ಗಂಗಾವತಿ: ಹೊಸ ವರ್ಷಾಚರಣೆ ನೆಪದಲ್ಲಿ ಪುಂಡರ ಗುಂಪೊಂದು ಖಾಸಗಿ ಕಾಲೇಜಿನ ಸಿಸಿ ಕ್ಯಾಮರಕ್ಕೆ ಕಲ್ಲು ಹೊಡೆದು ಹಾನಿ ಮಾಡಿರುದ ಘಟನೆ ಬೆಳಕಿಗೆ ಬಂದಿದೆ.
ನಗರದ ಹೊರ ವಲಯದಲ್ಲಿರುವ ಸ್ಫೂರ್ತಿ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕಾಲೇಜಿನ ಹಿಂಭಾಗದಲ್ಲಿ ಹೊಸವರ್ಷ ಆಚರಣೆಗಾಗಿ ಹತ್ತು ಹುಡುಗರ ಗುಂಪು ಅಡುಗೆ ಮಾಡಿಕೊಂಡಿದೆ. ಬಳಿಕ ಗುಂಡು-ತುಂಡಿನ ಸಮಾರಾಧನೆ, ನೃತ್ಯ, ಮೋಜು ಮಸ್ತಿ ಮಾಡಿದ್ದಾರೆ. ಈ ಘಟನೆಗಳು ಸಿಸಿ ಕ್ಯಾಮರದಲ್ಲಿ ಸೆರೆಯಾಗಿವೆ ಎಂದು ಕಲ್ಲು ಹೊಡೆದು ಹಾನಿ ಮಾಡಿದ್ದಾರೆ. ಸಿಸಿ ಟಿವಿಯಲ್ಲಿನ ದೃಶ್ಯಾವಳಿಗಳನ್ನು ಪರಿಶೀಲಿಸಿದ ಕಾಲೇಜಿನ ಸಿಬ್ಬಂದಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.