲ್ ಷರೀಫ್ (50),ತಾಹೀರ್ ಬಿನ್ ಸುಲ್ತಾನ್ ಷರೀಫ್(30),ನೌಷದ್ ಬಿನ್ ಮಕ್ಬೂಲ್ ಪಾಷ(45),ಹಸೀನ್ ತಾಜ್ ಕೋಂ ಖಲೀಂ(50),ಮೆಹಬೂಬ್ ಜಾನ್ ಬಿನ್ ದಸ್ತರ್ ಖಾನ್(50), ಸಾಯದಾ,ಅಕ್ಬರ್ ಅಲಿ ಹಾಗೂ ಮಕ್ಸೂದ್ ಬಿನ್ ಮಹಮ್ಮದ್ (25) ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನ ಆದಿ ಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.