ಕೊಪ್ಪಳ: ಯುವಕನೊಬ್ಬ ಅಪಘಾತದಲ್ಲಿ ಗಾಯಗೊಂಡವರನ್ನು ತನ್ನ ಬೈಕ್‌ನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಘಟನೆ ಕೊಪ್ಪಳ ತಾಲೂಕಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಅಳವಂಡಿ ಗ್ರಾಮದ ಪ್ರತಾಪ್ ಭಾವಿಹಳ್ಳಿ ಗಾಯಾಳುಗಳನ್ನು ಬೈಕ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದ ಯುವಕ.
ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಹೊರ ವಲಯದಲ್ಲಿ ರಸ್ತೆ ಸರಿಯಿಲ್ಲದ ಕಾರಣ ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು ಸವಾರರು ಬಿದ್ದು ತೀವ್ರ ಗಾಯಗೊಂಡಿದ್ದರು ಆತ ತಿಳಿಸಿದ್ದಾನೆ.
ಈ ರಸ್ತೆ ಸಂಪೂರ್ಣ ಹಾಳಾಗಿದ್ದು ದುರಸ್ತಿ ಮಾಡುತ್ತಿಲ್ಲ. ಹಾಳಾಗಿರುವ ರಸ್ತೆಯಿಂದ ಇಂತಹ ಅಪಘಾತಗಳು ನಡೆಯುತ್ತಿವೆ. ಹೀಗಿದ್ದರೂ ಸಾರಿಗೆ ಸಚಿವರು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಯುವಕ ವಿಡಿಯೋದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.