ಕುಷ್ಟಗಿ(ಕೊಪ್ಪಳ): ಯೋಗ ದಿನದ ಪ್ರಯುಕ್ತ, ಇಂದು 5 ವರ್ಷದ ಬಾಲಕಿ ಆರಾಧ್ಯ ಎಸ್.ಎಂ. ಯೋಗಾಸನದ ವಿವಿಧ ಭಂಗಿಗಳ ಮೂಲಕ ತನ್ನ ಪ್ರತಿಭೆಯನ್ನು ಹೊರಹಾಕಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ.
ಹೌದು, 6ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಇಲ್ಲಿನ ಪತಂಜಲಿ ಯೋಗ ಸಮಿತಿ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ 5 ವರ್ಷದ ಬಾಲಕಿ ಎಲ್ಲರ ಗಮನ ಸೆಳೆದಿದ್ದಾಳೆ.
ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಆರಾಧ್ಯ ಎಸ್.ಎಂ. ತಮ್ಮ ದೊಡ್ಡಮ್ಮ ಶಶಿಕಲಾ ದಾವಣಗೇರ ಅವರೊಂದಿಗೆ ಆಗಮಿಸಿದ್ದಳು. ಈ ವೇಳೆ ಯೋಗಾಸನದ ವಿವಿಧ ಭಂಗಿಗಳನ್ನು ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾಳೆ.