ETV Bharat / state

ಕೊಪ್ಪಳ: ಕೋವಿಡ್​ ಕಾಲದಲ್ಲಿ ಸ್ಯಾನಿಟೈಸ್ ಮಾಡಿ ಗಮನಸೆಳೆದ ಯುವಕ! - ಕೊಪ್ಪಳದಲ್ಲಿ ಉಚಿತವಾಗಿ ಮನೆಗಳಿಗೆ ಸ್ಯಾನಿಟೈಸ್​

ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ಮರ್ದಾನವಲಿ ಎಂಬ ಯುವಕ ಸೋಂಕಿತರ ಮನೆಗಳಿಗೆ ತೆರಳಿ ಸ್ಯಾನಿಟೈಸ್ ಮಾಡುವ ಮೂಲಕ ಸಾಮಾಜಿಕ ಸೇವೆ ಮಾಡುತ್ತಿದ್ದಾನೆ.

young-man-who-sanitize-the-corona-patients-house-in-koppala
ಕೋವಿಡ್​ ಸೋಂಕಿತರ ಮನೆಗೆ ಸ್ಯಾನಿಟೈಸ್​ ಮಾಡುತ್ತಿರುವುದು
author img

By

Published : May 17, 2021, 7:07 PM IST

ಕೊಪ್ಪಳ: ಕೊರೊನಾ ಸೋಂಕಿನ 2ನೇ‌ ಅಲೆ ವ್ಯಾಪಕವಾಗಿ ಹರಡುತ್ತಿದೆ. ಸಂಕಷ್ಟದಲ್ಲಿರುವ ಜನರಿಗೆ ಅನೇಕರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಅದೇ ರೀತಿ ನಗರದ ಇಲ್ಲೊಬ್ಬ ಯುವಕ ಸೋಂಕಿತರ ಮನೆಗೆ ತೆರಳಿ ಉಚಿತವಾಗಿ ಫಾಗ್ ಸ್ಯಾನಿಟೈಸ್​ ಮಾಡುತ್ತಿದ್ದಾನೆ.

ತಾಲೂಕಿನ ಹುಲಗಿ ಗ್ರಾಮದ ಮರ್ದಾನವಲಿ ಎಂಬ ಯುವಕ ಸೋಂಕಿತರ ಮನೆಗಳಿಗೆ ತೆರಳಿ ಸ್ಯಾನಿಟೈಸ್ ಮಾಡುವ ಮೂಲಕ ಸಾಮಾಜಿಕ ಸೇವೆ ಮಾಡುತ್ತಿದ್ದಾನೆ. ಆಟೋ ಮೊಬೈಲ್ ಶಾಪ್ ಹೊಂದಿರುವ ಯುವಕ ಮರ್ದಾನವಲಿ ತನ್ನ ಸಾಮಾಜಿಕ ಸೇವೆ ಹಿನ್ನೆಲೆ ಮಾತನಾಡಿ, ’’ಕೊರೊನಾ ಸೋಂಕು ನಿಯಂತ್ರಣ ಮಾಡುವ ಹಿನ್ನೆಲೆ ಈಗ ಲಾಕ್​ಡೌನ್​ ಜಾರಿಯಲ್ಲಿದೆ. ಅಲ್ಲದೇ ಈಗ ಅನೇಕ ಜನರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ತಾನು ಏನಾದರೂ ಸಮಾಜ ಸೇವೆ ಮಾಡಬೇಕು ಎಂಬ ಕಾರಣಕ್ಕೆ ಸೋಂಕಿತರ ಮನೆಗಳಿಗೆ ಸ್ಯಾನಿಟೈಸ್ ಮಾಡುವುದಕ್ಕೆ ನಿರ್ಧಾರ ಮಾಡಿ ಸೇವೆಗೆ ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.

ಕೋವಿಡ್​ ಸೋಂಕಿತರ ಮನೆಗೆ ತೆರಳಿ ಸ್ಯಾನಿಟೈಸ್​ ಮಾಡುತ್ತಿರುವ ಯುವಕ ಮರ್ದಾನವಲಿ ಮಾತನಾಡಿದ್ದಾರೆ

ಸೋಂಕಿತರು ಕರೆ ಮಾಡಿ ತಿಳಿಸಿದರೆ ಆ ಮನೆಗೆ ತೆರಳಿ ಫಾಗಿಂಗ್ ಸ್ಯಾನಿಟೈಸ್ ಮಾಡುತ್ತೇನೆ. ಈಗಾಗಲೇ ಸ್ಥಳೀಯವಾಗಿ ಹಾಗೂ ಕೊಪ್ಪಳ ಸೇರಿದಂತೆ ಅನೇಕ ಕಡೆ ಉಚಿತವಾಗಿ ಫಾಗಿಂಗ್ ಸ್ಯಾನಿಟೈಸ್ ಮಾಡಿದ್ದೇನೆ. ಸುಮಾರು 40 ಕ್ಕೂ ಹೆಚ್ಚು ಮನೆಗಳಿಗೆ ಸ್ಯಾನಿಟೈಸ್ ಮಾಡಿದ್ದೇನೆ. ಸ್ಯಾನಿಟೈಸ್ ಮಾಡಿದರೆ ನಾನು ಹಣ ಪಡೆಯುವುದಿಲ್ಲ. ಇದು ನನ್ನಿಂದಾಗುವ ಸಮಾಜ ಸೇವೆ. ಆದರೆ, ಕೆಲವರು ಸ್ಯಾನಿಟೈಸ್​ಗಾದರೂ ಉಪಯೋಗವಾಗಲಿ ಎಂದು ಹಣ‌ ನೀಡುತ್ತಾರೆ. ಯಾರೇ ಕರೆ ಮಾಡಿ ತಿಳಿಸಿದರೂ ಸಹ ನಾನು ಅಲ್ಲಿಗೆ ಹೋಗಿ ಉಚಿತವಾಗಿ ಫಾಗಿಂಗ್ ಸ್ಯಾನಿಟೈಸ್ ಮಾಡುತ್ತೇನೆ ಎಂದು ಯುವಕ ಮರ್ದನವಲಿ ತಿಳಿಸಿದ್ದಾರೆ.

ಓದಿ: ಅನಗತ್ಯವಾಗಿ ಅರ್ಜಿ ಸಲ್ಲಿಸಿದರೆ ದಂಡ ವಿಧಿಸಬೇಕಾಗುತ್ತದೆ: ಹೈಕೋರ್ಟ್ ಎಚ್ಚರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.