ETV Bharat / state

ಅಪಘಾತದಲ್ಲಿ ಮೃತಪಟ್ಟ ಕೊಪ್ಪಳದ ಯುವಕನ ಅಂಗಾಗ ದಾನ: ನಾಲ್ವರ ಬಾಳಿಗೆ ಬೆಳಕಾದ ಮಲ್ಲಪ್ಪ - ಮಲ್ಲಪ್ಪ ಉದ್ದಾರ

ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ಯುವಕನ ಅಂಗಾಗಗಳನ್ನು ದಾನ ಮಾಡಲಾಗಿದೆ.

donater
ದಾನಿ
author img

By ETV Bharat Karnataka Team

Published : Jan 4, 2024, 1:32 PM IST

ಕೊಪ್ಪಳ : ವಿಧಿಯಾಟಕ್ಕೆ ಯುವಕನೋರ್ವ ಬಲಿಯಾಗಿದ್ದು, ಅಂಗಾಗ ಮಾಡುವ ಮೂಲಕ ನಾಲ್ಕು ಜನರ ಜೀವನಕ್ಕೆ ಆಸರೆಯಾಗಿರುವ ಘಟನೆ ಕೊಪ್ಪಳದಲ್ಲಿ ಜರುಗಿದೆ.

ಘಟನೆ ವಿವರ : ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯನಾಗಿದ್ದ ಮಲ್ಲಪ್ಪ ಉದ್ದಾರ (36) ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದರು. ಕಳೆದ ಡಿ. 24 ರಂದು ಕೊಪ್ಪಳ ಜಿಲ್ಲೆಯ ವಿರಾಪೂರ ಗ್ರಾಮದ ಬಳಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಲ್ಲಪ್ಪನ್ನು ಕೂಡಲೇ ಮೊದಲು ಜಿಲ್ಲಾ ಆಸ್ಪತ್ರೆ ನಂತರ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಿಸಲಾಯಿತು. ಆದರೆ, ಆತನ ಮೆದುಳು ನಿಷ್ಕ್ರಿಯಗೊಂಡಿರುವುದರಿಂದ ಚಿಕಿತ್ಸೆಗೆ ಸ್ಪಂದನೆ ದೊರೆಯುತ್ತಿಲ್ಲ ಎಂದು ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದರು.

ಅಂಗಾಗ ದಾನ: ಅಪಘಾತದಲ್ಲಿ ಮೆದುಳು ನಿಷ್ಕ್ರಿಯ ಆಗಿರುವುದರಿಂದ ಅವರ ಸಹೋದರರಾದ ಮಂಜುನಾಥ ಮತ್ತು ಶೇಖರಪ್ಪ ಅವರು ಕುಟುಂಬದವರೊಂದಿಗೆ ಚರ್ಚೆ ಮಾಡಿ ಅಂಗಾಗ ದಾನ ಮಾಡುವ ನಿರ್ಧಾರ ಮಾಡಿದ್ದಾರೆ. ಯುವಕನ ಕಿಡ್ನಿ, ಲಿವರ್, ಹೃದಯ ಸೇರಿದಂತೆ ಇನ್ನಿತರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇದರಿಂದ ನಾಲ್ವರ ಜೀವನಕ್ಕೆ ಆಸರೆಯಾಗಿದೆ.

ಇನ್ನೊಂದು ತಿಂಗಳಲ್ಲಿ ಇತ್ತು ಮದುವೆ: ಕಿನ್ನಾಳ ಗ್ರಾಮದ ಗ್ರಾ.ಪಂ 6 ನೇ ವಾರ್ಡನ್​ ಸದಸ್ಯನಾಗಿದ್ದ ಮಲ್ಲಪ್ಪ ಉದ್ದಾರ ಇನ್ನೊಂದು ತಿಂಗಳಲ್ಲಿ ಮದುವೆಯಾಗುವವರಿದ್ದರು. ಈಗಾಗಲೇ ಮದುವೆ ನಿಶ್ಚಯವಾಗಿತ್ತು. ಮದುವೆ ದಿನಾಂಕ ನಿಗದಿ ಮಾಡಿ ಮದುವೆ ಮಾಡುವ ಸಂಭ್ರಮದಲ್ಲಿ ಮನೆಯವರಿದ್ದರು. ವಿಧಿಯಾಟಕ್ಕೆ ಯುವಕ ಬಲಿಯಾಗಿ ಕುಟುಂಬದವರಲ್ಲಿ ದುಃಖ ಮಡುಗಟ್ಟಿದೆ.

ಪಾರ್ಥಿವ ಶರೀರ ಮೆರವಣಿಗೆ: ಯುವಕನ ಕುಟುಂಬಸ್ಥರು ಅಂಗಾಗ ದಾನ ಮಾಡಿದ್ದಾರೆ ಎನ್ನುವ ಸುದ್ದಿ ಹರಡುತಿದ್ದಂತೆ ಈ ಬಗ್ಗೆ ಕಿನ್ನಾಳ ಗ್ರಾಮಸ್ಥರೆಲ್ಲ ಕೊಂಡಾಡಿದ್ದಾರೆ. ಅಲ್ಲದೇ ಬುಧವಾರ ಸಂಜೆ ಗ್ರಾಮಕ್ಕೆ ಮಲ್ಲಪ್ಪ ಉದ್ದಾರ ಪಾರ್ಥಿವ ಶರೀರ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಮೆರವಣಿಗೆ ನಡೆಸಿದರು. ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿ ಘೋಷಣೆ ಕೂಗುತ್ತ ಸ್ಮಶಾನದವರೆಗೂ ಮೆರವಣಿಗೆ ತೆರಳಿದರು.

ಇದನ್ನೂ ಓದಿ : ಮೈಸೂರು: ಅಪಘಾತದಿಂದ ಇಬ್ಬರು ಸಾವು, 10 ಮಂದಿಗೆ ಜೀವದಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.