ETV Bharat / entertainment

ತಮ್ಮದೇ ರಿವಾಲ್ವಾರ್​ನಿಂದ ಮಿಸ್ ಫೈರ್: ನಟ ಗೋವಿಂದ ಆಸ್ಪತ್ರೆಗೆ ದಾಖಲು - Actor Govinda - ACTOR GOVINDA

ಕಾಲಿಗೆ ಆಕಸ್ಮಿಕವಾಗಿ ಗುಂಡು ತಗುಲಿದ ಪರಿಣಾಮ ಹಿರಿಯ ನಟ ಗೋವಿಂದ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಟ ಗೋವಿಂದ
ನಟ ಗೋವಿಂದ (ANI)
author img

By ETV Bharat Karnataka Team

Published : Oct 1, 2024, 9:54 AM IST

Updated : Oct 1, 2024, 12:20 PM IST

ಮುಂಬೈ: ತಮ್ಮದೇ ರಿವಾಲ್ವಾರ್​ನಿಂದ ಆಕಸ್ಮಿಕವಾಗಿ ಫೈರ್ ಆದ ಗುಂಡು ಕಾಲಿಗೆ ತಗುಲಿ ನಟ ಮತ್ತು ಶಿವಸೇನಾ ನಾಯಕ ಗೋವಿಂದ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ಇಂದು ಬೆಳಗ್ಗೆ ಮುಂಬೈನ ತಮ್ಮ ನಿವಾಸದಲ್ಲಿ ಹಿರಿಯ ನಟ ಗೋವಿಂದ ಅವರ ಕಾಲಿಗೆ ಆಕಸ್ಮಿಕವಾಗಿ ಗುಂಡು ತಗುಲಿದೆ. ಗಾಯಗೊಂಡಿರುವ ನಟನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

ತಮ್ಮದೇ ರಿವಾಲ್ವಾರ್​ನಿಂದ ಮಿಸ್ ಫೈರ್: ನಟ ಗೋವಿಂದ ಆಸ್ಪತ್ರೆಗೆ ದಾಖಲು (ETV Bharat)

ಇಂದು ಕೋಲ್ಕತ್ತಾಗೆ ಪ್ರಯಾಣಿಸಬೇಕಿದ್ದ ಹಿನ್ನೆಲೆಯಲ್ಲಿ ತಮ್ಮ ರಿವಾಲ್ವರ್ ಅನ್ನು ಗೋವಿಂದ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಕೈಯಿಂದ ಆಕಸ್ಮಿಕವಾಗಿ ರಿವಾಲ್ವಾರ್ ಜಾರಿದ ಪರಿಣಾಮ ಗುಂಡು ಹಾರಿದೆ. ಈ ಗುಂಡು ಅವರ ಕಾಲಿಗೆ ತಗುಲಿದ್ದರಿಂದ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಕಾಲಿನಿಂದ ಗುಂಡು ಹೊರತೆಗೆಯಲಾಗಿದೆ. ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗೋವಿಂದ ಅವರ ಮ್ಯಾನೇಜರ್ ಶಶಿ ಸಿನ್ಹಾ ಸ್ಪಷ್ಟಪಡಿಸಿದ್ದಾರೆ.

ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಚೆನ್ನೈ ಅಪೋಲೋ ಆಸ್ಪತ್ರೆಗೆ ದಾಖಲಾದ ಸೂಪರ್​ ಸ್ಟಾರ್​ ರಜನಿಕಾಂತ್​ - Rajinikanth Hospitalised

Last Updated : Oct 1, 2024, 12:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.