ಗಂಗಾವತಿ: ಒಂದೇ ಗ್ರಾಮದ 21 ವರ್ಷದ ಯುವಕ ಮತ್ತು 19 ವಯಸ್ಸಿನ ಯುವತಿ ಪ್ರತ್ಯೇಕ ಪ್ರಕರಣಗಳಲ್ಲಿ ನಾಪತ್ತೆಯಾದ ಘಟನೆ ಕನಕಗಿರಿ ಪೊಲೀಸ್ ಠಾಣೆಯ ಕನಕಗಿರಿ ಪಟ್ಟಣದ 6 ಮತ್ತು 12ನೇ ವಾರ್ಡ್ನಲ್ಲಿ ನಡೆದಿದೆ.
ಪಟ್ಟಣ ಪಂಚಾಯಿತಿಯ ಜ್ಯೋತಿ ಅಮರೇಶ ಕೊಪ್ಪಳ ಎಂಬ ಯುವತಿ, ಅಜ್ಜಿ ತಿಪ್ಪಮ್ಮ ಅವರ ಮನೆಗೆ ಹೋಗಿ ಬರುವುದಾಗಿ ಹೇಳಿ ಡಿ.12ರಂದು ತೆರಳಿದ್ದು ಮನೆಗೆ ವಾಪಸ್ ಬಂದಿಲ್ಲ. ಈ ಬಗ್ಗೆ ಯುವತಿಯ ತಾಯಿ ಶಾರದಮ್ಮ ಅಮರೇಶಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.
ಇದೇ ಗ್ರಾಮದ 12ನೇ ವಾರ್ಡ್ನ ಇಮಾಮ್ ಸಾಬ ವಲೀಸಾಬ ಜೂಲಿಕೇರಿ ಎಂಬ ಯುವಕ, 5ರಂದು ಪಂಚರ್ ಶಾಪ್ಗೆ ಹೋಗಿ ಬರುತ್ತೇನೆ ಎಂದು ಹೋದವನು ಮರಳಿ ಮನೆಗೆ ಬಂದಿಲ್ಲ ಎಂದು ನಾಪತ್ತೆಯಾದ ಯುವಕನ ತಂದೆ ವಲಿಸಾಬ್ ಇಮಾಮ್ಸಾಬ ದೂರು ನೀಡಿದ್ದಾರೆ.
ಓದಿ: ಕಣ್ತಪ್ಪಿನಿಂದ ಆದ ಪ್ರಮಾದ..ಕ್ಷಣಾರ್ಧದಲ್ಲಿಯೇ ಹಾರಿಹೋಯ್ತು ಯುವಕನ ಪ್ರಾಣಪಕ್ಷಿ