ETV Bharat / state

'ಜಿಲ್ಲೆಯಲ್ಲಿ ನಡೆಯುವ ಗಣಿಗಾರಿಕೆಯಿಂದ ಸರ್ಕಾರಕ್ಕೆ 1,200 ಕೋಟಿ ರೂ ರಾಜಧನ ಬಂದಿಲ್ಲ'

author img

By

Published : Jul 13, 2021, 9:34 PM IST

ಯಾರು ಯಾರಿಗೆ ದಂಡ ಹಾಕಿದ್ದೀರಿ, ಎಷ್ಟು ಕೇಸ್ ಹಾಕಿದ್ದೀರಿ, ರಾಜಧನ ಕಲೆಕ್ಟ್ ಮಾಡಿದ್ದೀರಾ ಎಂದರೆ, ಅದರ ಬಗ್ಗೆ ಅಧಿಕಾರಿಗಳು ಮಾಹಿತಿ ಕೊಡ್ತಿಲ್ಲ. ಹೀಗಾಗಿ ಈಗ ಜಿಲ್ಲಾಧಿಕಾರಿಗೆ ಕಲೆಕ್ಟ್ ಮಾಡುವಂತೆ ಸೂಚಿಸಿದ್ದೇನೆ ಎಂದು ಸಂಸದೆ ಸುಮಲತಾ ತಿಳಿಸಿದ್ದಾರೆ.

sumalatha-ambarish
ಸಂಸದೆ ಸುಮಲತಾ ಅಂಬರೀಶ್

ಮಂಡ್ಯ: ಜಿಲ್ಲೆಯಲ್ಲಿ ನಡೆಯುವ ಗಣಿಗಾರಿಕೆಯಿಂದ 1,200 ಕೋಟಿ ರೂ ರಾಜಧನ ಸರ್ಕಾರಕ್ಕೆ ಬಂದಿಲ್ಲ. ಅಧಿಕಾರಿಗಳು ಗಣಿಗಾರಿಕೆಗಳಿಗೆ ಹಲವು ಬಾರಿ ದಂಡ ಹಾಕಿದ್ರೂ, ಯಾರೂ ಕ್ಯಾರೇ ಅಂದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಬೇಸರ ವ್ಯಕ್ತಪಡಿಸಿದರು.

ಸಂಸದೆ ಸುಮಲತಾ ಅಂಬರೀಶ್

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗಣಿಗಾರಿಕೆ ಕುರಿತು ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳು ನೋಟಿಸ್ ಕೊಟ್ರೂ ಸಹ ಯಾರೂ ಕೂಡ ರಾಜಧನ ಕಟ್ಟಿಲ್ಲ. ಈವರೆಗೆ ರಾಜಧನ ಕಲೆಕ್ಟ್ ಮಾಡುವಂತಹ ಕೆಲಸ ಕೂಡ ಆಗಿಲ್ಲ. ಅಲ್ಲದೇ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡ್ತಿಲ್ಲ ಎಂದು ಅಧಿಕಾರಿಗಳನ್ನ ಆರೋಪಿಸಿದರು.

ಅಧಿಕಾರಿಗಳ ಲೋಪ ಎದ್ದು ಕಾಣುತ್ತಿದೆ: ಅಧಿಕಾರಿಗಳ ಲೋಪ ಎದ್ದು ಕಾಣಿಸುತ್ತಿದೆ. ಯಾರು ಯಾರಿಗೆ ದಂಡ ಹಾಕಿದ್ದೀರಿ, ಎಷ್ಟು ಕೇಸ್ ಹಾಕಿದ್ದೀರಿ, ರಾಜಧನ ಕಲೆಕ್ಟ್ ಮಾಡಿದ್ದೀರಾ ಎಂದರೆ, ಅದರ ಬಗ್ಗೆ ಮಾಹಿತಿ ಕೊಡ್ತಿಲ್ಲ. ಹೀಗಾಗಿ ಈಗ ಜಿಲ್ಲಾಧಿಕಾರಿಗೆ ರಾಜಧಾನ ಕಲೆಕ್ಟ್ ಮಾಡುವಂತೆ ಸೂಚಿಸಿದ್ದೇನೆ ಎಂದರು.

ಒಂದು ಕೋಟಿ ಸಹ ರಾಜಧನ ಕಟ್ಟಿಲ್ಲ: ಅಕ್ರಮ ಗಣಿಗಾರಿಕೆ ಬಗ್ಗೆ ಸ್ಥಳೀಯರು ಮಾಹಿತಿ ಕೊಟ್ಟಿದ್ದಾರೆ. ಅಧಿಕಾರಿಗಳು ಅಲ್ಲಿ ಏನೂ ನಡೆಯುತ್ತಿಲ್ಲ ಅಂತಾರೆ. ಇದರ ಬಗ್ಗೆ ಸಚಿವರ ಬಳಿ ಮಾಹಿತಿ ಕೊಡ್ತೇನೆ ಎಂದ ಅವರು, ಅಧಿಕಾರಿಗಳು ರಾಜಧನ ಕಲೆಕ್ಟ್ ಮಾಡೋಕೆ 3 ತಿಂಗಳ ಅವಧಿ ಕೇಳಿದ್ದಾರೆ. ಆದರೆ ಆದಷ್ಟು ಬೇಗ ರಾಜಧನ ಕಲೆಕ್ಟ್ ಮಾಡಬೇಕು ಎಂದ ಅವರು, 1200 ಕೋಟಿಯಲ್ಲಿ ಒಂದು ಕೋಟಿಯನ್ನು ಸಹ ಕಟ್ಟಿಲ್ಲ. ಇದರಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತದೆ ಎಂದು ದೂರಿದರು.

