ETV Bharat / state

ಅವರದೇ ಸ್ಟೈಲ್​​​ನಲ್ಲಿ ಹುಚ್ಚ ವೆಂಕಟ್​​ಗೆ ಸಾರ್ವಜನಿಕರಿಂದ ಕ್ಲಾಸ್...ವಿಡಿಯೋ - ಚೆನ್ನೈ

ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್​ಗೆ ಪಾಂಡವಪುರದ ಸಾರ್ವಜನಿಕರು ಬುದ್ಧಿ ಮಾತು ಹೇಳಿದ್ದಾರೆ. ಒಳ್ಳೆ ಮಾರ್ಗದಲ್ಲಿ ನಡೆಯುವಂತೆ ತಿಳಿ ಹೇಳಿದ್ದಾರೆ. ​

huccha venkat
author img

By

Published : Aug 30, 2019, 12:08 PM IST

ಮಂಡ್ಯ: ಅತಿರೇಕದ ವರ್ತನೆ ನಿಲ್ಲಿಸುವಂತೆ ಸ್ಯಾಂಡಲ್​​ವುಡ್​ ನಟ, ನಿರ್ಮಾಪಕ ಹುಚ್ಚ ವೆಂಕಟ್​​​ಗೆ ಸಾರ್ವಜನಿಕರು ಬುದ್ಧಿವಾದ ಹೇಳಿದ್ದಾರೆ.

ವೆಂಕಟ್ ನಿನ್ನೆ ಮಡಿಕೇರಿಯಲ್ಲಿ ರಾದ್ದಾಂತ ಮಾಡುವ ಮುಂಚೆ ಪಾಂಡವಪುರದಲ್ಲಿ ಕಾಣಿಸಿಕೊಂಡಿದ್ದರು. ಅಭಿಮಾನಿಗಳು ಅವರ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದೇ ವೇಳೆ, ವ್ಯಕ್ತಿಯೊಬ್ಬ ನಡು ಬೀದಿಯಲ್ಲಿಯೇ ವೆಂಕಟ್ ಅವರಿಗೆ ಬುದ್ಧಿಮಾತು ಹೇಳಿದ್ದಾರೆ. ಹೀಗೆಲ್ಲ ವರ್ತಿಸಬಾರದು ಎಂದು ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ, ಇವರ ಮಾತಿಗೆ ಬೆಲೆ ಕೊಡದ ವೆಂಕಟ್​, ಸೊಂಟದ ಕೆಳಗಿನ ಭಾಷೆ ಬಳಸಿ ನಿಂದಿಸಿದ್ದಾರೆ. ಇದರಿಂದ ಕುಪಿತಗೊಂಡ ಆ ವ್ಯಕ್ತಿ ಸ್ವಲ್ಪ ಏರು ಧ್ವನಿಯಲ್ಲಿಯೇ ಅಶ್ಲೀಲ ಪದಗಳಿಂದ ಹುಚ್ಚ ವೆಂಕಟ್​​ಗೆ ಕ್ಲಾಸ್​ ತೆಗೆದುಕೊಂಡಿರುವ ವಿಡಿಯೋ ಈ ಟಿವಿ ಭಾರತ್​​ಗೆ ಲಭ್ಯವಾಗಿದೆ.

ಹುಚ್ಚ ವೆಂಕಟ್​​ಗೆ ಬುದ್ಧಿಮಾತು ಹೇಳುತ್ತಿರುವುದು

ಇನ್ನು ನಿನ್ನೆ ವೆಂಕಟ್ ಮಡಿಕೇರಿಯಲ್ಲಿ ಕಾರಿನ ಗ್ಲಾಸ್‍ ಪುಡಿ ಮಾಡಿ ಸಾರ್ವಜನಿಕರಿಂದ ಗೂಸಾ ಸಹ ತಿಂದಿದ್ದರು. ಕಳೆದ ವಾರ ಚೆನ್ನೈನಲ್ಲಿ ಹುಚ್ಚರಂತೆ ಅಲೆದು ಸುದ್ದಿಯಾಗಿದ್ದರು.

Intro:ಮಂಡ್ಯ: ನಟ, ನಿರ್ಮಾಪಕ ಹುಚ್ಚ ವೆಂಕಟ್ ಮಡಿಕೇರಿಯಲ್ಲಿ ಕಾಣಿಸಿಕೊಳ್ಳೋದಕ್ಕೂ ಮೊದಲು ಪಾಂಡವಪುರದಲ್ಲಿ ಕಾಣಿಸಿಕೊಂಡಿದ್ದರು. ಅಭಿಮಾನಿಗಳು ಅವರಿಂದ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಜೊತೆಗೆ ಅವರದ್ದೇ ಸ್ಟೈಲ್ ನಲ್ಲಿ ಬುದ್ದಿಮಾತು ಹೇಳಿದ್ದ ವಿಡಿಯೋ ಈಗ ವೈರಲ್ ಆಗಿದೆ.

ಹೌದು, ಹುಚ್ಚ ವೆಂಕಟ್ ಮಡಿಕೇರಿಯಲ್ಲಿ ಕಾರಿನ ಗ್ಲಾಸ್‍ ಪುಡಿ ಮಾಡಿ ಸಾರ್ವಜನಿಕರಿಂದ ಗೂಸ ತಿನ್ನುವುದಕ್ಕೂ ಮೊದಲು ಮಂಡ್ಯದ ಜನತೆ ಆತನಿಗೆ ಆತನ ಸ್ಟೈಲ್ ನಲ್ಲೇ ಬುದ್ದಿ ಹೇಳಿ ಕಳಿಸಿದ್ದರು. ಪಾಂಡವಪುರದಲ್ಲಿ ವ್ಯಕ್ತಿಯೊಬ್ಬ ಬುದ್ದಿ ಹೇಳುತ್ತಿದ್ದ ವಿಡಿಯೋ ಈಗ ಈ ಟಿವಿ ಭಾರತ್ ಗೆ ಲಭ್ಯವಾಗಿದೆ.

ಏಕ ವಚನದಲ್ಲೇ, ಮಂಡ್ಯದ ಬೈಗುಳದ ಮೂಲಕ ಬುದ್ಧಿ ಹೇಳಿದ್ದು, ಒಳ್ಳೆ ಮಾರ್ಗದಲ್ಲಿ ನಡೆಯುವಂತೆ ತಿಳಿ ಹೇಳಿದ್ದಾರೆ. ಈಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ.

Body:ಯತೀಶ್ ಬಾಬುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.