ಕೊಪ್ಪಳ/ಗಂಗಾವತಿ: ಕೊರೊನಾ ತುರ್ತು ಕರ್ತವ್ಯದ ಮೇಲೆ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಯ ಸಿಬ್ಬಂದಿಗೆ ನಗರದ ಯಜ್ಞವಲ್ಕ್ಯ ದೇಗುಲ ಸಮಿತಿ ಹಾಗೂ ಆರ್ಯವೈಶ್ಯ ಸಮಾಜ ವತಿದಿಂದ ನಿತ್ಯ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.
ಇಡೀ ರಾಜ್ಯ ಲಾಕ್ಡೌನ್ ಆದ ಪರಿಣಾಮ ನಗರದ ಯಾವುದೇ ಹೋಟೆಲ್, ಚಹಾದಂಗಡಿ ತೆರೆಯುತ್ತಿಲ್ಲ. ಪರಿಣಾಮ ಕರ್ತವ್ಯನಿರತ ಸಿಬ್ಬಂದಿಗೆ ಊಟ, ತಿಂಡಿ, ಚಹಾ ಹಾಗೂ ನೀರಿನಂತಹ ಕನಿಷ್ಠ ಸೌಲಭ್ಯಕ್ಕೆ ಪರದಾಡುವ ಸನ್ನಿವೇಶ ನಿರ್ಮಾಣವಾಗುತ್ತಿದೆ. ಇದನ್ನು ಮನಗಂಡ ಉಭಯ ಸಮಾಜಗಳ ಯವಕರು, ಪೊಲೀಸ್, ಗೃಹ ರಕ್ಷಕ ದಳ, ಪತ್ರಕರ್ತರು, ಕಂದಾಯ, ಪೌರಕಾರ್ಮಿಕರು, ಪಂಚಾಯತ್ ರಾಜ್ ಇಲಾಖೆ, ಭಿಕ್ಷುಕರು, ನಿರ್ಗತಿಕರು ಹೀಗೆ ನಾನಾ ವಲಯದ ನೌಕರರು, ಜನರನ್ನ ಗುರುತಿಸಿ ಊಟ ನೀಡುವ ಕೆಲಸ ಮಾಡುತ್ತಿದ್ದಾರೆ.
ಯಜ್ಞವಲ್ಕ್ಯ ಸಮಿತಿ ನಗರಕ್ಕೆ ಒತ್ತು ಕೊಟ್ಟರೆ, ಆರ್ಯವೈಶ್ಯ ಸಮಾಜದವರು ಗ್ರಾಮೀಣ ಭಾಗದಲ್ಲಿನ ಆಶಾ ಕಾರ್ಯಕರ್ತೆಯರು, ಪಂಚಾಯಿತಿ ಸಿಬ್ಬಂದಿ ಸೇರಿದಂತೆ ಅಗತ್ಯ ಇರುವ ಜನರನ್ನು ಗುರುತಿಸಿ ಆಹಾರ ವಿತರಿಸುತ್ತಿದೆ.