ETV Bharat / state

ಮಂಡ್ಯ: ಟ್ರ್ಯಾಕ್ಟರ್-ಬೈಕ್ ಮುಖಾಮುಖಿ ಡಿಕ್ಕಿ; ಸ್ಥಳದಲ್ಲೇ ಇಬ್ಬರು ಯುವಕರು ಸಾವು

author img

By

Published : Jul 21, 2023, 12:29 PM IST

ಮಂಡ್ಯದಲ್ಲಿ ಟ್ರ್ಯಾಕ್ಟರ್-ಬೈಕ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.

Road Accident in Mandya
ಟ್ರ್ಯಾಕ್ಟರ್-ಬೈಕ್ ಮುಖಾಮುಖಿ ಡಿಕ್ಕಿ

ಮಂಡ್ಯ: ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯ ಮಾದರಹಳ್ಳಿ ಗ್ರಾಮದಲ್ಲಿ ತಡರಾತ್ರಿ ಘಟನೆ ನಡೆಯಿತು. ಮಂಡ್ಯ ತಾಲೂಕಿನ ಉಮ್ಮಡಹಳ್ಳಿಯ ಎಸ್.ಡಿ.ಜಯರಾಮ್ ಬಡಾವಣೆಯ ನಿವಾಸಿಗಳಾದ ದಿಲೀಪ್ ಕುಮಾರ್ (22) ಹಾಗೂ ಶ್ರೀನಿವಾಸ್ (21) ಮೃತರು.

ಕೂಲಿ ಕೆಲಸಕ್ಕೆ ತೆರಳಿದ್ದ ಯುವಕರು ಕೆ.ಎಂ.ದೊಡ್ಡಿ ಮಾರ್ಗವಾಗಿ ಉಮ್ಮಡಹಳ್ಳಿಯ ಎಸ್.ಡಿ.ಜಯರಾಮ್ ಬಡಾವಣೆಯ ತಮ್ಮ ಮನೆಗೆ ತೆರಳುತ್ತಿದ್ದರು. ನಿನ್ನೆ (ಗುರುವಾರ) ರಾತ್ರಿ 10 ಗಂಟೆ ಸುಮಾರಿಗೆ ಮಾದರಹಳ್ಳಿ ಗ್ರಾಮದ ಸಮೀಪ ಬರುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ.

ತಕ್ಷಣ ಗ್ರಾಮಸ್ಥರು ಹಾಗೂ ವಾಹನ ಸವಾರರು ಯುವಕರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಶವಗಳನ್ನು ಮಿಮ್ಸ್ ಶವಾಗಾರದಲ್ಲಿ ಇಡಲಾಗಿದೆ. ಕೆ.ಎಂ.ದೊಡ್ಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಅಪರಿಚಿತ ವಾಹನಕ್ಕೆ ಬೈಕ್ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರು ಸಾವು

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಪಲ್ಟಿ: ಇತ್ತೀಚೆಗೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ತೂಬಿನಕೆರೆ ಹಾಗೂ ನಗುವನಹಳ್ಳಿ ಬಳಿ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿ‌, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿತ್ತು. ತೂಬಿನಕೆರೆ ಬಳಿಯ ಅಪಘಾತದಲ್ಲಿ ಮೈಸೂರಿನ ವೆಂಕಟಮ್ಮ (85) ಸಾವನ್ನಪ್ಪಿದ್ದರು. ವೆಂಕಟಮ್ಮ ಅವರ ಪುತ್ರಿ ಸುಧಾಮಣಿ (42) ಹಾಗೂ ಅಳಿಯ ವೆಂಕಟೇಶ್ (45) ತೀವ್ರವಾಗಿ ಗಾಯಗೊಂಡಿದ್ದರು.

ಮೈಸೂರಿನ ನಿವಾಸಿಗಳು ಬೆಂಗಳೂರಿನಿಂದ ತೆರಳುತ್ತಿದ್ದಾಗ ಮಾರುತಿ ಆಲ್ಟೋ ಕೆ 10 ಕಾರಿನ ಚಕ್ರ ಸಿಡಿದು ಎದುರಿನ ರಸ್ತೆಗೆ ಬಿದ್ದು ಅಪಘಾತ ಸಂಭವಿಸಿತ್ತು. ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಹೊರಗೆ ಬಿದ್ದಿದ್ದರು. ವೆಂಕಟಮ್ಮ ಅವರ ತಲೆಗೆ ತೀವ್ರ ಪೆಟ್ಟು ಬಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಸುನೀಗಿದ್ದರು. ಘಟನೆ ಕುರಿತು ಮಂಡ್ಯ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇದನ್ನೂ ಓದಿ: ಎರಡೂ ಪ್ರತ್ಯೇಕ ಅಪಘಾತ.. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಪಲ್ಟಿ.. ಮಹಿಳೆ ಸಾವು, ಇಬ್ಬರಿಗೆ ಗಂಭೀರ ಗಾಯ

ಕಾರುಗಳ ನಡುವೆ ಅಪಘಾತ, ಸ್ಥಳದಲ್ಲೇ ಮೂವರು ಸಾವು: ಇತ್ತೀಚೆಗೆ ಮಂಡ್ಯ ಜಿಲ್ಲೆಯ ಗೆಜ್ಜನಗೆರೆ ಬಳಿ ನಡೆದ ಕಾರುಗಳ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವಿಗೀಡಾದ್ದರು. ಮೃತರನ್ನು ನೀರಜ್ ಕುಮಾರ್, ಸೆಲ್ವಿ ಹಾಗೂ ಕಾರು ಚಾಲಕ ಎಂದು ಗುರುತಿಸಲಾಗಿತ್ತು. ಇನ್ನೋರ್ವ ವ್ಯಕ್ತಿ ಸಾಗರ್ ಎಂಬಾತ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಮದ್ದೂರು ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದರು

ಇದನ್ನೂ ಓದಿ: Mandya Accident: ಮಂಡ್ಯದ ಗೆಜ್ಜನಗೆರೆ ಬಳಿ ಕಾರುಗಳ ನಡುವೆ ಅಪಘಾತ; ಸ್ಥಳದಲ್ಲೇ ಮೂವರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.