ETV Bharat / state

ಮಂಡ್ಯದಲ್ಲಿ ಕೊರೊನಾಗೆ ಗರ್ಭಿಣಿ ಬಲಿ: ಪ್ರಪಂಚ ನೋಡುವ ಮೊದ್ಲೇ ಕಣ್ಮುಚ್ಚಿದ ಕಂದ

ಮಂಡ್ಯದಲ್ಲಿ ಕೊರೊನಾಗೆ ಗರ್ಭಿಣಿ ಬಲಿಯಾಗಿದ್ದು, ಮಗು ಪ್ರಪಂಚ ನೋಡುವ ಮೊದಲೇ ಕಣ್ಮುಚ್ಚಿದೆ.

pregnant died, pregnant died by covid, pregnant died by covid in mandya, Mandya news, Mandya corona news, ಗರ್ಭಿಣಿ ಸಾವು, ಕೊರೊನಾಗೆ ಗರ್ಭಿಣಿ ಬಲಿ, ಮಂಡ್ಯದಲ್ಲಿ ಕೊರೊನಾಗೆ ಗರ್ಭಿಣಿ ಸಾವು, ಮಂಡ್ಯ ಸುದ್ದಿ, ಮಂಡ್ಯ ಕೊರೊನಾ ಸುದ್ದಿ,
ಮಂಡ್ಯದಲ್ಲಿ ಕೊರೊನಾಗೆ ಗರ್ಭಿಣಿ ಬಲಿ
author img

By

Published : May 12, 2021, 2:22 PM IST

ಮಂಡ್ಯ: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಕೋವಿಡ್ ಸೋಂಕಿತ ಗರ್ಭಿಣಿ ಚಿಕಿತ್ಸೆ ಫಲಕಾರಿಯಾಗದೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ನಾಗಮಂಗಲ ತಾಲೂಕಿನ ಕಸಬಾ ಹೋಬಳಿಯ ಅರೆಹಳ್ಳಿ ಗ್ರಾಮದ ಪ್ರಶಾಂತ್‌ ಕುಮಾರ್ ಪತ್ನಿ ಚೈತ್ರಾ (26) ಮೃತಪಟ್ಟವರು. ಐದು ತಿಂಗಳ ಗರ್ಭಿಣಿಯಾಗಿದ್ದ ಚೈತ್ರಾ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಹುಲಿಕೆರೆ ಗ್ರಾಮದ ತಾಯಿ ಮನೆಗೆ ವಿಶ್ರಾಂತಿಗೆಂದು ತೆರಳಿದ್ದರು.

pregnant died, pregnant died by covid, pregnant died by covid in mandya, Mandya news, Mandya corona news, ಗರ್ಭಿಣಿ ಸಾವು, ಕೊರೊನಾಗೆ ಗರ್ಭಿಣಿ ಬಲಿ, ಮಂಡ್ಯದಲ್ಲಿ ಕೊರೊನಾಗೆ ಗರ್ಭಿಣಿ ಸಾವು, ಮಂಡ್ಯ ಸುದ್ದಿ, ಮಂಡ್ಯ ಕೊರೊನಾ ಸುದ್ದಿ,
ಮಂಡ್ಯದಲ್ಲಿ ಕೊರೊನಾಗೆ ಗರ್ಭಿಣಿ ಬಲಿ

ವಾರದ ಹಿಂದೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇವರು ತುರುವೇಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗೊಳಪಟ್ಟಿದ್ದರು. ಆಗ ಕೊರೊನಾ ಸೋಂಕು ದೃಢಪಟ್ಟಿತ್ತು. ಎರಡು ದಿನಗಳ ಕಾಲ ಅದೇ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಚೈತ್ರಾಗೆ ಉಸಿರಾಟ ಸಮಸ್ಯೆ ಕಂಡು ಬ೦ದಿದೆ. ಬಳಿಕ ಅವರನ್ನು ಮೇ 8ರಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

ಉಸಿರಾಟ ಸಮಸ್ಯೆ ತೀವ್ರಗೊಂಡು ಆಕ್ಸಿಜನ್‌ ಲೆವೆಲ್‌ ಕಡಿಮೆಯಾದ ಪರಿಣಾಮ ಗರ್ಭಿಣಿ ಚೈತ್ರಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಐದು ವರ್ಷದ ಹಿಂದೆ ಮದುವೆಯಾಗಿದ್ದು ಒಂದೂವರೆ ವರ್ಷದ ಗಂಡು ಮಗುವಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ವಿಧಿ ನೀನೆಷ್ಟು ಕ್ರೂರಿ? ಒಬ್ಬ ಮಗನ ಅಂತ್ಯಕ್ರಿಯೆ ಮುಗಿಸಿ ಬರುವಷ್ಟರಲ್ಲಿ ಮತ್ತೊಬ್ಬ ಪುತ್ರ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.