ETV Bharat / state

ಗಣಿಗಾರಿಕೆ ನಡೆಯಲಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಮಂಡ್ಯ ವ್ಯಕ್ತಿ! - ಮಂಡ್ಯ ಗಣಿ ಸುದ್ದಿ

ಕಲ್ಲು ಗಣಿಗಾರಿಕೆ ನಂಬಿ ಮೈತುಂಬ ಸಾಲ ಮಾಡಿಕೊಂಡಿದ್ದ ವ್ಯಕ್ತಿ- ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ- ಮಂಡ್ಯ ಜಿಲ್ಲೆಯಲ್ಲಿ ಪ್ರಕರಣ

man committed suicide over Mines stop in Mandya, Mandya man suicide news, Mandya mines news, Mandya news, ಮಂಡ್ಯದಲ್ಲಿ ಮೈನ್ಸ್ ನಿಲ್ಲಿಸಿದ್ದಕ್ಕೆ ವ್ಯಕ್ತಿ ಆತ್ಮಹತ್ಯೆ, ಮಂಡ್ಯದಲ್ಲಿ ವ್ಯಕ್ತಿ ಆತ್ಮಹತ್ಯೆ ಸುದ್ದಿ, ಮಂಡ್ಯ ಗಣಿ ಸುದ್ದಿ, ಮಂಡ್ಯ ಸುದ್ದಿ,
ಗಣಿಗಾರಿಕೆ ನಡೆಯಲಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಮಂಡ್ಯ ವ್ಯಕ್ತಿ
author img

By

Published : Jul 28, 2022, 2:17 PM IST

ಮಂಡ್ಯ: ಸದ್ಯ ಜಿಲ್ಲೆಯಲ್ಲಿ ಗಣಿಕಾರಿಗೆ ವಿಚಾರ ಚರ್ಚೆಯಾಗ್ತಿದೆ. ಗಣಿಕಾರಿಕೆಗೆ ರೈತರು ಮತ್ತು ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗ್ತಿದೆ. ಬೇಬಿ ಬೆಟ್ಟದಲ್ಲಿ ಇತ್ತೀಚೆಗೆ ಜಿಲ್ಲಾಡಳಿತದಿಂದ ನಡೆಯುತ್ತಿದ್ದ ಪರೀಕ್ಷಾರ್ಥ ಸ್ಫೋಟ ಪ್ರಕ್ರಿಯೆ ವಿರೋಧದಿಂದಾಗಿ ಒಂದೇ ದಿನಕ್ಕೆ ಸ್ಥಗಿತಗೊಂಡಿತ್ತು. ಆದ್ರೆ ಕಲ್ಲು ಗಣಿಗಾರಿಕೆ ನಿಲ್ಲಿಸಿದ ಕಾರಣ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಪಾಂಡವಪುರ ತಾಲೂಕಿನ ಕಾವೇರಿಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಮಂಜುನಾಥ್ (33) ಎಂಬ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೇಬಿ ಬೆಟ್ಟದಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯಲ್ಲಿ ಕಲ್ಲು ಒಡೆಯುವ ಕೆಲಸ ಮಾಡುತ್ತಿದ್ದ ಮಂಜುನಾಥ್ ರೂ. 4 ಲಕ್ಷ ರೂ.ಗಳಿಗೂ ಹೆಚ್ಚು ಸಾಲ ಮಾಡಿಕೊಂಡಿದ್ದರು. ಕಳೆದ ಒಂದು ವರ್ಷದಿಂದ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಿಂತುಹೋಗಿತ್ತು. ಇದರಿಂದ ಕಂಗಲಾಗಿದ್ದ ಮಂಜುನಾಥ್ ಆರ್ಥಿಕ ಪರಿಸ್ಥಿತಿಯಿಂದಲೂ ಜರ್ಜರಿತನಾಗಿದ್ದರು ಎಂದು ತಿಳಿದು ಬಂದಿದೆ.

ಕಳೆದ ಜುಲೈ 25ರಂದು ಬೇಬಿ ಬೆಟ್ಟದಲ್ಲಿ ಜಾರ್ಖಂಡ್ ವಿಜ್ಞಾನಿಗಳು ಪರೀಕ್ಷಾರ್ಥ ಸ್ಪೋಟ ನಡೆಸಿದ ನಂತರ ಮತ್ತೆ ಸರ್ಕಾರ ಗಣಿಗಾರಿಕೆಗೆ ಅನುಮತಿ ನೀಡುವುದೆಂದು ಮಂಜುನಾಥ್ ತಿಳಿದಿದ್ದರು. ಗಣಿಗಾರಿಕೆ ಮತ್ತೆ ಶುರುವಾದರೆ ಸಾಲ ತೀರಿಸಬಹುದೆಂದು ಅಂದುಕೊಂಡಿದ್ದರು. ಆದರೆ ಪರೀಕ್ಷಾರ್ಥ ಸ್ಫೋಟ ನಡೆಯದ ಕಾರಣ, ಗಣಿಗಾರಿಕೆ ಆರಂಭವಾಗುವುದು ಯಾವಾಗ, ಹೀಗಾದರೆ ಸಾಲ ತೀರಿಸುವುದು ಹೇಗೆ ಎಂದು ಮಂಜುನಾಥ್ ಆತಂಕಗೊಂಡಿದ್ದರಂತೆ.

ಕಲ್ಲುಗಣಿಕಾರಿಕೆ ನಿಂತ ಪರಿಣಾಮ ಸಾಲದ ಹೊರೆ ಬಗ್ಗೆ ಮನನೊಂದ ಮಂಜುನಾಥ್​ ಬುಧವಾರ ಸಂಜೆ ಕಾವೇರಿಪುರ ಗ್ರಾಮದ ಬಳಿ ಇರುವ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಪಾಂಡವಪುರ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಓದಿ: ಆನ್​ಲೈನ್​ ಸಾಲ ತೀರಿಸದ್ದಕ್ಕೆ ಅಶ್ಲೀಲ ಫೋಟೋ ಕಳುಹಿಸಿ ಅವಮಾನ: ಮನನೊಂದು ಆತ್ಮಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.