ETV Bharat / state

ಬಿಎಸ್‌ವೈ ಸಿಎಂ ಆಗಲೆಂದು ಹರಕೆ ಕಟ್ಟಿಕೊಂಡ ಅಭಿಮಾನಿಗೆ ಸಿಗಲಿದೆ ವಿಶೇಷ ಉಡುಗೊರೆ: ಅದೇನು ಗೊತ್ತಾ!? - Karnataka political news

ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಆಗಲೆಂದು ಹರಕೆ ಕಟ್ಟಿಕೊಂಡಿದ್ದ ಅಭಿಮಾನಿಯೊಬ್ಬರಿಗೆ ವಿಶೇಷ ಉಡುಗೊರೆ ಸಿಗಲಿದೆ. ಸಿಎಂ ಬಿಎಸ್​ವೈ ಅವರೇ ಇದನ್ನು ಖಚಿತಪಡಿಸಿದ್ದು, ಶೀಘ್ರವೇ ಅಭಿಮಾನಿಗೆ ಉಡುಗೊರೆ ನೀಡಲಿದ್ದಾರಂತೆ.

BSY Fan
author img

By

Published : Aug 1, 2019, 11:07 PM IST

ಮಂಡ್ಯ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಅಭಿಮಾನಿಯೊಬ್ಬ ಬಿ.ಎಸ್‌.ಯಡಿಯೂರಪ್ಪ ಸಿಎಂ ಆಗಲೆಂದು ಹರಕೆ ಕಟ್ಟಿಕೊಂಡಿದ್ದ. ಆದರೆ, ಬಿಎಸ್‌ವೈ ಸಿಎಂ ಆಗಿದ್ದು ಕೆಲವೇ ದಿನಗಳು ಮಾತ್ರ. ಮತ್ತೆ ಸಿಎಂ ಆಗಲು ಒಂದೂವರೆ ವರ್ಷ ಕಾಲಿಗೆ ಚಪ್ಪಲಿಯನ್ನೇ ಧರಿಸಿರಲಿಲ್ಲ. ಈಗ ಅಭಿಮಾನಿ ಹರಕೆ ಫಲಿಸಿದ್ದು, ಸಿಎಂ ಯಡಿಯೂರಪ್ಪ ಅವರು ಅಭಿಮಾನಿಗೆ ವಿಶೇಷ ಉಡುಗೊರೆ ನೀಡಲಿದ್ದಾರಂತೆ.

ಬಿಎಸ್​ವೈ ಅಭಿಮಾನಿ
ಮಂಡ್ಯ ತಾಲೂಕಿನ ಉಪ್ಪರಕನಹಳ್ಳಿಯ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಕಾಳಿಕಾಂಬ ದೇವಿಗೆ ಬಿಎಸ್​ವೈ ಸಿಎಂ ಆಗುವ ತನಕ ಕಾಲಿಗೆ ಪಾದರಕ್ಷೆ ಹಾಕುವುದಿಲ್ಲ ಎಂದು ಶಪಥ ಮಾಡಿದ್ದ. ಚುನಾವಣೆ ಮುಗಿದ ಬಳಿಕ ಸಿಎಂ ಆದರು. ಆಗ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದರು. ಈಗ ಯಡಿಯೂರಪ್ಪ ಮತ್ತೆ ಸಿಎಂ ಆದ ಹಿನ್ನೆಲೆ ಹರಕೆ ತೀರಿದೆ. ಆದರೆ ಕಾಲಿಗೆ ಇನ್ನೂ ಪಾದರಕ್ಷೆ ಹಾಕಿಲ್ಲ. ಮೊನ್ನೆ ಮೇಲುಕೋಟೆಗೆ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಅಭಿಮಾನಿಗೆ ಪಾದರಕ್ಷೆ ಕೊಡಿಸುವ ಭರವಸೆ ನೀಡಿದ್ದಾರೆ. ಶೀಘ್ರವಾಗಿ ಸಿಎಂ ಉಡುಗೊರೆ ನೀಡಲಿದ್ದು, ಅಂದು ಪಾದರಕ್ಷೆ ಹಾಕಲು ಅಭಿಮಾನಿ ನಿರ್ಧಾರ ಮಾಡಿದ್ದಾರೆ.

