ETV Bharat / state

ಮಂಡ್ಯದಲ್ಲಿ ಬಾಲಕಿ ಮೇಲೆ ಅತ್ಯಾಚಾರ.. ಮತಾಂತರ ಒತ್ತಡದ ಆರೋಪದಲ್ಲಿ ವಿವಾಹಿತ ಬಂಧನ - ಮಂಡ್ಯದಲ್ಲಿ ಹಿಂದೂ ಯುವತಿ ಮೇಲೆ ಅತ್ಯಾಚಾರ

ಮನೆ ಎದುರು ಇದ್ದಂತಹ ಬಾಲಕಿಯೊಂದಿಗೆ ಸ್ನೇಹ ಬೆಳಸಿದ ವಿವಾಹಿತನೊಬ್ಬ ಬಳಿಕ ಬಾಲಕಿ ಮೇಲೆ ಅತ್ಯಾಚಾರ ಎಸಗಿದಲ್ಲದೇ ಆತನ ವಿರುದ್ಧ ಮತಾಂತರ ಒತ್ತಡದ ಆರೋಪ ಕೇಳಿ ಬಂದಿದೆ.

Mnd_
ಮಂಡ್ಯದಲ್ಲಿ ಬಾಲಕಿ ಮೇಲೆ ಅತ್ಯಾಚಾರ
author img

By

Published : Nov 22, 2022, 7:58 PM IST

Updated : Nov 22, 2022, 9:11 PM IST

ಮಂಡ್ಯ: ವಿವಾಹಿತನೊಬ್ಬ ಮದುವೆಯಾಗುವುದಾಗಿ ನಂಬಿಸಿ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಮತಾಂತರ ಆಗುವಂತೆ ಒತ್ತಡ ಹಾಕುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಈ ಘಟನೆ ನ.11ರಂದು ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬಂಧಿತ ಆರೋಪಿ.

ಏನಿದು ಪ್ರಕರಣ?: 25 ವರ್ಷದ ವಿವಾಹಿತ ಯೂನಸ್​ ಪಾಷಾ ಎಂಬಾತ​ ತನ್ನ ಎದುರು ಮನೆಯಲ್ಲಿ ವಾಸವಿದ್ದ 13 ವರ್ಷದ ಬಾಲಕಿಯೊಂದಿಗೆ ಸ್ನೇಹ ಬೆಳಸಿದ್ದ​. ಅಲ್ಲದೇ ಹೆತ್ತವರಿಗೆ ತಿಳಿಯದಂತೆ ಆ ಬಾಲಕಿಗೆ ಮೊಬೈಲ್ ಸಹ ಕೊಡಿಸಿದ್ದನಂತೆ. ಬಳಿಕ ಬಾಲಕಿಯೊಂದಿಗೆ ಸಲಹೆ ಬೆಳಸಿಕೊಂಡ ಯೂನಸ್​, ಆಕೆಗೆ ವಿಡಿಯೋ ಕಾಲ್‍ ಮಾಡಿ ಬಾಲಕಿಯ ನಗ್ನ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದ ಎನ್ನಲಾಗಿದೆ.

ಹೀಗೆ ಸಲಹೆ ಬೆಳೆಸಿಕೊಂಡ ವಿವಾಹಿತ ಯೂನಸ್​ ಮತಾಂತರ ಆಗುವಂತೆ ಬಾಲಕಿಯನ್ನು ಒತ್ತಾಯಿಸಿದ್ದ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ ಮತಾಂತರ ಆಗದಿದ್ದರೆ ನಗ್ನ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್​ ಮಾಡುವುದಾಗಿ ಬೆದರಿಸಿದ್ದಾನೆ. ಇನ್ನು ಬಾಲಕಿಯ ಪೋಷಕರು ಇದೇ ನವೆಂಬರ್ 8 ರಂದು ಶಿರಡಿಗೆ ಹೋಗಿದ್ದರು. ಈ ವೇಳೆ ಅಜ್ಜಿ ಮನೆಗೆ ಹೋಗಿದ್ದ ಬಾಲಕಿ ಮೇಲೆ ಯೂನಸ್​ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ಬಾಲಕಿಯ ನಡುವಳಿಕೆಯಲ್ಲಿ ಬದಲಾವಣೆ ಕಂಡು ಬಂದ ಹಿನ್ನೆಲೆ ಪೋಷಕರು ಆಕೆಯನ್ನು ವಿಚಾರಿಸಿದ್ದಾರೆ. ಆಗ ಬಾಲಕಿ ತಂದೆ-ತಾಯಿಗೆ ನಡೆದ ಘಟನೆಯನ್ನು ತಿಳಿಸಿದ್ದಾಳೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ತಮ್ಮ ಮಗಳ ಮೇಲೆ ಅತ್ಯಾಚಾರ ನಡೆದಿರುವುದು ಪೋಷಕರಿಗೆ ಗೊತ್ತಾಗಿದೆ. ಆ ಬಳಿಕ ಬಾಲಕಿಯ ಪೋಷಕರು ಪೊಲೀಸ್​ ಠಾಣೆಗೆ ತೆರಳಿ ಈ ಸಂಬಂಧ ದೂರು ನೀಡಿದ್ದಾರೆ. ಪೋಷಕರ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರಕರಣದ ಬಗ್ಗೆ ಎಸ್​​​ಪಿ ಹೇಳಿದ್ದೇನು?: ಈ ಬಗ್ಗೆ ಮಾತನಾಡಿರುವ ಮಂಡ್ಯ ಜಿಲ್ಲಾ ವರಿಷ್ಠಾಧಿಕಾರಿ, ಈ ಪ್ರಕರಣದ ಬಗ್ಗೆ ದೂರು ದಾಖಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ. ತನಿಖೆ ಬಳಿಕವೇ ಎಲ್ಲ ವಿಚಾರ ಗೊತ್ತಾಗಲಿದೆ. ಈಗಲೇ ಈ ಬಗ್ಗೆ ಏನೂ ಹೇಳಲಾಗುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Kalburgi Rape and murder Case: ಅಶ್ಲೀಲ ವಿಡಿಯೋಗಳನ್ನು ನೋಡಿ ಪ್ರಚೋದನೆಗೊಂಡು ಕೃತ್ಯ!

Last Updated : Nov 22, 2022, 9:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.