ETV Bharat / state

ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ಆರೋಪ: ಯುವಕನ ಮನೆ ಎದುರು ಧರಣಿ ಕುಳಿತ ಯುವತಿ

ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ಆರೋಪದ ಹಿನ್ನೆಲೆ ಯುವಕನ ಮನೆ ಎದುರು ಯುವತಿಯೊಬ್ಬಳು ಧರಣಿ ಕುಳಿತಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬಳ್ಳಗೆರೆ ಗ್ರಾಮದಲ್ಲಿ ನಡೆದಿದೆ.

young woman protesting  ಧರಣಿ ಕುಳಿತ ಯುವತಿ  ಮೋಸ ಮಾಡಿರುವ ಆರೋಪ  ಯುವಕನ ಮನೆ ಎದುರು ಧರಣಿ
ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ಆರೋಪ: ಯುವಕನ ಮನೆ ಎದುರು ಧರಣಿ ಕುಳಿತ ಯುವತಿ
author img

By ETV Bharat Karnataka Team

Published : Jan 9, 2024, 10:15 PM IST

ಮಂಡ್ಯ: ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ತನ್ನುನ್ನು ಲೈಂಗಿಕವಾಗಿ ಬಳಸಿಕೊಂಡು, ಬಳಿಕ ಜಾತಿ ಕಾರಣ ನೀಡಿ ಮದುವೆಯಾಗಲು ಹಿಂದೇಟು ಹಾಕಿದ್ದಾನೆ ಎಂದು ಆರೋಪಿ ಯುವತಿ, ನ್ಯಾಯಕ್ಕಾಗಿ ಯುವಕನ ಮನೆ ಎದುರು ಧರಣಿ ಕುಳಿತಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬಳ್ಳಗೆರೆ ಗ್ರಾಮದಲ್ಲಿ ಭಾನುವಾರ ನಡೆದಿದೆ.

ವಂಚನೆಗೊಳಗಾಗಿರುವ ಆರೋಪ ಮಾಡಿರುವ ಯುವತಿ ಮೂಲತಃ ನಂಜನಗೂಡಿನ ನಿವಾಸಿಯಾಗಿದ್ದಾರೆ. ಎಂಎ, ಬಿಇಡಿ ಪಾಸ್​ ಆಗಿರುವ ಯುವತಿ ಖಾಸಗಿ ಶಾಲೆಯೊಂದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಬಳ್ಳಗೆರೆ ಈಕೆಯ ಅಜ್ಜಿ ಊರಾಗಿದ್ದು, ಕಳೆದ ಹಲವು ವರ್ಷಗಳಿಂದಲೂ ಅಜ್ಜಿಯ ಮನೆಯಲ್ಲಿಯೇ ಇದ್ದಾರೆ. ಕಾಲೇಜಿಗೆ ಹೋಗಿ ಬರುವ ವೇಳೆ ಅದೇ ಗ್ರಾಮದ ಯುವಕನನ್ನು ಪರಿಚಯವಾಗಿತ್ತು. ಪರಿಚಯ ಸ್ನೇಹ ಪ್ರೀತಿಗೆ ತಿರುಗಿ, ಇಬ್ಬರೂ ಪರಸ್ಪರ ಪ್ರೀತಿಸಿ ದೈಹಿಕವಾಗಿ ಒಂದಾಗಿದ್ದಾರೆ. ಆದರೆ, ಪ್ರೀತಿಯ ಸಂದರ್ಭದಲ್ಲಿ ಇಲ್ಲದ ಜಾತಿ, ಮದುವೆ ವಿಚಾರ ಬಂದಾಗ ಅಡ್ಡಿಯಾಗಿತ್ತು. ಯುವತಿ ಮದುವೆಯಾಗುವಂತೆ ಒತ್ತಾಯ ಮಾಡಿದಾಗಲೆಲ್ಲಾ ಯುವಕ ಇಲ್ಲದೇ ಇರುವ ಸಬೂಬು ಹೇಳುತ್ತಿದ್ದ. ಜಾತಿ ಬೇರೆಯಾಗಿರುವುದರಿಂದ ಮೊದಲು ನನ್ನ ಜೊತೆ ಹುಟ್ಟಿದವರ ಮದುವೆಯಾಗಲಿ ನಂತರ ನಾವು ಮದುವೆಯಾಗೋಣ ಎಂದು ಹೇಳಿ ನಂಬಿಸುತ್ತಿದ್ದ ಎಂದು ಯುವತಿ ಆರೋಪ ಮಾಡಿದ್ದಾರೆ.

''ಯುವಕ ಬೆಂಗಳೂರಿನ ಖಾಸಗಿ ಗ್ಯಾರೇಜ್​ವೊಂದರಲ್ಲಿ ಕೆಲಸ ಮಾಡಿಕೊಂಡು ಅಲ್ಲಿಯೇ ಇರಲಾರಂಭಿಸಿದ್ದಾನೆ. ಆದರೆ, ಯುವಕನ ಮೇಲಿನ ಪ್ರೀತಿಯಿಂದ ಯುವತಿ ಬೆಂಗಳೂರಿಗೂ ತೆರಳಿದ್ದಳು. ಆದರೆ, ಯುವಕ ಮಾತ್ರ ಆಕೆಯನ್ನು ಮದುವೆ ಆಯಾಗಲು ಒಪ್ಪಲೇ ಇಲ್ಲ. ಜೊತೆಗೆ ಯುವತಿ ಕೈಗೆ ಸಿಗದೇ ಓಡಾಡಲು ಆರಂಭಿಸಿದ್ದ'' ಎಂದು ಯುವತಿ ತಿಳಿಸಿದ್ದಾಳೆ. ಯುವಕ ಬಳ್ಳಗೆರೆಯ ಊರಿನಲ್ಲೇ ಇದ್ದಾನೆ ಎಂದು ತಿಳಿದು ಆತನ ಮನೆ ಎದುರು ಯುವತಿ ಧರಣಿ ಕುಳಿತಿದ್ದಾಳೆ. ಯುವತಿ ಮೇಲೆ ಹಲ್ಲೆ ನಡೆಸಿ ಅಲ್ಲಿಂದ ಬಲವಂತವಾಗಿ ಕಳುಹಿಸಲಾಗಿದೆ. ಯುವಕನಿಂದ ಅನ್ಯಾಯಕ್ಕೊಳಗಾಗಿರುವ ನನ್ನ ಮಗಳಿಗೆ ನ್ಯಾಯ ದೊರಕಿಸಿಕೊಡಿ ಎಂದು ಯುವತಿಯ ಪೋಷಕರು ಒತ್ತಾಯಿಸಿದ್ದಾರೆ. ಯುವಕನ ಸಂಬಂಧಿಕರಿಂದ ಹಲ್ಲೆಗೊಳಗಾದ ಯುವತಿ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

ಇದನ್ನೂ ಓದಿ: ಕುಡಿದು ವಾಹನ ಚಾಲನೆ: ವ್ಹೀಲಿಂಗ್ ಮಾಡಿ ಆ್ಯಕ್ಸಿಡೆಂಟ್ ಮಾಡಿದ 711 ಮಂದಿಯ ಡಿಎಲ್‌ ಕ್ಯಾನ್ಸಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.