ETV Bharat / state

ಜಿಪಂ ಸಾಮಾನ್ಯ ಸಭೆ.. ಕುಡಿಯುವ ನೀರಿಗಾಗಿ ಸದಸ್ಯರ ಆಗ್ರಹ - ಜೆ.ಎಚ್​.ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾ ಪಂಚಾಯತ್ ಸಾಮಾನ್ಯ  ಸಭೆ

ಕೊಪ್ಪಳದ ಜಿಲ್ಲಾ ಪಂಚಾಯತ್​ನಲ್ಲಿ ಇಂದು ಸಾಮಾನ್ಯ ಸಭೆ ಜರುಗಿತು. ಕುಡಿಯುವ ನೀರಿಗಾಗಿ ಸದಸ್ಯರು ಪಟ್ಟು ಹಿಡಿದರು.

Z.P. General Meeting
ಕೊಪ್ಪಳ ಜಿಲ್ಲಾ ಪಂಚಾಯತ್​ ಸಾಮಾನ್ಯ ಸಭೆ
author img

By

Published : Dec 10, 2019, 8:07 PM IST

ಕೊಪ್ಪಳ: ನಗರದ ಜೆ ಹೆಚ್‌ ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ನಡೆಯಿತು.

ಜಿಲ್ಲಾ ಪಂಚಾಯತ್​ ಸಾಮಾನ್ಯ ಸಭೆ..

ಸಭೆಯಲ್ಲಿ ಕುಡಿಯುವ ನೀರು ಪೂರೈಕೆ ಹಾಗೂ ಆರ್‌ಒ ಪ್ಲಾಂಟ್​​ ಕುರಿತಂತೆ ತೀವ್ರ ಚರ್ಚೆ ನಡೆದಿದೆ. ಆರ್‌ಒ ಪ್ಲಾಂಟ್​​ ನಿರ್ಮಾಣ ಮಾಡಲು ಲಕ್ಷಾಂತರ ರೂಪಾಯಿ ಖರ್ಚಾಗಿದೆ. ಆದರೂ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆಯಾಗಿಲ್ಲ. ಅತೀ ಶೀಘ್ರದಲ್ಲೇ ಕುಡಿಯುವ ನೀರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾ ಪಂಚಾಯತ್​ ಸದಸ್ಯರುಗಳು ಆಗ್ರಹಿಸಿದರು.

ಈ ಬಗ್ಗೆ ಪ್ರತಿಕ್ರಯಿಸಿದ ಜಿಪಂ ಅಧ್ಯಕ್ಷ ವಿಶ್ವನಾಥ್​ ರೆಡ್ಡಿ ಅವರು, ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದರು.

Intro:

Body:ಕೊಪ್ಪಳ:- ಜಿಲ್ಲಾ ಪಂಚಾಯತ್ ನ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ನಡೆಯಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿಶ್ವನಾಥರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಡಿಯುವ ನೀರು ಪೂರೈಕೆ ಸಂಬಂಧಿಸಿದಂತೆ ಕೆಲಸ ಮಾಡದ ಏಜೆನ್ಸಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸದಸ್ಯರು ಆಗ್ರಹಿಸಿದರು. ಪ್ರತಿ ಸಭೆಯಲ್ಲೂ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುವುದಿಲ್ಲ. ಮೊದಲು ಮಾಹಿತಿ ನೀಡಿ, ನಂತರ ಸಭೆ ನಡೆಸಿ ಎಂದು ಸದಸ್ಯ ಹನುಮಂತಗೌಡ ಚಂಡೂರು ತಾಕೀತು ಮಾಡಿದರು. ಇನ್ನು
ಸದಸ್ಯ ರಾಮಣ್ಣ ಚೌಡ್ಕಿ ಆರ್.ಓ. ಪ್ಲಾಂಟ್ ಗಳ ಕುರಿತಂತೆ ವಿಷಯ ಪ್ರಸ್ತಾಪಿಸಿದಾಗ ಸದಸ್ಯರಾದ ಗವಿಸಿದ್ದಪ್ಪ ಕರಡಿ, ಕೆ.‌ ಮಹೇಶ ಧ್ವನಿಗೂಡಿಸಿದರು. ಜಿಲ್ಲೆಯಲ್ಲಿ ಆರ್ ಓ ಪ್ಲಾಂಟ್ ಗಳು ಕಾರ್ಯ ನಿರ್ವಹಿಸುತ್ತಿಲ್ಲ. ಆರ್ ಓ ಪ್ಲಾಂಟ್ ನಿರ್ಮಾಣ ಮಾಡಲು ಲಕ್ಷಾಂತರ ರುಪಾಯಿ ಖರ್ಚಾಗಿದೆ. ಜನರಿಗೆ ನೀರು ಸಿಗುತ್ತಿಲ್ಲ. ಆರ್ಓ ಪ್ಲಾಂಟ್ ನಿರ್ಮಾಣ ಏಜೆನ್ಸಿ ಪಡೆದ ಏಜೆನ್ಸಿಗಳಿಗೆ ಹಣ ಪಾವತಿಯಾಗಿದೆ. ಆರ್ ಓ ಪ್ಲಾಂಟ್ ಗಳು ಕಾರ್ಯನಿರ್ವಹಿಸುತ್ತಿಲ್ಲ. ಈಗ ಆ ಆರ್ ಓ ಪ್ಲಾಂಟ್ ಗಳ ನಿರ್ವಹಣೆಯನ್ನು ಗ್ರಾಮ ಪಂಚಾಯತ್ ಗಳಿಗೆ ವಹಿಸಲು ಚಿಂತನೆ ನಡೆದಿದೆ. ದುರಸ್ಥಿಯಲ್ಲಿರುವ ಆರ್ ಓ ಪ್ಲಾಂಟ್ ಗಳನ್ನು ಗ್ರಾಮ ಪಂಚಾಯತ್ ನವರಿಗೆ ಹೇಗೆ ಹ್ಯಾಂಡೋವರ್ ಮಾಡ್ತಿರಿ ಎಂದು ಸದಸ್ಯ ರಾಮಣ್ಣ ಚೌಡ್ಕಿ ಪ್ರಶ್ನಿಸಿದರು. ಅಲ್ಲದೆ, ಆರ್ ಓ ಪ್ಲಾಂಟ್ ನಿರ್ಮಾಣದ ಏಜೆನ್ಸಿ ಪಡೆದು ಸರಿಯಾಗಿ ನಿರ್ಮಾಣ ಮಾಡದ ಏಜೆನ್ಸಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ವಿಶ್ವನಾಥರಡ್ಡಿ ಈ ಸಂದರ್ಭದಲ್ಲಿ ಹೇಳಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.