Intro:ಮಂಡ್ಯ: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯ ಅಭಿಮಾನಿಯೊಬ್ಬ ಬಿಎಸ್‌ವೈ ಪರವಾಗಿ ಹರಕೆ ಕಟ್ಟಿಕೊಂಡಿದ್ದ. ಆದರೆ ಬಿಎಸ್‌ವೈ ಸಿಎಂ ಆಗಿದ್ದು ಕೇವಲ ಕೆಲವೇ ದಿನಗಳು ಮಾತ್ರ. ಆದರೆ ಆತನ ಹರಕೆಯಿಂದ ಕಾಲಿಗೆ ಚಪ್ಪಲಿಯನ್ನೇ ಒಂದುವರೆ ವರ್ಷ ದರಿಸಿರಲಿಲ್ಲ. ಆದರೆ ಈಗ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಹರಕೆ ಫಲಿಸಿದೆ. ಹೀಗಾಗಿ ಸಿಎಂ ಯಡಿಯೂರಪ್ಪ ಅಭಿಮಾನಿಗೆ ವಿಶೇಷ ಉಡುಗೊರೆ ನೀಡಲಿದ್ದಾರೆ. ಹಾಗಾದರೆ ಆ ಉಡುಗೊರೆ ಏನು ಎಂಬುದನ್ನು ನೀವೇ ನೋಡಿ.

Body:ಮಂಡ್ಯ ತಾಲ್ಲೂಕಿನ ಉಪ್ಪರಕನಹಳ್ಳಿಯ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಕಾಳಿಕಾಂಭ ದೇವರ ಬಳಿ ಶಪಥ ಮಾಡಿದ್ದರು. ಬಿ.ಎಸ್. ಯಡಿಯೂರಪ್ಪ ಸಿಎಂ ಆಗುವ ವರೆಗೂ ಕಾಲಿಗೆ ಪಾದರಕ್ಷೆ ಹಾಕುವುದಿಲ್ಲ ಎಂಬ ಶಪಥ ಅದು. ಚುನಾವಣೆ ಮುಗಿದು ಯಡಿಯೂರಪ್ಪ ಸಿಎಂ ಆದರು. ಆದರೆ ಬಹುಮತ ಸಾಬೀತು ಪಡಿಸುವಲ್ಲಿ ವಿಫಲವಾದ ಹಿನ್ನಲೆ ಶಪಥ ಹಾಗೆಯೇ ಉಳಿದುಕೊಂಡಿತ್ತು.
ಈಗ ಯಡಿಯೂರಪ್ಪ ಸಿಎಂ ಆದ ಹಿನ್ನಲೆ ಹರಕೆ ತೀರಿದೆ. ಆದರೆ ಕಾಲಿಗೆ ಇನ್ನೂ ಪಾದರಕ್ಷೆ ಹಾಕಿಲ್ಲ. ಮೊನ್ನೆ ಮೇಲುಕೋಟೆಗೆ ಬಂದಿದ್ದ ಸಿಎಂ ಯಡಿಯೂರಪ್ಪ ಅಭಿಮಾನಿಗೆ ಪಾದರಕ್ಷೆ ಕೊಡಿಸುವ ಭರವಸೆ ನೀಡಿದ್ದಾರೆ. ಶೀಘ್ರವಾಗಿ ಸಿಎಂ ಉಡುಗೊರೆ ನೀಡಲಿದ್ದು, ಅಂದು ಪಾದರಕ್ಷೆ ಹಾಕಲು ಅಭಿಮಾನಿ ನಿರ್ಧಾರ ಮಾಡಿದ್ದಾರೆ.

ಬೈಟ್: ಶಿವಕುಮಾರ್ ಆರಾಧ್ಯ, ಬಿಎಸ್‌ವೈ ಅಭಿಮಾನಿ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.