ಸಂಸದೆ ಸುಮಲತಾ ಅಂಬರೀಶ್

ಒತ್ತಡ ಇದ್ರೆ ಲಿಖಿತ ರೂಪದಲ್ಲಿ ಕೊಡಿ: ಅಧಿಕಾರಿಗಳಿಗೆ ಯಾರದ್ದಾದ್ರೂ ಒತ್ತಡ ಇದ್ರೆ ಲಿಖಿತ ರೂಪದಲ್ಲಿ ಕೊಡಿ ಅಂತಾ ಕೇಳಿದ್ದೇನೆ. ಜಿಲ್ಲೆಯಲ್ಲಿ ರಾಜಧನ ಕಟ್ಟಿದ್ರೆ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದರು.

ಡ್ಯಾಂ ಹೈ ಸೆಕ್ಯೂರ್ ಇಲ್ಲ: ಹೈ ಸೆಕ್ಯೂರ್ ಇರಬೇಕಾದ ಜಾಗ ಕೆಆರ್​ಎಸ್​ ಡ್ಯಾಂ. ಆದ್ರೆ ನಾಲ್ಕು ಜನ ಮೋಜು-ಮಸ್ತಿ ಮಾಡಲು ಬರ್ತಾರೆ ಅಂದ್ರೆ ಏನಿದು ಎಂದು ಪ್ರಶ್ನಿಸಿದ ಅವರು, ಡ್ಯಾಂ ಸೆಕ್ಯೂರ್ ಆಗಿದೆ ಎಂದು ಕೂತ್ಕೊಂಡು ಹೇಳೋರು ಇದರ ಬಗ್ಗೆ ಯಾಕ್ ಮಾತನಾಡಲ್ಲ. ಐದೇ ನಿಮಿಷದಲ್ಲಿ ಏನೆಲ್ಲಾ ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದರಲ್ಲದೇ, ಗಣಿ ಸಚಿವರನ್ನ ಇಲ್ಲಿಗೆ ಕರೆತರಬೇಕು. ಪರಿಶೀಲಿಸಬೇಕು, ಕ್ರಮ ಕೈಗೊಳ್ಳಲು ಸ್ವಲ್ಪ ಸಮಯಾವಕಾಶ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಅಕ್ರಮ ಗಣಿಗಾರಿಕೆ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಇಲ್ಲ: ಕೆಆರ್​ಎಸ್​ ಡ್ಯಾಂ ಸುತ್ತಮುತ್ತಲಿನಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಕೇಳಿದ್ರೆ ಅಧಿಕಾರಿಗಳು 2018 ರಿಂದ ಗಣಿಗಾರಿಕೆ ನಡೆಯುತ್ತಿಲ್ಲ ಅಂತಾರೆ. ಆದರೆ ಬ್ಲಾಸ್ಟಿಂಗ್ ನಿಂದ ಕೆಆರ್​ಎಸ್​ ಡ್ಯಾಂಗೆ ಯಾವುದೇ ಅಪಾಯವಿಲ್ಲ ಅಂತ ಸರ್ಟಿಫಿಕೇಟ್ ಕೊಡುವುದು ನೀವಾ? ಅಂತಾ ಕೇಳಿದ್ರೆ, ನಾವಲ್ಲ ಅಂತಾರೆ ಎಂದು ಕಿಡಿಕಾರಿದರು.

ಡ್ಯಾಂ ಸುತ್ತಮುತ್ತಲಿನಲ್ಲಿ ರಿಸ್ಕಿ ಕೆಲಸ ನಡೀತಿದೆ: ಕೆಆರ್​ಎಸ್​ ಡ್ಯಾಂ ಸುತ್ತಮುತ್ತಲಿನಲ್ಲಿ ರಿಸ್ಕಿ ಕೆಲಸ ನಡೀತಿದೆ. ನಮ್ಮ ಮಹರಾಜರು ಕಟ್ಟಿದ ಜೀವನಾಡಿ ಅದು. ಡ್ಯಾಂ ಗೆ ಹೆಚ್ಚು ಕಡಿಮೆ ಆದ್ರೆ ನಾವು ಇರೋದಿಲ್ಲ. ನಮಗೆ, ಬೆಂಗಳೂರಿನವರಿಗೆ ಕುಡಿಯುವ ನೀರು ಕೂಡ ಸಿಗಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಹಿಂದುಳಿದ ಸಮಾಜದ ದೊಡ್ಡ ನಾಯಕರು..ಅವರ ಬಗ್ಗೆ ಗೌರವವಿದೆ: ಸಚಿವ ಶ್ರೀರಾಮುಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.